ಹಾಸನ

ಸರ್ಕಾರ ತೆಗೆಯುವ ಕೆಲಸವಷ್ಟೇ ಬಾಕಿ ಇದೆ

ಅರಸೀಕೆರೆ: ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಆದರೆ ಅದನ್ನು ಕಾನೂನುಬದ್ಧವಾಗಿ ತೆಗೆದುಹಾಕುವ ಕಾರ್ಯ ಮಾತ್ರ ಬಾಕಿ ಇದೆ. ರಾಜಕೀಯ ಅರಾಜಕತೆಗೆ ಬಿಜೆಪಿ- ಕೆಜೆಪಿ ಎರಡೂ ಕಾರಣ ಎಂದು ಪ್ರಸಕ್ತ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ವಿಶ್ಲೇಷಿಸಿದ್ದು ಹೀಗೆ.
 ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿದ್ದು, ಕೆಜೆಪಿ ಬೆಂಬಲಿಗ ಶಾಸಕರು ಹಾಗೂ ಮಂತ್ರಿಗಳು ರಾಜಿನಾಮೆ ನೀಡಿದ  ನಂತರವಷ್ಟೇ ಕಾಂಗ್ರೆಸ್ ತನ್ನ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
 ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಬೇಕು. ಹಾಗೆಯೇ ಶಾಸಕರು ವಿಧಾನಸಭಾಧ್ಯಕ್ಷರಿಗೆ ಮಾತ್ರ ರಾಜಿನಾಮೆ ಸಲ್ಲಿಸಬೇಕೆಂಬ ನಿಯಮವಿದೆ. ಈ ನಿಯಮ ಪ್ರಕಾರ ರಾಜಿನಾಮೆ ಅಂಗೀಕಾರವಾದ  ವಿಧಾನಸಭೆಯನ್ನು ವಿಸರ್ಜಿಸಬೇಕೆ ಅಥವಾ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆ ಎಂಬುದನ್ನು ರಾಜ್ಯಪಾಲರು ತೀರ್ಮಾನಿಸಲಿದ್ದಾರೆ. ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳ ಮುಖಂಡರ ಆಂತರಿಕ ಒಳಜಗಳವೇ ಇಂದಿನ ರಾಜಕೀಯ ಗೊಂದಲಗಳಿಗೆ ಕಾರಣವಾಗಿದೆ ಎಂದು ಟೀಕಿಸಿದರು.   ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಕಾಂಗ್ರೆಸ್ ರಾಜ್ಯದಲ್ಲಿ ಪರೋಕ್ಷ ಆಡಳಿತ ನಡೆಸಲು ಹವಣಿಸುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಆರೋಪ ಮಾಡುವಾಗ ಎಚ್ಚರವಹಿಸಬೇಕು. ಕಾಂಗ್ರೆಸ್‌ಗೆ ಅಂತಹ ದುಸ್ಥಿತಿ ಎದುರಾಗಿಲ್ಲ. ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸನ್ನದ್ಧರಾಗಿದ್ದು ತಮ್ಮ ಬಲ ಏನೆಂಬುದನ್ನು ಅವರೇ ತಿಳಿದುಕೊಳ್ಳಲಿದ್ದಾರೆ ಎಂದು ಎದುರೇಟು ನೀಡಿದರು.
ಶ್ರೀಮಂತ ಕುಡುಕರನ್ನಾಗಿ ಮಾಡಿರುವ ಕೀರ್ತಿ:  ಕಾಂಗ್ರೆಸ್ ನಡಿಗೆ ಸಾರಾಯಿ ಕಡೆಗೆ ಎಂದು ಕೂಡ ಕುಮಾರಸ್ವಾಮಿ ಟೀಕಿಸಿರುವುದು ಸರಿಯಲ್ಲ. ಕೂಲಿ ನಾಲಿ ಮಾಡುತ್ತಿದ್ದ ಬಡ ವರ್ಗದ ಜನ ಹತ್ತಿಪ್ಪತ್ತು ರು.ಗಳಲ್ಲಿ ಸಾರಾಯಿ ಕುಡಿದು ಉಳಿದ ಹಣವನ್ನು ಮನೆಗೊಯ್ಯುತ್ತಿದ್ದರು. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ನಿಷೇಧ ಮಾಡಿದ್ದರಿಂದ ಕೂಲಿಯಿಂದ ಸಂಪಾದಿಸಿದ ನೂರಾರು ರು.ಗಳನ್ನು ಬ್ರಾಂದಿ, ವಿಸ್ಕಿಗೆ ಹಾಕಿ ಬರಿಗೈಯಲ್ಲಿ ಮನೆಗೆ ಹೋಗುವ  ಪರಿಸ್ಥಿತಿ ನಿರ್ಮಾಣವಾಗಿವೆ.
ಬಡವರನ್ನು ಶ್ರೀಮಂತ ಕುಡುಕರನ್ನಾಗಿ ಮಾಡಿರುವ ಕೀರ್ತಿ  ಕುಮಾರಸ್ವಾಮಿಯವರಿಗೆ ಸಲ್ಲಬೇಕು ಎಂದು ತಿರುಗೇಟು ನೀಡಿದರು. ತಾಲೂಕು ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯಕುಮಾರ್, ಕೋಡಿಹಳ್ಳಿ ರಘು, ಗೀಜಿಹಳ್ಳಿ ಬಾಬು, ಅಗ್ಗುಂದ ಶಂಕರಪ್ಪ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!