ಕ್ಷೇತ್ರದ ಅಭಿವೃದ್ಧಿ: ಶಾಸಕರಿಗೆ ಮುಖಂಡರ ಮೆಚ್ಚುಗೆ
ಕ.ಪ್ರ.ವಾರ್ತೆ ಟಿ ರಾಮನಾಥಪುರ ಟಿ ಮಾ.6
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಎ.ಮಂಜು ಅವರ ಕಾರ್ಯ ವೈಖರಿ ಬಗ್ಗೆ ತಾಲೂಕು ಹಾಗೂ ಹೋಬಳಿ ಕಾಂಗ್ರೆಸ್ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರಕಲಗೂಡು ತಾಲೂಕಿನಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ಶಾಲೆಗಳಿಗೆ ಶೌಚಾಲಯ, ಗ್ರಾಮೀಣ ಪ್ರದೇಶಗಳ ನೀರಿನ ವ್ಯವಸ್ಥೆ, ತಾಲೂಕಿನ ಕೆಲವು ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಸುಮಾರು 350 ಕೋಟಿ ರು.ಗಳ ನಾನಾ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ ಎಂದರು.
ಹಾಸನ ಜಿಲ್ಲೆಯ ಗಡಿ ಭಾಗದಿಂದ ಕರ್ತಾಳು ಹತ್ತಿರದಿಂದ ಕೇರಳಾಪುರ, ಹಳ್ಳಿಮೈಸೂರು, ಹೊಳೆನರಸಿಪುರ, ಮಾರ್ಗ ಶಾಂತಿಗ್ರಾಮದವರೆವಿಗೆ 2.56 ಕೋಟಿ ರೂ ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣ ನಡೆಯುತ್ತಿದೆ. ದೊಡ್ಡಮಗ್ಗೆ ಹೋಬಳಿ ಬೆಳವಾಡಿ, ದೊಡ್ಡಹಳ್ಳಿ, ಹೊಸೂರು, ಹಿರೇಹಳ್ಳಿ ರಸ್ತೆಗಳ ಅಯ್ದ ಭಾಗದ ದುರಸ್ತಿಗೆ 60 ಲಕ್ಷ ರು, ಕೊಣನೂರು ಹೋಬಳಿ ಬನ್ನೂರು, ಕಾಡನೂರು, ಕಂಟೆನಹಳ್ಳಿ ರಸ್ತೆಯ ದುರಸ್ತಿಗೆ 50 ಲಕ್ಷ ರು, ಕೊಣನೂರು-ಮಲ್ಲಿಪಟ್ಟಣ 19 ಕಿ.ಮೀ. ರಸ್ತೆಗೆ 1 ಕೋಟಿ ರು, ಮಾದಪುರ ಕೂರ್ಗ್ ಗಡಿಯಿಂದ ದೊಡ್ಡಬೆಮ್ಮತಿ ರಸ್ತೆವರೆವಿಗೆ 1 ಕೋಟಿ ರು. ಕಣಿವೇಬಸಪ್ಪ-ಹುಲಿಕಲ್ ಹಂಡ್ರಂಗಿ ಮಾರ್ಗದ ನಡುವಿನ ರಸ್ತೆಗೆ 1.25 ಕೋಟಿ ರು, ಅರಕಲಗೂಡು- ಚಟ್ಟಹಳ್ಳಿ ನಡುವಿನ ರಾಜ್ಯ ಹೆದ್ದಾರಿ ಒಟ್ಟು 94 ಕಿ.ಮೀ. ದೂರದವರೆವಿಗೆ 6.70 ಕೋಟಿ ವೆಚ್ಚದಲ್ಲಿ ಹಣ ಬಿಡುಗಡೆಯಾಗಿದ್ದು ಕಾಮಗಾರಿಗಳು ಮುಗಿಯುವ ಹಂತ ತಲುಪಿವೆ.
ರಾಮನಾಥಪುರ ಹೋಬಳಿ ಮತ್ತಿಗೋಡು ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಕೊಣನೂರು ಹೋಬಳಿ ಉಳ್ಳೇನಹಳ್ಳಿ ಗ್ರಾಮದಲ್ಲಿ 14 ಲಕ್ಷದ ಎಸ್.ಸಿ.ಪಿ. ಯೋಜನೆ ಕಾಮಗಾರಿ, ಸಿದ್ದಾಪುರ ಗ್ರಾಮದಲ್ಲಿ 3.60 ಲಕ್ಷ ರು ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ, ಇದೇ ಗ್ರಾಮದಲ್ಲಿ ಗೇಟನಲ್ಲಿ 20.1 ಲಕ್ಷ ರು ವೆಚ್ಚದಲ್ಲಿ ನರ್ಸ್ ಕ್ವಾರ್ಟರ್ಸ್ ಉದ್ಘಾಟನೆಯಾಗಿವೆ. ಸೀಗೋಡು ಗ್ರಾಮದಲ್ಲಿ ಎಸ್.ಸಿ.ಪಿ. ರೋಡ್ಗೆ 9 ಲಕ್ಷ ರು, ಹಾಗೂ 4.60.ಲಕ್ಷ ರು ವೆಚ್ಚದಲ್ಲಿ ಎಸ್.ಎಸ್.ಏ. ವತಿಯಿಂದ ಶಾಲೆಯ ಕಟ್ಟಡ ಉದ್ಘಾಟನೆಯಾಗಿವೆ.
ಸೀಗೋಡು ಗ್ರಾಮದಲ್ಲಿ ಸುವರ್ಣ ಗ್ರಾಮದ ಕಾಮಗಾರಿ ನಡೆಯುತ್ತಿವೆ. ಸರಗೂರು ಗ್ರಾಮದ 55 ಲಕ್ಷದಲ್ಲಿ ಗ್ರಾಮದ ರಸ್ತೆ ಹಾಗೂ ಚರಂಡಿಗಳ ವ್ಯವಸ್ಥೆ, ವಿ.ಜಿ.ಕೊಪ್ಪಲು ಗ್ರಾಮದಲ್ಲಿ 51 ಲಕ್ಷ ವೆಚ್ಚದಲ್ಲಿ ಸುವರ್ಣ ಗ್ರಾಮ ಚಾಲನೆ, ಬಿದರೂರು ಗ್ರಾಮದಲ್ಲಿ ಹರಿಜನ ಕಾಲೊನಿಗೆ ಎಸ್.ಸಿ.ಪಿ.ಯಿಂದ ಸಿಮೆಂಟರಸ್ತೆ ಚರಂಡಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ಮುಖಂಡ ಚಿಕ್ಕಳ್ಳಿ ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಶಿರದನಹಳ್ಳಿ ತಿಪ್ಪೇಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್‌ನಕಬ್ಬಳಿಗೆರೆ ಬೈರೇಗೌಡ. ಕಾವೇರಿ ನೀರಾವರಿ ನಿಗಮದ ಅಧ್ಯಕ್ಷ ಸರಗೂರು ಚೌಡೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.