ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಹಸೀಲ್ದಾರ್‌ಚಿದಾನಂದ ಅಧಿಕಾರ ಸ್ವೀಕಾರ

Parashurama
Updated On : 24 Feb 2013, 11:29 am

ಗುಂಡ್ಲುಪೇಟೆ: ಪಟ್ಟಣದ ನೂತನ ತಹಸೀಲ್ದಾರ್ ಆಗಿ ಎನ್.ಎಸ್. ಚಿದಾನಂದ ಅವರು ಶುಕ್ರವಾರ ಸಂಜೆ ಹೆಚ್ಚುವರಿ  ತಹಸೀಲ್ದಾರ್ ಸಿದ್ದಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ತಹಸೀಲ್ದಾರ್ ಆಗಿ ಕೆಲಸ ನಿರ್ವಹಿಸಿದ್ದ ಅವರನ್ನು ಸರ್ಕಾರ ಪಟ್ಟಣದ  ದಂಡಾಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಅಧಿಕಾರ ಸ್ವೀಕರಿಸಿದ ಎನ್.ಎಸ್.ಚಿದಾನಂದ ಅವರು ಮಾತನಾಡಿ, ತಾಲೂಕು ಕೇರಳ ರಾಜ್ಯದ ಗಡಿಯಲ್ಲಿದ್ದು,  ಕೆಲಸ ಮಾಡಲು ಸಾಕಷ್ಟು ಅವಕಾಶವಿದೆ. ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತದೆ. ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement