ನೀತಿ ಸಂಹಿತೆ ಉಲ್ಲಂಘನೆ: ಅಭ್ಯರ್ಥಿಗಳಿಗೆ ಎಚ್ಚರಿಕೆ
ಹಾಸನ: ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸದಂತೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಮುಖ್ಯ ಜಾಗೃತಾಧಿಕಾರಿ ಹಾಗೂ ಚುನಾವಣಾ ವೀಕ್ಷಕ ಕೆ.ಎಚ್. ನರಸಿಂಹ ಮೂರ್ತಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ನಗರಸಭೆ ಚುನಾವಣೆಯ 35 ವಾರ್ಡ್ಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಭೆಯನ್ನು ನಡೆಸಿ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅಭ್ಯರ್ಥಿಗಳು ಮನಸೋ ಇಚ್ಛೆ, ಬ್ಯಾನರ್ಗಳು, ಕರಪತ್ರಗಳನ್ನು ಹಂಚಬಾರದು. ಬ್ಯಾನರ್ ಹಾಕಲು ನಗರಸಭೆಯಿಂದ ಅನುಮತಿ ಪಡೆದುಕೊಳ್ಳಬೇಕು.
ಒತ್ತಡ ಬೇಡ: ಮತದಾರರ ಬಳಿ ಹೋಗಿ ಅಭ್ಯರ್ಥಿಗಳು ಮತಯಾಚಿಸುವಾಗ ಜಾತಿ, ಧರ್ಮದ ಬಗ್ಗೆ ಕೇಳಬಾರದು ಹಾಗೂ ಅವರ ಖಾಸಗಿ ಜೀವನದ ಬಗ್ಗೆ ಕೇಳಿ ಮತ ಹಾಕುವಂತೆ ಬೆದರಿಕೆ ಒಡ್ಡುವಂತಿಲ್ಲ. ಧಾರ್ಮಿಕ ಸ್ಥಳಗಳಲ್ಲೂ ಪ್ರಚಾರ ಕಾರ್ಯ, ಸಭೆಗಳನ್ನು ನಡೆಸುವಂತಿಲ್ಲ. ಜಾತಿ ಆಧಾರದ ಮೇಲೆ ಮತ ಹಾಕುವಂತೆ ಮತದಾರರಲ್ಲಿ ಒತ್ತಡ ಹೇರುವಂತಿಲ್ಲ ಎಂದರು.
ಮಾ.5ರ ಬೆಳಗ್ಗೆ 7ರಿಂದ ಪ್ರಚಾರ ಕಾರ್ಯವನ್ನು ನಿಲ್ಲಿಸಬೇಕು. ಮತದಾನಕ್ಕೂ 48 ತಾಸುಗಳ ಮುಂಚೆಯೇ ಪ್ರಚಾರ ಕಾರ್ಯವನ್ನು ನಿಲ್ಲಿಸಬೇಕು. ಗುಂಪು ಗುಂಪಾಗಿ ಸಭೆ ಸೇರುವಂತಿಲ್ಲ. ಪ್ರಚಾರಕ್ಕೆ ಗರಿಷ್ಠ 5 ವಾಹನಗಳನ್ನು ಬಳಸಿಕೊಳ್ಳಬಹುದು. ಹ್ಯಾಂಡ್ ಬಿಲ್ಗಳ ಮೇಲೆ ಮುದ್ರಕರ ಹೆಸರುಗಳನ್ನು ಕಡ್ಡಾಯವಾಗಿ ಮುದ್ರಿಸಿರಬೇಕು. ಇಲ್ಲವಾದಲ್ಲಿ ಅದು ಅನಧಿಕೃತವಾಗಲಿದೆ ಎಂದರು. ಅಭ್ಯರ್ಥಿಗಳು ಚುನವಣೆ ವೇಳೆ ಮಾಡಿದ ವೆಚ್ಚದ ಬಗ್ಗೆ ಮಾಹಿತಿ ಹಾಗೂ ಅಭ್ಯರ್ಥಿಗಳ ಫಲಿತಾಂಶ ಘೋಷಣೆಯಾದ 30 ದಿನಗಳೊಳಗೆ ಬ್ಯಾಂಕ್ ಖಾತೆಯ ಪೂರ್ಣ ಮಾಹಿತಿ ನೀಡಬೇಕೆಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.