ಕರಾಟೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ
ಹೊಳೆನರಸೀಪುರ: ಇಲ್ಲಿನ ಕರಾಟೆ-ಡೋ ಗೋಜುಕನ್ ಅಸೋಸಿಯೇಷನ್-ಇಂಡಿಯಾದ ಕರಾಟೆ ತರಬೇತಿ ಶಾಲೆಯ ಮಕ್ಕಳಿಗಾಗಿ ನಡೆಸಲಾದ ಅರ್ಹತಾ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿವಿಧ ಬೆಲ್ಟ್ ವಿತರಣೆ ಹಾಗೂ ಅರ್ಹತಾ ಪತ್ರಗಳನ್ನು ವಿತರಿಸಲಾಯಿತು.
ಮುಖ್ಯ ತರಬೇತುದಾರ ಹಾಸನ ಜೋನ್ನ ಹಾಗೂ ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಸೆಂಪೈಯಿ ಪುಟ್ಟಸ್ವಾಮಿ ಮಾರ್ಗದರ್ಶನದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಫೆ.2ರಂದು ನಡೆದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ವಿವಿಧ ಬಣ್ಣಗಳ ಬೆಲ್ಟ್ಗಳನ್ನು ಹಾಗೂ ಅರ್ಹತಾ ಪತ್ರಗಳನ್ನು ಪಟ್ಟಣದ ಎಸ್ಎಲ್ಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೊ.ಸು.ರಮೇಶ್ ವಿತರಿಸಿದರು.
ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಉತ್ತಮ ಪ್ರತಿಭೆಗಳನ್ನು ಪ್ರಾಮಾಣಿಕವಾಗಿ ಗುರುತಿಸುವಲ್ಲಿ ನಾವೇ ಹಿಂದೆ ಬಿದ್ದಿದ್ದೇವೆ. ಕರಾಟೆ ಎಂಬುದು ಆತ್ಮರಕ್ಷಣೆಯ ಕಲೆಯಷ್ಟೇ ಅಲ್ಲ, ಅದು ಒಂದು ಕೌಶಲ್ಯ ಹಾಗೂ ಶಿಸ್ತುಬದ್ಧ ಜೀವನಕ್ಕೆ ಮುನ್ನುಡಿಯಾಗಿದೆ. ದೇಹಾರೋಗ್ಯವನ್ನೂ ವೃದ್ಧಿಸಲು ಕರಾಟೆ ಸಹಕಾರಿಯಾಗಿದೆ ಎಂದು ತರಬೇತುದಾರ ಸೆಂಪೈಯಿ ಪುಟ್ಟಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಶಿಕ್ಷಕಿ ಹಾಗೂ ಶ್ರೀ ವೆಂಕಟೇಶ್ವರ ಎಜುಕೇಷನ್ ಟ್ರಸ್ಟ್ನ ಶಿಕ್ಷಕಿಯೂ ಆದ ಆರ್.ಕುಮುದಾ, ಪಟ್ಟಣದ ಕಿಯೋನಿಕ್ಸ್ ತರಬೇತಿ ಸಂಸ್ಥೆಯ ವ್ಯವಸ್ಥಾಪಕರಾದ ಜಯಶಂಕರ್ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.