ಇಂದು ಜವಳಿ ಸಚಿವರ ಆಗಮನ
ಹಾಸನ: ರಾಜ್ಯ ಜವಳಿ ಸಚಿವ ಆರ್. ವರ್ತೂರು ಪ್ರಕಾಶ್ ಜ. 26 ರಂದು ರಾತ್ರಿ 9ಕ್ಕೆ ಹಾಸನಕ್ಕೆ ಆಗಮಿಸಿ ಸರ್ಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ ಮಾಡುವರು. ಜ. 27 ರಂದು ಬೆಳಗ್ಗೆ 8.30ಕ್ಕೆ ಹಾಸನದಿಂದ ಆಲೂರಿಗೆ ತೆರಳಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬೆಳಗ್ಗೆ 11.30ಕ್ಕೆ ಹಾಸನ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ವಿಚಾರಣೆ ನಡೆಸುವರು. ಅಂದು ಮಧ್ಯಾಹ್ನ 2.30ಕ್ಕೆ ಆಲೂರಿನಿಂದ ಬೆಂಗಳೂರಿಗೆ ತೆರಳುವರು
ಫಲಾನುಭವಿಗಳಿಗೆ ಟ್ಯಾಕ್ಸಿ ವಿತರಣೆ
ಹಾಸನ: ಪ್ರಸಕ್ತ ಸಾಲಿನಲ್ಲಿ ಹಾಸನ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 33 ನಿರುದ್ಯೋಗಿ ಫಲಾನುಭವಿಗಳಿಗೆ ಜ. 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಈ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಸದರಿ ದಿನಾಂಕದಂದು ನಿಗದಿಪಡಿಸಿದ ಸ್ಥಳದಲ್ಲಿ ಬೆಳಗ್ಗೆ 8 ಕ್ಕೆ ಬಿಳಿ ಸಮವಸ್ತ್ರದಲ್ಲಿ ಹಾಜರಾಗಬೇಕೆಂದು ಪ್ರವಾಸೋದ್ಯಮ ಇಲಾಖೆಯ ಹಾಸನ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.
ಅತ್ಯಾಚಾರ ಪ್ರಕರಣ ಮುಚ್ಚುವ ಹುನ್ನಾರ
ಹಾಸನ: ಆಲೂರು ತಾಲೂಕು ಕುಂದೂರು ಹೋಬಳಿ ಕಿತಬೂರು ಗ್ರಾಮದ ಬಡ ದಲಿತ ಬಾಲಕಿ ಮೇಲೆ ನಡೆದ ಸಾಮೂಹಿಕ ಅಚ್ಯಾಚಾರ ಪ್ರಕರಣವನ್ನು ರಾಜಕೀಯ ಮತ್ತು ಹಣದ ಬಲದಿಂದ ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ವೆಂಕಟಯ್ಯ ಆರೋಪಿಸಿದ್ದಾರೆ.
ಅತ್ಯಾಚಾರ ಪ್ರಕರಣ ಬಗ್ಗೆ ದಲಿತ ಪರ ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಕ್ರಿಯಿಸದಿರುವುದು ದೊಡ್ಡ ದುರಂತ. ಅಲ್ಲದೆ ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಬಡ ದಲಿತ ಕುಟುಂಬಕ್ಕೆ ಮೂಲಭೂತ ಸೌಕರ್ಯ ಒದಗಿಸಲು ನೆರವಿಗೆ ಬಾರದಿರುವುದು ಅತ್ಯಂತ ಆಘಾತಕರವಾದ ವಿಚಾರವಾಗಿದೆ. ಈ ಹೇಯ ಕೃತ್ಯಕ್ಕೆ ಬಳಸಿರುವ ಆಟೋ ರಿಕ್ಷಾದ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಡ ದಲಿತ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ನೆರವಿಗೆ ಧಾವಿಸಬೇಕು. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಕೃತ್ಯ ಎಸಗಿರುವ ಆರೋಪಿಗಳಿಗೆ ಗೂಂಡಾ ಕಾಯ್ದೆಯಡಿ ಶಿಕ್ಷಿಸಬೇಕು. ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಬಂಧನ
ಹಾಸನ: ನಗರದ ಹೊಸಲೈನ್ ರಸ್ತೆ, ಇಮ್ನಾದಿಯಾ ಮಸೀದಿ ಬಳಿ ಜೆಡ್.ಬಿ. ಬಾಳೆಹಣ್ಣಿನ ಅಂಗಡಿ ಪಕ್ಕದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಆಲೂರು ಬಸ್ ನಿಲ್ದಾಣ ಹಿಂಭಾಗದ ವಾಸಿ ಮನಸೂರ್ (17)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಂಡು ಹಾಗೂ ಯಾವುದೇ ಸುರಕ್ಷತೆ ಇಲ್ಲದೆ ಗೃಹ ಬಳಕೆ ಸಿಲಿಂಡರ್‌ಗಳಿಂದ ಚಿಕ್ಕ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈತನಿಂದ 8,750 ರು. ನಗದು ಸೇರಿ 20.010 ರು. ಮೌಲ್ಯದ ಭಾರತ್ ಗ್ಯಾಸ್ ಕಂಪನಿಯ 14.2 ಕೆ.ಜಿ ತೂಕದ ತುಂಬಿರುವ ಹಾಗೂ ಅರ್ಧ ಇರುವ ಹಾಗೂ ಖಾಲಿ 3 ಸಿಲಿಂಡರ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ. ಇವುಗಳ ಬೆಲೆ ಸುಮಾರು 2 ಇಂಡೇನ್ ಕಂಪನಿಯ 5 ಕೆ.ಜಿ ತೂಕದ ಗ್ಯಾಸ್ ತುಂಬಿರುವ ಆಟೋ ಗ್ಯಾಸ್, ಇದರ ಬೆಲೆ 3.4 ಕೆ.ಜಿ ತೂಕದ ಖಾಲಿ ಇರುವ ಗ್ಯಾಸ್ ಲೈಟ್ ಸಿಲಿಂಡರ್ 14 ಒಂದು ಸ್ಯಾಮ್‌ಸಂಗ್ ಡಿಜಿಟಲ್ ಸ್ಕೇಲ್ 5 ಗ್ಯಾಸ್ ತುಂಬುವ ಕಬ್ಬಿಣದ ರೀಫಿಲ್ಲಿಂಗ್ ಪೈಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.