ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇತಿಹಾಸದ ತಪ್ಪು ಮರುಕಳಿಸದಿರಲಿ

Parashurama
Updated On : 1 Mar 2013, 9:56 am

ಹೊಳೆನರಸೀಪುರ: ಇತಿಹಾಸದ ದಾಖಲೆಗಳನ್ನು ತಿರುಚಲು ಇತ್ತೀಚಿಗೆ ಯತ್ನಿಸಲಾಗುತ್ತಿದೆ. ಇತಿಹಾಸದಲ್ಲಿರುವ ತಪ್ಪುಗಳನ್ನು ತಿದ್ದದೇ ಇತಿಹಾಸವನ್ನು ನಿರೂಪಿಸುತ್ತಾ ಬಂದಿದ್ದೇವೆ. ಈಗಾಗಲೇ ದಾಖಲಾಗಿರುವ ತಪ್ಪುಗಳನ್ನು ತಿದ್ದದೇ ಹೋದಲ್ಲಿ ಮುಂದಿನ ಪೀಳಿಗೆಗೂ ಇದೇ ತಪ್ಪುಗಳು ಪುನರಾವರ್ತನೆಯಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಕಲೇಶ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಪರಂಪರಾ ಕೂಟ ಶುಕ್ರವಾರ ಆಯೋಜಿಸಿದ್ದ 'ಹೊಯ್ಸಳ ಇತಿಹಾಸದ ಮೇಲೊಂದು ಹೊಸ ಬೆಳಕು' ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಇತಿಹಾಸವನ್ನು ಓದುವಾಗ ಅಥವಾ ಬರೆಯುವಾಗ ಇತಿಹಾಸಕಾರರು ಬಹಳ ಜಾಗರೂಕತೆಯಿಂದ ವರ್ತಿಸಬೇಕು. ಇದರೊಂದಿಗೆ ಸತ್ಯ ಹಾಗೂ ಅನ್ವೇಷಣೆಗಳನ್ನೂ ಆಯಾ ನೆಲೆಗಟ್ಟಿನ ಮೇಲೆ ಯೋಚಿಸಿ ದಾಖಲಿಸಬೇಕಾದ ಅಗತ್ಯವಿದೆ ಎಂದರು.
ಹೊಯ್ಸಳ ಇತಿಹಾಸದ ಮೂಲ ಪುರುಷ ಸಳ ಎಂಬುದಾಗಿ ನಾವು ಓದುತ್ತಾ ಬಂದಿದ್ದೇವೆ. ಆದರೆ, ಈ ಬಗ್ಗೆ ಇಂದಿನ ಸಂಶೋಧನೆಗಳು ಹೊಯ್ಸಳ ಉದಯದ ಕಥೆಯನ್ನು ಬೇರೆ ರೀತಿಯಲ್ಲೇ ನಿರೂಪಿಸುತ್ತವೆ ಎಂದರು.
ಹೊಯ್ಸಳ ಸಾಮ್ರಾಜ್ಯದ ಮೂಲ ಪುರುಷ ಸಳನಲ್ಲ: ಹೊಯ್ಸಳ ಸಾಮ್ರಾಜ್ಯದ ಮೂಲ ಪುರುಷ ಸಳನಲ್ಲ ಎಂಬುದು ಒಂದು ವೀರಗಲ್ಲು ಶಾಸನದಿಂದ ತಿಳಿದುಬರುತ್ತದೆ ಎಂಬುದಾಗಿ ದಾಖಲೆಗಳ ಸಮೇತ ಒಂದು ಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಹಾಗೆಯೇ ಶ್ರವಣಬೆಳಗೂಳದ ಚಾವುಂಡರಾಯನ ಬಗ್ಗೆ ಇರುವ ಐತಿಹಾಸಿಕ ಗೊಂದಲಗಳನ್ನೂ ತಮ್ಮ ಭಾಷಣದಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ 'ಹೇಮಾವತಿ'ಯನ್ನು ಡಾ. ಸಕಲೇಶ್ ಅವರಿಂದಲೇ  ಬಿಡುಗಡೆಗೊಳಿಸಲಾಯಿತು. ವಾರ್ಷಿಕ ಸಂಚಿಕೆಯ ಬಗ್ಗೆ ಮಾತನಾಡಿದ ಡಾ. ಬಿ.ಸಿ. ಮಲ್ಲೇಶ್ ಈ ಸಂಚಿಕೆ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣವೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ  ಪ್ರೊ.ಎಂ.ಬಿ ಇರ್ಷಾದ್ ಹೊಯ್ಸಳ ಇತಿಹಾಸದ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು, ಅದರಲ್ಲಾಗಿರುವ ಬದಲಾವಣೆಗಳು ಹೊಯ್ಸಳ ಇತಿಹಾಸವನ್ನು ಆಳವಾಗಿ ತಿಳಿಯುವಲ್ಲಿ ಡಾ. ಸಕಲೇಶ್ ಅವರ ಶ್ರಮವನ್ನು ಶ್ಲಾಘಿಸಿದರು. ವಿಚಾರ ಸಂಕಿರಣದಲ್ಲಿ ಹಾಸನದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಲಿಂಗರಾಜು, ಪ್ರೊ. ನಯನ ತಾರಾ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments