ಹಾಸನ

'ಸ್ಥಿರ ಸರ್ಕಾರ ಸಲುವಾಗಿ ಕಾಂಗ್ರೆಸ್ ಸಂಘಟನೆ ಅಗತ್ಯ'

ಹಾಸನ:  ರಾಜ್ಯದ ಜನರು ಬುದ್ಧಿವಂತರಾಗಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ಬಯಸುತ್ತಿದ್ದಾರೆ. ಈ ಬದಲಾವಣೆ ಹಂತದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿ ಬಲಗೊಳಿಸಬೇಕಿದೆ ಎಂದು ಜಿಲ್ಲಾ ಪ್ರಧಾನ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಪಿ. ಮೋಹನ್ ಹೇಳಿದರು.
 ಗೊರೂರಿನಲ್ಲಿ ನಡೆದ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ  ಅವರು, ಸಮ್ಮಿಶ್ರ ಸರ್ಕಾರಗಳ ಆಡಳಿತದಿಂದ ಜನರು ರೋಸಿ ಹೋಗಿ, ಬದಲಾವಣೆ ಬಯಸಿದ್ದಾರೆ. ಈ ಅವಕಾಶವನ್ನು ಕಾಂಗ್ರೆಸ್ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.
 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ರಂಗನಾಥ್ ಮಾತನಾಡಿ ಕಟ್ಟಾಯ ಹೋಬಳಿ ಕಾಂಗ್ರೆಸ್ ಭದ್ರ ಕೋಟೆ ಯಾಗಿತ್ತು. ಈಗ ಬಲ ಕುಗ್ಗಿದೆ. ಎಲ್ಲರೂ ಶ್ರಮವಹಿಸಿ ಹಿಂದಿನಂತೆ ಪಕ್ಷವನ್ನು ಬಲಗೊಳಿಸಬೇಕು ಎಂದರು.
 ಪಕ್ಷದ ಮುಖಂಡ ದಾಸೇಗೌಡ, ಕಾರ್ಯಕರ್ತರು ತ್ಯಾಗ ಮನೋಭಾವನೆಯಿಂದ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಹೇಳಿದರು.
 ಗೊರೂರು ಭೋಜಣ್ಣ ಮಾತನಾಡಿ, ಗೊರೂರಿನಿಂದ ನೆಲ್ಯಾಡಿವರೆಗೆ ಕಾಂಗ್ರೆಸ್ ಸಾಧನೆಯನ್ನು ಜನತೆಗೆ ತಿಳಿಸಬೇಕು ಎಂದರು. ಉಡವಾರೆ ನಾಗಣ್ಣ, ಕಾರ್ಲೆ ದಿನೇಶ್, ಪುಟ್ಟಸ್ವಾಮಿ, ಬಿ. ಮಲ್ಲೇಶ್ ಮಾತನಾಡಿದರು. ಆಲೂರು-ಕಟ್ಟಾಯ ಬ್ಲಾಕ್ ಮುಖಂಡ ಶಾಂತಕೃಷ್ಣ, ಡಿಐವಿಸಿಎಂ. ಅಧ್ಯಕ್ಷ ಎಂ.ಎಚ್. ರಂಗೇಗೌಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಸಾಕ್ ಭಾಗವಹಿಸಿದ್ದರು. ರವಿಕುಮಾರ್ ಸ್ವಾಗತಿಸಿದರು. ಪರಮೇಶ್ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ