ನಂದಿನ ಹಾಲು ಗ್ರಾಹಕರ ಸಮಾವೇಶ
ಅರಸೀಕೆರೆ: ಮನುಷ್ಯನಿಗೆ ಗುಣಮಟ್ಟದ ಆಹಾರ ಹೇಗೆ ಮುಖ್ಯವೋ ಹಾಗೆಯೇ ಗುಣಮಟ್ಟದ ಹಾಲೂ ಅಷ್ಟೇ ಮುಖ್ಯ ಎಂದು ಇನ್ನರ್ವೀಲ್ ಅಧ್ಯಕ್ಷೆ ಸುಮನಾ ಭರತ್ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಇನ್ನರ್ ವೀಲ್ ಹಾಗೂ ಹಾಸನ ಹಾಲು ಉತ್ಪಾದಕರ ಸಂಘ ಒಕ್ಕೂಟದಿಂದ ಏರ್ಪಡಿಸಲಾಗಿದ್ದ ನಂದಿನಿ ಹಾಲಿನ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿ ಶುದ್ದ ಹಾಲು ಬಳಸುವುದರಿಂದ ಆರೋಗ್ಯ ಕಾಪಾಡಿ ಕೊಳ್ಳಬಹುದಾಗಿದೆ. ಹಾಲಿನ ಉತ್ಪನ್ನಗಳನ್ನು ಸುಸಜ್ಜಿತ ರೀತಿಯಲ್ಲಿ ಶಿಥಲೀಕರಣ ಘಟಕಗಳ ಮೂಲಕ ರಕ್ಷಿಸದರೆ ಹೆಚ್ಚುದಿನಗಳ ಕಾಲ ಕೆಡದಂತೆ ಸಂರಕ್ಷಿಸಬಹುದಾಗಿದೆ ಎಂದು ಹೇಳಿದರು. ಕಾರ್ಯದರ್ಶಿ ಪದ್ಮಶಂಕರ್ ಹಾಲು ಉತ್ಪಾದಕರ ಸಂಘದ ಸದಸ್ಯರು ಅಧಿಕಾರಿಗಳು ಪಾಲ್ಗೊಂಡಿದ್ದರು.