ವಿವೇಕಾನಂದ ಜನ್ಮದಿನಾಚರಣೆ
ಬೇಲೂರು: ವಿವೇಕಾನಂದರು ಧ್ಯಾನ ಮತ್ತು ಯೋಗದ ಮಹತ್ವವನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಾನವ ಹೇಳಿದರು. ಇಲ್ಲಿನ ವೈ.ಡಿ.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಮತ್ತು ಎನ್.ಎಸ್.ಎಸ್. ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ವಿವೇಕಾನಂದ 150ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು ಭಾರತ ಭೂಮಿ ಭೋಗ ಭೂಮಿಯಲ್ಲ ನಮ್ಮದು ಯೋಗ ಭೂಮಿ, ತ್ಯಾಗಭೂಮಿ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವೈ.ಸಿ. ಮಲ್ಲೇಶಗೌಡ ಮಾತನಾಡಿದರು. ಅಧ್ಯಾಪಕ ಡಾ. ರಾಜಶೇಖರಯ್ಯ ಜಿ. ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಯಣ್ಣಗೌಡ ವಂದಿಸಿದರು. ಜಯರಾಂ ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯಕ್ರಮಾಧಿಕಾರಿ ಎಂ.ಈ. ಸತೀಶ್ ಎ.ಆರ್. ಸುಧಾ ಇದ್ದರು. ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಮಾನವರಾಗಿ ವಿವೇಕಾನಂದರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಿದರು.
ಭಯೋತ್ಪಾದನೆ ತೊಲಗಿಸಬೇಕು
ಹಳೇಬೀಡು: ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ತೊಲಗಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಅಭಿಪ್ರಾಯಪಟ್ಟರು. ಗಣರಾಜ್ಯೋತ್ಸವ ಪ್ರಯುಕ್ತ ಇತ್ತೀಚೆಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಧ್ವಜಾ ರೋಹಣ ನೆರವೇರಿಸಿ ಅವರು ಮಾತನಾಡಿದರು. ಗ್ರಾಮಾಭಿವೃದ್ಧಿ ಅಧಿಕಾರಿ ಎಚ್.ಎಚ್.ಸೋಮಶೇಖರ್, ಉಪಾಧ್ಯಕ್ಷರಾದ ಸವಿತಾ, ಮಾಜಿ ಅಧ್ಯಕ್ಷ ನಿಂಗಪ್ಪ, ಶಿವಕುಮಾರ್, ಸದಸ್ಯರಾದ ಎಚ್. ಪರಮೇಶ್, ದಯಾಶಂಕರ್, ಚಂದ್ರೇಗೌಡ ಇದ್ದರು.
ಕೌಶಲ್ಯತರಬೇತಿ ಕೇಂದ್ರ ಆರಂಭ
ಹಾಸನ: ಮಹಿಳೆಯರಿಗೆ ಹಲವು ಬಗೆಯ ವೃತ್ತಿಗಳಿಗೆ ತರಬೇತಿ ನೀಡಬೇಕೆಂದು ಹಾಸನದ ಕುವೆಂಪು ನಗರದಲ್ಲಿ ಜೀವನ ಕೌಶಲ್ಯ ತರಬೇತಿ ಕೇಂದ್ರ ನೂತನ ಸಂಸ್ಥೆಯನ್ನು ಆರಂಭಿಸಿದೆ. ಗಣರಾಜ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಷಿಯನ್, ಟೈಲರಿಂಗ್, ಎಂಬ್ರಾಯಡರಿ, ಮೆಹಂದಿ ಮತ್ತು ಶೃಂಗಾರ , ಕಲೆ ತರಬೇತಿಯನ್ನು ಏರ್ಪಡಿಸಿದೆ. 14 ವರ್ಷ ಮೇಲ್ಪಟ್ಟ ಮಹಿಳೆಯರು, ವಿದ್ಯಾರ್ಥಿನಿಯರು, ಗೃಹಿಣಿಯರು ತಮ್ಮ 4 ಭಾವಚಿತ್ರ, ವಾಸಸ್ಥಳದ ದಾಖಲೆ ಮತ್ತು ವಿದ್ಯಾಭ್ಯಾಸದ ದಾಖಲೆ ಪತ್ರ ಗಳನ್ನು ಒದಗಿಸಿ ಪ್ರವೇಶ ಪಡೆಯ ಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ 08172235448, 9449428824 ಸಂಪರ್ಕಿಸಲು ಕೋರಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.