ಗಣರಾಜ್ಯೋತ್ಸವಕ್ಕೆ ಕ್ಷೀಣಿಸಿದ ಮಕ್ಕಳ ಸಂಖ್ಯೆ: ಸುಬ್ಬಯ್ಯ
ಶ್ರವಣಬೆಳಗೊಳ: ಕೇವಲ ಮೂರು ವರ್ಷಗಳ ಹಿಂದೆ ನಡೆಯುತ್ತಿದ್ದ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ಈಗ ನಡೆಯುತ್ತಿಲ್ಲ. ಈ ಬಾರಿ ಮಕ್ಕಳ ಸಂಖ್ಯೆಯಂತೂ ಬಹಳ ಕುಸಿತ ಕಂಡಿರುವುದು ವಿಷಾದಕರ ಸಂಗತಿ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸುಬ್ಬಯ್ಯ ತಿಳಿಸಿದರು.
ಶ್ರವಣಬೆಳಗೊಳದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಯಾವ ಶಾಲೆಯಿಂದಲೂ ಸ್ತಬ್ಧ ಚಿತ್ರಗಳು ಬಾರದೇ ಇರುವುದು ಬೇಸರದ ಸಂಗತಿ ಎಂದು ಹೇಳಿದರು.
ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಬಹಳ ಸಂಭ್ರಮದಿಂದ ಹಾಗೂ ಅದ್ದೂರಿಯಿಂದ ಆಚರಣೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದ್ದರೂ, ಈ ಬಾರಿ ಕಾರ್ಯಕ್ರಮದಲ್ಲಿ ಮಕ್ಕಳ ಸಂಖ್ಯೆ ಮಾತ್ರ ಕ್ಷೀಣಿಸಿದ್ದು ಬೇಸರ ಮೂಡಿಸಿದೆ. ಕೆಲ ಖಾಸಗಿ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ರಾಜ್ಯೋತ್ಸವದಲ್ಲಿ ಪಾಲ್ಗೋಳದ್ದೇ ಇರುವುದು ಸಂಭ್ರಮ ಕಳೆಗುಂದುವುದಕ್ಕೆ ಕಾರಣ ಎನ್ನಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಸ್.ಪಿ.ನಾಗೇಶ್, ಮಾಜಿ ಉಪಾಧ್ಯಕ್ಷರಾದ ಎಸ್.ಆರ್.ಲೋಕೆಶ್, ಸದಸ್ಯರಾದ ಧರ್ಮಪಾಲ್, ವಿಶಾಲಮ, ಸಾವಿತ್ರಮ, ಶಾಲಿನಿ ಬಾಹುಬಲಿ, ಪುರಸಭೆ ಮಾಜಿ ಉಪಾಧ್ಯಕ್ಷೆ ವನಮಾಲ ಶಾಂತರಾಜು ಮುಂತಾದವರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.