ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಬಾಲ್ಯದಿಂದಲೇ ಉತ್ತಮ ಜೀವನ ಮೌಲ್ಯ ಪರಿಚಯಿಸಿ'

Parashurama
Updated On : 28 Feb 2013, 12:15 pm

ಹಾಸನ: ಮಕ್ಕಳಿಗೆ ಚಿಕ್ಕಂದಿನಿಂದಲೇ ಶ್ರೇಷ್ಠ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತ, ಅವರಿಗೆ ಉತ್ತಮ ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಲೇಖಕಿ ಸುಶೀಲಾ ಸೋಮಶೇಖರ್ ಹೇಳಿದರು.
ಅವರು ನಗರದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ದಲ್ಲಿ ಮಾತನಾಡಿದ ಅವರು, ಪೋಷಕರ ಸಮಸ್ತ ಆಸ್ತಿಗಳ ಮೌಲ್ಯವನ್ನು ದಾಟಿ ನಿಂತಿರುವುದು ಮಕ್ಕಳೆಂಬ ಅಮೂಲ್ಯ ಆಸ್ತಿ, ಸ್ನೇಹ- ಪ್ರೀತಿ, ವಿಶ್ವಾಸ, ಸಹಕಾರ, ಸಹನೆ, ಕರುಣೆಗಳಂತಹ ಮನೋಭಾವ. ಮೊದಲು ಹುಟ್ಟುವುದೇ ಮನೆಯೆಂಬ ಅಂಗಳದಲ್ಲಿ ಪುಟ್ಟಮಕ್ಕಳ ನೆನಪಿನ ಶಕ್ತಿಯ ಹಿಂದೆ ಅವರ ಪ್ರತಿಭೆ, ಆಟೋಟಗಳ ಅನಾವರಣದ ಹಿಂದೆ ಶಿಕ್ಷಕರ ಅಪರಿಮಿತ ಪರಿಶ್ರಮವಿದೆ. ಮಕ್ಕಳ ಸುಪ್ತ ಶಕ್ತಿಗೆ  ನೀರೆರೆಯುತ್ತಿರುವ ಶಿಕ್ಷಕರ ಶ್ರಮ ಇಂತಹ ಸಂದರ್ಭಗಳಲ್ಲಿ ಸಾರ್ಥಕ ಎನಿಸುತ್ತದೆ ಎಂದು ನುಡಿದರು. ಶಾಲೆಯ ಪುಟಾಣಿ ವಿದ್ಯಾರ್ಥಿಗಳ ನೃತ್ಯ, ನಾಟಕ, ರೂಪಕಗಳ ಪ್ರದರ್ಶನ ಮಾದರಿಯಾಗಿತ್ತು. ಇಂದಿನ ಸಿ.ಡಿ. ಕ್ಯಾಸೆಟ್, ನೃತ್ಯಗಳ ಹಾವಳಿಯಲ್ಲಿ ಇಂತಹ ಅಭಿನಯ ಕ್ರಿಯಾಶೀಲ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತವೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.  ವಾರ್ಷಿಕ ಬಹುಮಾನಗಳಾದ ಹಾಜರಾತಿ, ಉತ್ತಮ ಆಹಾರಾಭ್ಯಾಸ, ಹೀಗೆ ಹಲವು ಪ್ರಶಸ್ತಿಗಳನ್ನು ನೀಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಡಿ.ಸುಜಲಾದೇವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುಪ್ರಸಾದ್ ಅತಿಥಿಯಾಗಿ ಭಾಗವಹಿಸಿದ್ದರು. ನಿರ್ದೇಶಕ  ಆರ್. ಜಯಪದ್ಮ, ಸುಮನಯಚಂದ್ರ, ತಿಮ್ಮೇಗೌಡ ಉಪಸ್ಥಿತರಿದ್ದರು. ಶಿಕ್ಷಕಿ ವಿದ್ಯಾಶ್ರೀ ವಾರ್ಷಿಕ ವರದಿ ವಾಚಿಸಿದರು. ಶೃತಿ, ಕೆಂಚಮ್ಮ ನಿರೂಪಿಸಿದರು. ಝನತಿ ಸ್ವಾಗತಿಸಿ, ಗೌತಮ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments