28 ರಿಂದ ಬತ್ತ, ರಾಗಿ, ಖರೀದಿ ಕೇಂದ್ರ
ಹಾಸನ: ಪ್ರಸಕ್ತ ಸಾಲಿನಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಬತ್ತ, ರಾಗಿ ಹಾಗೂ ಮೆಕ್ಕೆಜೋಳ ಖರೀದಿಸಲು ಅಧ್ಯಕ್ಷರು, ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ತೀರ್ಮಾನದಂತೆ ನಾನಾ ಸ್ಥಳಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವತಿಯಿಂದ ಖರೀದಿ ಕೇಂದ್ರಗಳನ್ನು ಜ. 28 ರಂದು ತೆರೆಯಲಾಗುತ್ತಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೊಳೆನರಸೀಪುರ ಎಪಿಎಂಸಿ ಆವರಣದಲ್ಲಿ ರಾಗಿ ಮತ್ತು ಮೆಕ್ಕೆ ಜೋಳ ಹಾಗೂ ಸಕಲೇಶಪುರ ಎಪಿಎಂಸಿ ಆವರಣದಲ್ಲಿ ಬತ್ತ ಖರೀದಿಸಲಾಗುವುದು. ಸರ್ಕಾರದಿಂದ ಘೊಷಿಸಿರುವ ಬೆಂಬಲ ಬೆಲೆ. ಇಂತಿದೆ - ಬತ್ತ ಎ ಗ್ರೇಡ್ ಪ್ರತಿ ಕ್ವಿಂಟಾಲ್ಗೆ (ನಿವ್ವಳ) 1280 ರು.ನಂತೆ ಖರೀದಿಸಲಾಗುವುದು. ಬತ್ತ ಸಾಮಾನ್ಯ - ಪ್ರತಿ ಕ್ವಿಂಟಾಲ್ಗೆ (ನಿವ್ವಳ) 1250 ರು.ನಂತೆ ಖರೀದಿಸಲಾಗುವುದು. ರಾಗಿ ಪ್ರತಿ ಕ್ವಿಂಟಾಲ್ಗೆ (ನಿವ್ವಳ) 500 ರು.ನಂತೆ ಖರೀದಿಸಲಾಗುವುದು.
ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ಗೆ (ನಿವ್ವಳ) 1175 ರು.ನಂತೆ ಖರೀದಿಸಲಾಗುವುದು. ಬತ್ತ, ರಾಗಿ ಮತ್ತು ಮೆಕ್ಕೆಜೋಳಗಳ ಗುಣಮಟ್ಟ ಉತ್ತಮ ಗುಣಮಟ್ಟವು ಹಾಗಿರಬೇಕು (ಎಫ್.ಎ.ಕ್ಯೂ) ಪ್ರತಿ ಚೀಲಕ್ಕೆ 10 ರು. ಚೀಲದ ಬಾಬ್ತಾಗಿ ಮರು ಪಾವತಿಸಲಾಗುವುದು.
ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ತರುವ ರೈತರು ಮುಂಚಿತವಾಗಿ ಧಾನ್ಯಗಳ ಮಾದರಿಗಳನ್ನು ತಂದು, ಅವುಗಳ ಗುಣಮಟ್ಟವನ್ನು ಪರಿಕ್ಷಿಸಿದ ನಂತರ, ದಾಸ್ತಾನು ಎಫ್.ಎ.ಕ್ಯೂ ಗುಣಮಟ್ಟಕ್ಕೆ ಬಂದಲ್ಲಿ ಮಾತ್ರ ಅಂತಹ ದಾಸ್ತಾನನ್ನು ಈ ಯೋಜನೆಯಡಿ ಖರೀದಿಸಲಾಗುವುದು. ಖರೀದಿ ಪ್ರಕ್ರಿಯೆಯನ್ನು ಮಾರ್ಚ್ 31 ರಂದು ಮುಕ್ತಾಯಗೊಳಿಸಲಾಗುವುದು. ಈ ಸದಾವಕಾಶವನ್ನು ರೈತರು ಸುದಪಯೋಗ ಪಡಿಸಿ ಕೊಳ್ಳಬೇಕೆಂದು ಕೋರಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.