ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಸ್ಮೋಫೆಸ್ಟ್ ಸ್ಪರ್ಧೆ ಉದ್ಘಾಟನೆ

Parashurama
Updated On : 24 Feb 2013, 11:38 am

ಹಾಸನ: ನಗರದ ಹೊಸ ಬಸ್ ನಿಲ್ದಾಣ ರಸ್ತೆಯ ಬಳಿ ಇರುವ ಸಂತಫಿಲೋಮಿನಾ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಹಿಳೆಯರಿಗಾಗಿಯೇ ಹಮ್ಮಿಕೊಳ್ಳಲಾಗಿದ್ದ (ಮಾರ್ಕೆಟಿಂಗ್ ಉತ್ಸವ) ಕಾಸ್ಮೋಫೆಸ್ಟ್ 2ಕೆ 13 ಸ್ಪರ್ಧಾ ಕಾರ್ಯಕ್ರಮವನ್ನು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ  ಡಾ. ಐ.ಎಂ. ಮೋಹನ್ ಉದ್ಘಾಟಿಸಿದರು.
  ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಪ್ರೀತಿಸುವಂತೆ ಕರೆ ನೀಡಿದರು. ಯಾವುದೇ ಒಂದು ವಸ್ತುವಿನ ಬೇಡಿಕೆಗೆ ಮುಖ್ಯವಾಗಿ ಮಾರ್ಕೆಟಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಸ್ಪರ್ಧಾ ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ವಸ್ತು ನೀಡುವುದು ಮುಖ್ಯ.
  ವಾಣಿಜ್ಯ ಮತ್ತು ಮಾರ್ಕೆಟಿಂಗ್ ವಿದ್ಯಾರ್ಥಿಗಳು ಇದನ್ನು ಅರಿಯುವಂತೆ ಸಲಹೆ ನೀಡಿದರು. ಸಂತಫಿಲೋಮಿನಾ ಸಂಸ್ಥೆ ಕಾಲೇಜಿನ ಪ್ರಾಂಶುಪಾಲೆ ಜಾಸ್ಮೀನ್, ಸಂಚಾಲಕ ಮರ್ಸಲಿನ್ ವೇಗಸ್, ಸಿಸ್ಟರ್ ಎವಿನ್ ಇನ್ನೂ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement