ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮೀಣ ಸಂಸ್ಕೃತಿ ನೇಪಥ್ಯಕ್ಕೆ: ಡಾ. ಬೋರಲಿಂಗಯ್ಯ

Parashurama
Updated On : 27 Feb 2013, 11:44 am

ಚನ್ನರಾಯಪಟ್ಟಣ: ಆಧುನಿಕತೆ ಸೆಳೆತಕ್ಕೆ ಗ್ರಾಮೀಣ ಗ್ರಾಮೀಣ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬೋರಲಿಂಗಯ್ಯ ವಿಷಾದಿಸಿದರು.
ಚಿಕ್ಕೋನಹಳ್ಳಿ ಅಮರಗಿರಿ ರಂಗನಾಥ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ನಗರಕ್ಕೆ ಹೆಚ್ಚಾಗಿ ವಲಸೆ ಹೋಗುತ್ತಿದ್ದಾರೆ. ಕೃಷಿ, ಉತ್ಪಾದನೆ ಸೇರಿದಂತೆ ಇಡೀ ವ್ಯವಸ್ಥೆಯನ್ನು ನಗರದಲ್ಲಿ ಆಡಳಿತ ನಿಯಂತ್ರಣ ಮಾಡುತ್ತಿದೆ. ಏಕಮುಖ ಪ್ರವಾಹದಂತೆ ನಗರದಲ್ಲೇ ಎಲ್ಲವೂ ಕೇಂದ್ರಿಕೃತವಾಗುತ್ತಿದೆ. ಇದರಿಂದ ಸಮಸ್ಯೆಗಳು ಉದ್ಭವಿಸುತ್ತಿದೆ ಎಂಬುದನ್ನು ಯಾರು ಯೋಚಿಸುತ್ತಿಲ್ಲ ಎಂದು ನುಡಿದರು.
ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಖಾಸಗಿ ಶಾಲೆಗಳ ಆಕರ್ಷಣೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಮುಚ್ಚುವ ಸ್ಥಿತಿ ಬಂದಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು ಎಂದರು.
ಬೆಂಗಳೂರಿನ ಬಿಎಚ್‌ಇಎಲ್ ಉಪ ವವ್ಯವಸ್ಥಾಪಕ ವೈ.ಎಂ.ವಿಜಯಕುಮಾರ್, ಜಿಪಂ ಸದಸ್ಯ ಎಂ.ಎ. ರಂಗಸ್ವಾಮಿ, ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಗಂಗಾಧರ್, ಕಾರ್ಯದರ್ಶಿ ಗಂಗೇಗೌಡ, ವೀರೇಶ್, ಎನ್.ವಸಂತ ಕುಮಾರ್, ಶಿವಶಂಕರ್, ಚಂದ್ರಪ್ಪ, ಕೆ.ಬಿ.ಉದಯಕುಮಾರ್, ಮಲ್ಲಿಕಾರ್ಜುನ, ರಾಮೇಗೌಡ, ಜಯಲಿಂಗೇಗೌಡ, ಆರ್.ಎಸ್. ಚಿಕ್ಕೇಗೌಡ ಇದ್ದರು.
ನಿವೃತ್ತ ಶಿಕ್ಷಕರು. ಬೋಧಕೇತರ ವರ್ಗ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಲಿಂಗದೇವರು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement