ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಗಟಿನ ಮೂಲಕ ಜನಪದರ ಚಾತುರ್ಯ

Parashurama
Updated On : 24 Feb 2013, 11:38 am

ಹಾಸನ: ಜನಪದರು ಕಥೆ, ಒಗಟು, ಗಾದೆ ಮುಂತಾದ ಹತ್ತು ಹಲವು ರೂಪದಲ್ಲಿ ಹಾಸ್ಯವನ್ನು ಪ್ರಸ್ತುತಿಗೊಳಿಸಿ  ತಮ್ಮ ಚಾತುರ್ಯ ಪ್ರದರ್ಶಿಸಿದ್ದಾರೆ ಎಂದು ಜಾನಪದ ವಿದ್ವಾಂಸ  ಮೇಟಿಕೆರೆ ಹಿರಿಯಣ್ಣ ತಿಳಿಸಿದರು.
  ನಗರದ ಶ್ರೀರಂಗ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಆಯೋಜಿಸಿದ್ದ ದತ್ತಿ ಉಪನ್ಯಾಸ ಮಾಲಿಕೆಯ ಸಮಾರೋಪದಲ್ಲಿ ಶಂಭುಗೌಡ ಪುರುಷೋತ್ತಮ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಜನಪದ ಸಾಹಿತ್ಯದಲ್ಲಿ ಹಾಸ್ಯ ಎಂಬ ವಿಷಯ ಕುರಿತು ಅವರು ಮಾತನಾಡಿದರು.
 ಜನಪದವು ಭೂತ ಮತ್ತು ಭವಿಷ್ಯದ ಕೊಂಡಿಯಾಗಿದ್ದು, ವರ್ತಮಾನದ ನಾವು ಅದನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದು  ಹೇಳಿದರು.
  ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್ ಮಾತನಾಡಿ, ಪಾಶ್ಚಾತ್ಯ  ಸಂಸ್ಕೃತಿ ದಾಳಿಯಿಂದಾಗಿ ನಮ್ಮ ಜನಪದ ಅಳಿಯುವ ಸ್ಥಿತಿ ತಲುಪಿದ್ದು, ನಮ್ಮ ಆಚರಣೆಗಳನ್ನು  ಉಳಿಸಿಕೊಳ್ಳುವ ಮೂಲಕ ಜನಪದವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಲೇಖಕ ಗೊರೂರು ಶಿವೇಶ್ ಮಾತನಾಡಿ, ಇಂದು ಮನರಂಜನೆ, ಸಂತಸಕ್ಕಾಗಿ ಪ್ರವಾಸ, ಮೋಜು, ನಗೆ ಹಬ್ಬಗಳ ಕಡೆ ಮುಖ ಮಾಡಿದರೆ ಜನಪದರು ತಾವು ಇರುವಲ್ಲಿಯೇ ಸಂತಸ ಪಡೆದು, ತಾವು ಆಚರಿಸುವ  ಹಬ್ಬ, ಮದುವೆಗಳ ಆಚರಣೆಗಳಲ್ಲಿ ವಿನೋದ, ಸಂತೋಷ ಕಂಡುಕೊಂಡವರು ಎಂದು ತಿಳಿಸಿದರು. ಗಾಯಕ ಬಿ.ಡಿ.ಶಂಕರೇಗೌಡ ಜನಪದ ಗೀತೆ ಹಾಡಿದರು. ಶ್ರೀರಂಗ ಬಿಎಡ್ ಸಂಸ್ಥೆಯ ಪ್ರಾಂಶುಪಾಲ ಡಿ.ಎಸ್. ನವೀನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಧ್ಯಾಪಕ ನಿಂಗೇಗೌಡ ಇದ್ದರು. ಎಚ್.ಆರ್. ಮಹಾದೇವಿ ಪ್ರಾರ್ಥಿಸಿದರು. ನಳಿನಾಕ್ಷಿ ಸ್ವಾಗತಿಸಿದರು. ಎಚ್.ಜಿ.ಸ್ಮಿತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement