ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮನೆ ಕಟ್ಟಲು ನಾಲೆ ಕಲ್ಲುಗಳನ್ನೇ ಕಿತ್ತ ಭೂಪರು!

Parashurama
Updated On : 24 Feb 2013, 9:43 am

ಹೊಳೆನರಸೀಪುರ:  ಆಶ್ರಯ ಮನೆ ಕಟ್ಟುವ ಸಲುವಾಗಿ ತೆವಡಳ್ಳಿ ಸಮೀಪದ ನಾಲೆಯ ಕಲ್ಲುಗಳನ್ನೇ ಕಿತ್ತು ಅವುಗಳನ್ನು 2 ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಗ್ರಾಮಾಂತರ ಠಾಣೆ ಪೋಲಿಸರು ಅವನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಕಳೆದ ತಿಂಗಳು ಶಾಸಕ ರೇವಣ್ಣ ತೆವಡಳ್ಳಿ ಗ್ರಾಮದ ಕೆಲವರಿಗೆ ಆಶ್ರಯ ಮನೆ ಹಕ್ಕು ಪತ್ರ ವಿತರಿಸಿದ್ದರು. ಮನೆ ಕಟ್ಟಡ ನಿರ್ಮಾಣದ ಅಡಿಗಲ್ಲಿಗಾಗಿ ಗ್ರಾಮ ಸಮೀಪದ ನಾಲೆ ಕಲ್ಲುಗಳನ್ನು ಕಿತ್ತು ಅವುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಟ್ರ್ಯಾಕ್ಟರ್ ವಶಪಡಿಸಿಕೊಂಡು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement