ಎಲ್ಐಸಿ ಪ್ರತಿನಿಧಿಗಳ ಪ್ರತಿಭಟನೆ
ಹಾಸನ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಎಲ್ಐಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಕೆಲವು ಮಾರಕ ಕಾನೂನುಗಳನ್ನು ತಂದು ಪ್ರತಿನಿಧಿಗಳ ಕುಟುಂಬಗಳನ್ನು ಬೀದಿಗೆ ಬೀಳಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1938ರ ಏಜೆಂಟರ್ ಕಾನೂನನ್ನು ತಿದ್ದುಪಡಿ ಮಾಡಬಾರದು. 2008 ರ ಇನ್ಸೂರೆನ್ಸ್ ಅಮೆಂಡ್ಮೆಂಟ್ ಬಿಲ್ಲನ್ನು ತಿದ್ದುಪಡಿ ಮಾಡಬಾರದು. ಸ್ವರೂಪ್ ಕಮಿಟಿ ವರದಿಯ ಶಿಫಾರಸ್ಗೆ ಜೀವ ವಿಮಾ ನಿಗದ ಪ್ರತಿನಿಧಿಗಳ ತೀವ್ರ ವಿರೋಧವಿದೆ. ಗ್ರ್ಯಾಚ್ಯುಟಿ ನೀಡಬೇಕು. ಪಾಲಿಸಿದಾರರ ಬೋನಸ್ ಏರಿಸಬೇಕು ಹಾಗೂ ಎಲ್ಐಸಿಯನ್ನು ರಕ್ಷಿಸಿ ಉಳಿಸಬೇಕು ಎಂದು ನಗರದ ಮಿನಿ ವಿಧಾನಸೌಧ ಬಳಿ ಇರುವ ಎಲ್ಐಸಿ ಕಚೇರಿ ಎದುರು ಜೀವವಿಮಾ ಪ್ರತಿನಿಧಿಗಳು ಕೆಲ ಸಮಯ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ರುದ್ರೇಗೌಡ, ಅರುಣಕುಮಾರ್, ಬೋರೇಗೌಡ, ಸುರೇಶ್ಕುಮಾರ್, ಈಶ್ವರ ಚಂದ್ರು, ವಸಂತ್ಕುಮಾರ್, ಶಿವಣ್ಣ, ನಿರ್ಮಲಾದೇವಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.