ಸಕಲೇಶಪುರ ಪುರಸಭೆ: 133 ನಾಮಪತ್ರ ಸಲ್ಲಿಕೆ
ಸಕಲೇಶಪುರ: ಇಲ್ಲಿನ ಪುರಸಭೆ ಚುನಾವಣೆಗೆ 133 ನಾಮಪತ್ರ ಸಲ್ಲಿಕೆಯಾಗಿವೆ.
23 ವಾರ್ಡ್ಗಳ ಪುರಸಭೆ ಚುನಾವಣೆಗೆ ಶುಕ್ರವಾರದವರೆಗೆ ಕೇವಲ 29 ನಾಮಪತ್ರಗಳು ಸಲ್ಲಿಕೆಯಾದರೆ, ಶನಿವಾರ ಬರೋಬ್ಬರಿ 104 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶನಿವಾರ ಬೆಳಗ್ಗೆ 11 ರಿಂದ ಸಂಜೆ 6 ರವರಗೆ ನಾಮಪತ್ರ ಸಲ್ಲಿಸಲಾಯಿತು. ಜೆಡಿಎಸ್ ಎಲ್ಲಾ 23 ವಾರ್ಡ್ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಎಸ್ಟಿ ಮಹಿಳೆಗೆ ಮೀಸಲಾಗಿದ್ದ 15 ನೇ ವಾರ್ಡ್ ಹೊರತುಪಡಿಸಿ 22 ವಾರ್ಡ್ಗಳಿಗೆ ಉಮೇದುವಾರರನ್ನು ಕಣಕ್ಕಿಳಿಸಿದೆ.
ಬಿಜೆಪಿಯಿಂದ 8, 11, 14, 15, 19, 21, 22 ನೇ ವಾರ್ಡ್ಗಳನ್ನು ಹೊರತುಪಡಿಸಿ ಉಳಿದ 16 ವಾರ್ಡ್ಗಳಲ್ಲಿ ಹುರಿಯಾಳುಗಳನ್ನು ಪಕ್ಷ ಅಖಾಡಕ್ಕೆ ಇಳಿಸಿದ್ದರೆ, ಪಕ್ಷೇತರರಾಗಿ 24, ಹಾಗೂ ಬಿಎಸ್ಆರ್ ಕಾಂಗ್ರೆಸ್ನಿಂದ 13 ಹಾಗೂ ಎಸ್.ಡಿ.ಪಿ.ಐ ನಿಂದ ಐವರು ನಾಮಪತ್ರ ಸಲ್ಲಿಸಿದ್ದಾರೆ.