ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂತರಂಗ ಶುದ್ಧಿಗಾಗಿ ದಾಸ ಸಾಹಿತ್ಯ ಪ್ರಮುಖ

Parashurama
Updated On : 28 Feb 2013, 12:15 pm

ಹೊಳೆನರಸೀಪುರ: ಮಾನವನ ವ್ಯಕ್ತಿತ್ವ ಹಸನಾಗುವಲ್ಲಿ ಮನೆ ಮನಗಳನ್ನು ಸ್ಫರ್ಶಿಸಿ ಅಂತರಂಗ ಬಹಿರಂಗ ಶುದ್ಧೀಕರಿಸುವಲ್ಲಿ ದಾಸಸಾಹಿತ್ಯ ಅತ್ಯಂತ ಪ್ರಮುಖವಾಗಿದೆ ಎಂದು ಗೊರೂರಿನ ಎಎನ್‌ವಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಅನಸೂಯ ತಿಳಿಸಿದರು.
ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ  ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ  ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ದಾಸ ಸಾಹಿತ್ಯ ಕುರಿತಂತೆ ಉಪನ್ಯಾಸ ನೀಡಿದ ಅವರು, ಅಶಿಕ್ಷಿತರೂ ಹಾಡಿ ಜೀವಿತದ ಮೌಲ್ಯಗಳನ್ನು ಕಾಪಾಡಿಕೊಳ್ಳುವಲ್ಲಿ ಕೀರ್ತನೆಗಳ ಪಾತ್ರ ಹಿರಿದು.
ದಾಸರೆಂದರೆ ಪುರಂದರದಾಸರಯ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪುರಂದರದಾಸರು, ದಾಸಶ್ರೇಷ್ಠರು. ಸಂತಕವಿಗಳೂ, ದಾಸರೂ ಆದ ಕನಕದಾಸರ ಚಿಂತನೆ, ಆರೋಗ್ಯವಂತ ಸಮಾಜವನ್ನು ಸಣಷ್ಟಿಮಾಡುವ ಕಳಕಳಿಯನ್ನು ತೋರುತ್ತದೆ ಎಂದು ವಿಶ್ಲೇಷಿದರು.
ಸಾಹಿತಿ ಗೊರೂರು ಅನಂತರಾಜು ಉಪನ್ಯಾಸ ನೀಡಿ  ವ್ಯಾಸರಾಯರ ಶಿಷ್ಯರೆಂದು ಮಿನುಗಿದ ಎರಡು ನಕ್ಷತ್ರಗಳಲ್ಲಿ ಒಬ್ಬರು ಪುರಂದರದಾಸರು ಮತ್ತೊಬ್ಬರು ಕನಕದಾಸರು. ತಮ್ಮ ಕೀರ್ತನೆ, ಜಾಣ್ನುಡಿ, ವ್ಯಂಗ್ಯೋಕ್ತಿಗಳ ಮುಖೇನ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಕನಕದಾಸರು. ಇವರ ರಾಮಧಾನ್ಯ ಚರಿತೆ ಕಣತಿ  ವಿಜಯನಗರ ಕಾಲದ ಶ್ರೀಮಂತ ಮತ್ತು ಕೆಳವರ್ಗದವರ ನಡುವೆ ನಡೆಯುತ್ತಿದ್ದ ಹೋರಾಟ ಚಿತ್ರಣವು ಪುರಾಣದ ಹಿನ್ನೆಲೆಯಲ್ಲಿ ಜನಪದ ಶೈಲಿಯಲ್ಲಿ ರಚಿತವಾಗಿದೆ ಎಂದರು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಕೆ.ವಿ.ಪಾರ್ಧೇಶ್, ರಾಜ್ಯಶಾಸ್ತ್ರ ಉಪನ್ಯಾಸಕ  ಎ.ಹರೀಶ್, ಗಣಕ ವಿಜ್ಞಾನ ಉಪನ್ಯಾಸಕ  ಡಿ.ಎಂ.ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಮುಕುಂದೇಗೌಡ, ಕಾಮಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ರಾಮಕೃಷ್ಣಯ್ಯ ಇದ್ದರು. ಭವಿತಾ ದಾಸರ ಪದಗಳನ್ನು, ಭಾವಗೀತೆಗಳನ್ನು ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments