ಟೋಪಿವಾಲ ಧ್ವನಿ ಸುರುಳಿ ಬಿಡುಗಡೆ
ಹಾಸನ: ನಗರದ ಹರ್ಷಮಹಲ್ ರಸ್ತೆಯಲ್ಲಿರುವ ಜಿಲ್ಲಾ ರಿಯಲ್ಸ್ಟಾರ್ ಉಪೇಂದ್ರ ಅಭಿಮಾನಿ ಸಂಘದ ಕಚೇರಿಯಲ್ಲಿ ಉಪೇಂದ್ರ ಅಭಿನಯದ ಟೋಪಿವಾಲ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು.
ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ.ಲೋಕೇಶ್ ಧ್ವನಿ ಸುರುಳಿ ಬಿಡುಗಡೆಗೊಳಿಸಿದರು. ಜಿಲ್ಲಾ ಕಾರ್ಯದರ್ಶಿ ಎಚ್.ಸಿ.ಕಾರ್ತಿಕ್, ಜಿಲ್ಲಾ ವ್ಯವಸ್ಥಾಪಕ ನವೀನ್ ದೇವಾಂಗನ್, ಸದಸ್ಯ ಸುಮಂತ್, ಮಂಜು, ಮಹದೇವ್, ಸುನಿಲ್ ಭಾಗವಹಿಸಿದ್ದರು.