ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಗಚಿ ಹಿನ್ನೀರು ಶೀತಪೀಡಿತ ಗ್ರಾಮಗಳ ಸ್ಥಳಾಂತರ

Parashurama
Updated On : 25 Jan 2013, 10:15 am

ಬೇಲೂರು: ಯಗಚಿ ಹಿನ್ನೀರಿನ ಕೆಳಹಳ್ಳಿ ಹಾಗೂ ನಾರಾಯಣಪುರದ ಶೀತಪೀಡಿತ ಗ್ರಾಮಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.
 ಶೀತಪೀಡಿತ ಗ್ರಾಮ ಕೆಳಹಳ್ಳಿ ಹಾಗೂ ನಾರಾಯಣ ಪುರಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಗ್ರಾಮಗಳ ಸ್ಥಳಾಂತರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ತಾವು ಸ್ಥಳ ಪರಿಶೀಲನೆಗೆ ಬಂದಿದ್ದಾಗಿ ತಿಳಿಸಿದರು.
 ಯಗಚಿ ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಮಾತನಾಡಿ, ದಶಕಗಳಿಂದ ಈ ಎರಡು ಗ್ರಾಮಗಳು ಸ್ಥಳಾಂತರ ಗೊಂಡಿಲ್ಲ. ಯಗಚಿ ಹಿನ್ನೀರಿಗಿಂತ ಮೇಲಿರುವ ಹಾಗೂ ದೂರದಲ್ಲಿರುವ ಗ್ರಾಮಗಳನ್ನು ಮುಳುಗಡೆ ಪಟ್ಟಿಗೆ ಸೇರಿಸಲಾಗಿದೆ. ಆದರೆ ಯಗಚಿ ಹಿನ್ನೀರಿಗೆ 150 ಮೀಟರ್ ಹತ್ತಿರದಲ್ಲಿರುವ 2 ಗ್ರಾಮಗಳನ್ನು ವಿನಾಕಾರಣ ಕೈ ಬಿಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ತಪ್ಪು ಮಾಹಿತಿ ಸರ್ಕಾರಕ್ಕೆ ಕಳಿಸಿರುವುದು ಪ್ರಮುಖ ಕಾರಣವಾಗಿದೆ ಎಂದರು.
 ಹೆಚ್ಚಾಗಿ ದಲಿತರು ಇರುವ ಈ ಗ್ರಾಮಗಳ ಜನತೆಯ ಪಾಡು ಮಳೆಗಾಲದಲ್ಲಿ ಹೇಳತೀರದಾಗಿದ್ದು ಇಡೀ ಗ್ರಾಮ ಸಂಪೂರ್ಣ ಶೀತದಿಂದ ಕೂಡಿ ಗೋಟೆಗಳಲ್ಲಿ, ಮನೆಯ ಒಳಗಡೆ ನೀರಿನ ಜನ ಬರುತ್ತದೆ. ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು ಶೇ. 90 ರಷ್ಟು ಮಂದಿ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸಚಿವರು  ಶೀಘ್ರದಲ್ಲಿ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
 ಜಿಪಂ ಸದಸ್ಯ ಇ.ಎಚ್.ಲಕ್ಷ್ಮಣ್, ಅಮಿತ್‌ಶೆಟ್ಟಿ, ಜಯಶೀಲಾ, ತಾ.ಪಂ ಅಧ್ಯಕ್ಷೆ ನಳಿನಾ ಶಿವಕುಮಾರ್ ಸದಸ್ಯ ಪರ್ವತಯ್ಯ, ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments