ಸಕಲೇಶಪುರ ಶಾಸಕರ ವಿರುದ್ಧ ಕೆಜೆಪಿ ಗರಂ
ಸಕಲೇಶಪುರ: ರಸ್ತೆ, ನೀರು, ಅರೋಗ್ಯ, ವಸತಿ ಸೇರಿದಂತೆ
ಇತರೆ ಮೂಲ ಭೂತ ಸೌಲಭ್ಯ ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಶಾಸಕ ಎಚ್.ಕೆ.ಕುಮಾರಸ್ವಾಮಿ ರಾಜಕಾರಣದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಕೆಜೆಪಿ ಮುಖಂಡ ಎಂ.ವಿ.ತಿಮ್ಮಯ್ಯ ಅರೋಪಿಸಿದ್ದಾರೆ.
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಯಾಗಿ ಜನರ ನಡುವೆ ಕೆಲಸ ಮಾಡಿವರಿಗೆ ಸಮಾಜಿಕ ಕಳಕಳಿ ಇರಬೇಕು ಎಂದು ಕಿವಿಮಾತು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಬಳಸದ ಕಾರಣ ಕೋಟ್ಯಂತರ ರು. ಕೊಳೆಯುತ್ತಿದೆ ಎಂದು ತಿಳಿಸಿದರು.
2012-13ನೇ ಸಾಲಿನಲ್ಲಿ ಸಕಲೇಶಪುರಕ್ಕೆ 76 ಕೊಳವೆ ಭಾವಿಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರ ಸೌಲ್ಯಭ್ಯಕ್ಕೆ ಕಲ್ಪಿಸಲು. ದೀನ-ದಲಿತರ ಅಭಿವೃದ್ಧಿಗಾಗಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಯಲ್ಲಿ ಕೇವಲ ಒಂದು ಬಾವಿ ಮಾತ್ರ ಕೊರೆಸಲಾಗಿದೆ. ಬಡ ರೈತರಿಗೆ ಅಗತ್ಯವಾದ ನೀರಿನ ಸೌಲಭ್ಯ ದೊರೆಕಿಸುವಲ್ಲಿ ಶಾಸಕ ಕುಮಾರಸ್ವಾಮಿ ವಿಫಲವಾಗಿದ್ದಾರೆ ಎಂದರು.
ದಲಿತರು ವಾಸಿಸುವ ಪ್ರದೇಶಗಳಿಗೆ ರಸ್ತೆ ನಿರ್ಮಾಣ, ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಈ ಕ್ಷೇತ್ರಕ್ಕೆ ಈ ಸಾಲಿನಲ್ಲಿ 1.5 ಕೋಟಿ ರು. ಮಂಜೂರಾಗಿತ್ತು.
ಈ ಹಣ ಆಯ-ವ್ಯಯ ಪುಸ್ತಕದಲ್ಲಿ ಅಗ್ಗದ ಪ್ರಚಾರಕ್ಕಾಗಿ ಉಳಿದುಕೊಂಡಿದೆ.
ಸರಕಾರದ ಹಣ ಬಡವರಿಗೆ ವಿನಿಯೋಗಿಸುವ ಶಕ್ತಿ ಇಲ್ಲದಿರುವರು ಅಧಿಕಾರದಲ್ಲಿರಲು ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದರು.
ಬಹು ನಿರೀಕ್ಷಿತ ಅಂಬೇಡ್ಕರ್ ಭವನದ ಕಾಮಗಾರಿ ಅಮೆ ವೇಗದಲ್ಲಿ ಸಾಗುತ್ತಿದೆ. 1.50 ಕೋಟಿ ವೆಚ್ಚದ ಯೋಜನೆಯಲ್ಲಿ ತಯಾರದ ಈ ಕಟ್ಟಡದ ವಿಳಂಬಕ್ಕೆ ಶಾಸಕ ಕುಮಾರಸ್ವಾಮಿ ನೇರ ಕಾರಣ ಎಂದರು.
ಶಾಸಕ ಕುಮಾರಸ್ವಾಮಿ ಅಭಿವೃದ್ಧಿ ವಿರೋಧಿಯಾಗಿದ್ದಾರೆ. ಅವರಿಗೆ ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವುದೇ ಯೋಜನಿಗಳಾಗಲಿ ಚಿಂತನೆಗಳಿಲ್ಲ.
ಕಳೆದ 20 ವರ್ಷಗಳಲ್ಲಿ ರಾಜಕಾರಣದಲ್ಲಿದ್ದಾರೆ ಬಹಳಷ್ಟು ಮಾಡಿದ್ದಾರೆ ಅದನ್ನು ಖರ್ಚು ಮಾಡುತ್ತ ಅರಾಮಗಿರಲಿ ಈ ಕ್ಷೇತ್ರದ ಜನರಿಗೇ ಏನಾದರು ಮಾಡಬೇಕು ಎಂದು ಅವರ ಮನಸ್ಸಿನಲ್ಲಿದ್ದರೆ ರಾಜಕಾರಣದಿಂದ ದೂರವಾಗಲಿ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.