ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪರಿಣಾಮಕಾರಿ ಸೇವೆಗೆ ತರಬೇತಿ ಅಗತ್ಯ'

Parashurama
Updated On : 29 Jan 2013, 10:11 am

ಹಾಸನ: ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರಿಗೆ ಆಗಾಗ್ಗೆ ಪುನಶ್ಚೇತನ ತರಬೇತಿ ನೀಡುವುದು ಅತ್ಯವಶ್ಯಕ.
 ಇದರಿಂದ ಅವರು ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ತರಬೇತಿ ಕಾರ್ಯಕ್ರಮ ರಾಜ್ಯ ಸಂಯೋಜನಾಧಿಕಾರಿ ಡಾ.ಲಕ್ಷ್ಮೀ ನಾರಾಯಣ ಶೆಣೈ ಅಭಿಪ್ರಾಯಪಟ್ಟಿದ್ದಾರೆ.  
ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ನಡೆಯಲಿರುವ ಪಂಚಕರ್ಮ, ಕ್ಷಾರಸೂತ್ರ, ಮನೆಮದ್ದು ಹಾಗೂ ಅಲೋಪತಿ ವೈದ್ಯಾಧಿಕಾರಿಗೆ ಆಯುರ್ವೇದ ಪಂಚಯಾತ್ಮಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಆಯುಷ್ ವಿಭಾಗಕ್ಕೆ ರು. 6346 ಕೋಟಿ ಮೀಸಲಿಡಲಾಗಿದೆ.  
ಈ ಬೃಹತ್ ಮೊತ್ತವನ್ನು ಆಯುಷ್ ವಿಭಾಗವನ್ನು ಇನ್ನಷ್ಟು ಪ್ರಭಾವಿಯಾಗಿ ಜನಸಾಮಾನ್ಯರಿಗೆ ತಲುಪಿಸಲು ಬಳಸಿಕೊಳ್ಳಬೇಕಾಗಿದೆ ಎಂದು  ಡಾ.ಲಕ್ಷ್ಮೀ ನಾರಾಯಣ ಶೆಣೈ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಉಪ ವೈದ್ಯಕೀಯ ಅಧೀಕ್ಷಕ  ಡಾ. ಮುರಳೀಧರ ಪಿ ಪೂಜಾರ್ ಮಾತನಾಡಿ,  ಅಲೋಪತಿ ವೈದ್ಯರಿಗೆ ನೀಡಲಾದ ಆಯರ್ವೇದ ಪರಿಚಯಾತ್ಮಕ ಕಾರ್ಯಕ್ರಮಗಳ ಮುಖಾಂತರ ಆಯರ್ವೇದ ಚಿಕಿತ್ಸೆ ಸೂಚಿಸಲು ಸಹಾಯವಾಗಲಿದೆ.  
 ಈ ನಿಟ್ಟಿನಲ್ಲಿ ತರಬೇತಿ ಕಾರ್ಯಗಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಡಾ. ಮುರಳೀಧರ ಪಿ ತಿಳಿಸಿದರು. ಶೈಕ್ಷಣಿಕ ವಿಭಾಗದ ಡೀನ್ ಡಾ. ಮಲ್ಲಿಕಾ ಸ್ವಾಗತಿಸಿದರು. ಡಾ.ಗುರುಬಸವರಾಜ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments