ಹಾಸನ

ಮಣ್ಣಿನ ಸಂರಕ್ಷಣೆಯಿಂದ ಜೀವ ವೈವಿಧ್ಯ ರಕ್ಷಣೆ, ಉತ್ತಮ ಆರೋಗ್ಯ ವರ್ಧನೆ'

ಹಾಸನ: ಸೂಕ್ಷ್ಮ ಜೀವಿಗಳ ಸಂರಕ್ಷಣೆ, ಉತ್ತಮ ಕೈತೋಟದ ನಿರ್ವಹಣೆ, ಮಣ್ಣಿನ ಸಂರಕ್ಷಣೆಯಿಂದ ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಉತ್ತಮ ಆರೋಗ್ಯ ವರ್ಧನೆಗೆ ಕಾರಣ ವಾಗುತ್ತದೆ ಎಂದು ಜಿಪಂ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ರವಿ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಪ್ರತಿಧ್ವನಿ ಸಂಸ್ಥೆ ಸಹಯೋಗದಲ್ಲಿ ದಾಸರ ಕೊಪ್ಪಲು ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದಲ್ಲಿ ಅವರು ಮಾತನಾಡಿದರು.  ಸಂಘಗಳು ಪ್ರತಿ ವಾರ ಸಭೆ ಸೇರಿ ಹಣಕಾಸಿನ ವಿಚಾರವನ್ನಷ್ಟೇ ಅಲ್ಲದೇ ಸಂಸ್ಥೆಗಳು ಆಯೋಜಿಸುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ತಿಳಿವಳಿಕೆ ಪಡೆಯಬೇಕು. ತೋಟಗಾರಿಕಾ ಇಲಾಖೆಯ ಸವಲತ್ತು ಸದುಪಯೋಗಪಡಿಸಿ ಕೊಳ್ಳಬೇಕು. ಇಂತಹ ವೇದಿಕೆ ಕಲಿಸುವ ಸ್ವಯಂ ಸೇವಾ ಸಂಸ್ಥೆಗಳು ಶ್ಲಾಘನೀಯ ಎಂದರು. ಸಂಸ್ಥೆಯ ನಿರ್ದೇಶಕಿ ಎಚ್.ಎಲ್. ಮೋಹನಕುಮಾರಿ ಮಾತನಾಡಿ, ಕೈತೋಟ ನಿರ್ವಹಣೆ ಮಹಿಳೆಯರ ಆದ್ಯ ಕರ್ತವ್ಯ. ಇದರಿಂದ ಆದಾಯ, ಆರೋಗ್ಯ, ಜೀವ ವೈವಿಧ್ಯ ಸಂರಕ್ಷಣೆಗೆ ನಾಂದಿ ಎಂದರು. ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕರು, ಅಂಜಲಿ ರವಿ ಮಾತನಾಡಿದರು. ಪ್ರತಿ ಸಂಘಕ್ಕೆ 2 ರಂತೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್