ಅಸಮಾನತೆ ತೊರೆದರೆ ಮಾತ್ರವೇ ನಿಜ ಸ್ವಾತಂತ್ರ್ಯ: ಪ್ರೊ.ಭಗವಾನ್
ಹೊಳೆನರಸೀಪುರ: ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯವಲ್ಲ, ಸಮಾಜದಲ್ಲಿ ಇಂದಿಗೂ ತಾಂಡವ ವಾಡುತ್ತಿರುವ ಜಾತಿ-ಧರ್ಮ ಮತ್ತು ಸಂಕೋಲೆಗಳ ಅಸಮಾನತೆಯಿಂದ ಹೊರಬಂದಾಗ ಮಾತ್ರವೇ ನಿಜ ಅರ್ಥದ ಸ್ವಾತಂತ್ರ್ಯ ಲಭ್ಯವಾದಂತೆ ಎಂದು ಖ್ಯಾತ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದಲ್ಲಿ ದಸಂಸ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಣ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ರು. ಜಾತಿಯ ಭೂತ ಭಾರತೀಯರಲ್ಲಿ ತುಂಬಿಕೊಡಿದ್ದು, ಈ ಜಾತಿಯ ಭೂತವನ್ನು ಕಿತ್ತೊಗೆಯದಿದ್ದಲ್ಲಿ ಭಾರತದಲ್ಲಿ ಭಾರತೀಯತೆ ಉದ್ಧಾರ ಸಾಧ್ಯವಿಲ್ಲ ಎಂದ ಅವರು ಅಂಬೇಡ್ಕರ್ ಆಶಯದಂತೆ ರಾಜಕೀಯ ಸಮಾನತೆಯು ದೊರಕಿದ್ದರೂ, ಸಾಮಾಜಿಕ ಸಮಾನತೆ ಇಂದಿಗೂ ಸಾಧ್ಯವಾಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ವಿಷಾದಿಸಿದರು. ಮೈಸೂರು ವಿವಿ ಪತ್ರಿಕೋದ್ಯ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಮಹೇಶ್ಚಂದ್ರಗುರು ಮಾತನಾಡಿದರು.
ಎ.ಆರ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ರತ್ನಾಕರ್ ಮತ್ತಿರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.