ಯಾರಿಗೂ ಬೇಡ ರೈತ ವರ್ಗ
ಚನ್ನರಾಯಪಟ್ಟಣ: ದೇಶದಲ್ಲಿ ಅತ್ಯಂತ ದುಡಿಮೆಯ ವರ್ಗವೆಂದರೆ ರೈತರಾಗಿದ್ದು, ಆದರೆ ಅವರಿಂದು ಯಾರಿಗೂ ಬೇಡವಾದ ಸ್ಥಿತಿಗೆ ಬಂದಿದ್ದಾರೆಂದು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಬೋರಲಿಂಗಯ್ಯ ವಿಷಾದಿಸಿದರು. ತಾಲೂಕಿನ ಅಮರಗಿರಿ ಚಿಕ್ಕೋನಹಳ್ಳಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿ ಪಟ್ಟಣದ ಜನತೆಗೆ ಹಳ್ಳಿಗಳಿಂದ ಉತ್ಪಾದಿಸಿದ್ದು ಬೇಕು. ಆದರೆ ರೈತರಿಗೆ ಯಾವ ಸೌಲಭ್ಯ ನೀಡಲಾಗುತ್ತಿದೆ ಎಂಬುದನ್ನು ಚಿಂತಿಸಬೇಕು ಎಂದರು.