ವಂಚನೆ ಪ್ರಕರಣ: ಪೊಲೀಸರ ವಿಚಾರಣೆ
ಬೇಲೂರು: ಕಡಿಮೆ ಬಡ್ಡಿದರದ ಆಮಿಷವೊಡ್ಡಿ ಸ್ವ ಸಹಾಯ ಸಂಘದ ಮಹಿಳೆಯರನ್ನು ವಂಚಿಸುತ್ತಿರುವ ಪ್ರಕರಣದ ಬಗ್ಗೆ 'ಕನ್ನಡಪ್ರಭ'ದಲ್ಲಿ ವಿಸ್ತೃತ ವರದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಸಂಬಂಧ ವಿಚಾರಣೆ ಕೈಗೊಂಡಿದ್ದಾರೆ.
ಸ್ತ್ರೀ ಶಕ್ತಿ ಸ್ವಹಾಯ ಮಹಿಳಾ ಸಂಘದವರ ಬಳಿಗೆ ಕೆಲವು ಫೈನಾನ್ಸ್ಕಂಪನಿಗಳ ಪ್ರತಿನಿಧಿಗಳು ತೆರಳಿ ಕಡಿಮೆ ಬಡ್ಡಿದರದ ಆಮಿಷವೊಡ್ಡಿ ಠೇವಣಿ ರೂಪದಲ್ಲಿ ಸಾವಿರಾರು ರು. ಹಣ ಕಟ್ಟಿಸಿಕೊಂಡು ನಕಲಿ ರಸೀದಿ ನೀಡಿ ನಾಪತ್ತೆಯಾಗಿದ್ದರು. ಈ ಸಂಬಂಧ 'ಕನ್ನಡಪ್ರಭ' ವಿಸ್ತೃತ ವವರದಿ ನೀಡಿತ್ತು. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಇಲ್ಲಿನ ಚನ್ನಕೇಶವ ನಗರಕ್ಕೆ ಭೇಟಿ ನೀಡಿ ವಂಚನೆಗೊಂಡಿರುವ ಮಹಿಳೆಯರನ್ನು ವಿಚಾರಣೆ ನಡೆಸಿ ಬಡ ಮಹಿಳೆಯರಿಗೆ ಮೋಸ ಮಾಡಿರುವ ವಂಚಕರಿಗೆ ಬಲೆ ಬೀಸಿದ್ದಾರೆ. ವಂಚನೆಗೆ ಒಳಗಾಗಿರುವ ಚಂದ್ರಮ್ಮ, ನೇತ್ರಾವತಿ, ನಾಗರತ್ನ, ಪಾರ್ವತಿ, ದಾಕ್ಷಾಯಣಿ, ರುಕ್ಮಿಣಿ, ಪ್ರಿಯಾ, ಶಬಾನಾ ಮುಂತಾದ ಮಹಿಳೆಯರು ಮಾತನಾಡಿ, ತಾವು ಮೋಸಹೋದ ಬಗ್ಗೆ ವಿವರಿಸಿದರು.
ಪಟ್ಟಣದ ಶಂಕರದೇವರ ಪೇಟೆ, ಬಂಟೇನಹಳ್ಳಿ, ಹೆಬ್ಬಾಳು, ಕೋಗಿಲೆಮನೆ, ಬಿಕ್ಕೋಡು ಸೇರಿದಂತೆ ತಾಲೂಕಿನ ಹಲವೆಡೆ ಸ್ವ ಸಹಾಯ ಸಂಘದ ಮಹಿಳೆಯರನ್ನು ಫೈನಾನ್ಸ್ ನೀಡುವ ನೆಪದಲ್ಲಿ ವಂಚಿಸಿರುವ ಬಗ್ಗೆ ಮಹಿಳೆಯರು ದೂರು ನೀಡಲು ಮುಂದಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.