ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಪಿಡಿಒಗಳಿಗೆ ಕರೆ
ಆಲೂರು: ಧೈರ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಎಚ್.ಎಲ್. ಶಿವಬಸಪ್ಪ ಗ್ರಾಪ ಪಂಚಾಯ್ತಿ ಪಿಡಿಒಗಳಿಗೆ ಕರೆ ನೀಡಿದರು.
ತಾಲೂಕು ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದ ನಂತರ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಗ್ರಾಪಂ ಸದಸ್ಯರು ನಿಮಗೆ ತೊಂದರೆ ನೀಡಿದರೆ ಖುದ್ದಾಗಿ ನಮಗೆ ದೂರು ನೀಡಿ. ಅದನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಇಂದಿನ ಕಾಲದಲ್ಲಿ ಸಮಾಜ ಸೇವೆ ಮಾಡಲು ಬರುವ ರಾಜಕಾರಣೀಗಳ ಸಂಖ್ಯೆ ಬಲು ವಿರಳ. ಯಾವುದೇ ಜನಪ್ರತಿನಿಧಿ ತೊಂದರೆ ನೀಡಿದಲ್ಲಿ ಧೈರ್ಯವಾಗಿ ಪ್ರತಿಭಟಿಸಿ, ಅಂದರೆ ಜಗಳವಾಡುವುದಲ್ಲ. ನಿಮ್ಮ ಪ್ರತಿಭಟನೆ ಸಾತ್ವಿಕವಾಗಿರಲಿ. ಜಗಳವಾಡುವುದು ಹೇಡಿಗಳ ಲಕ್ಷಣ. ಶಾಂತಿಯಿಂದ ಸಮಸ್ಯೆಯನ್ನು ನಿಭಾಯಿಸುವವನೇ ನಿಜವಾದ ಧೈರ್ಯಶಾಲಿ ಎಂದರು. ಪಿಡಿಒಗಳು ಸದಸ್ಯರೊಂದಿಗೆ ಜಗಳಕ್ಕೆ ನಿಂತರೆ ಗ್ರಾಪಂ ಚಿಲ್ಲರೆ ಅಂಗಡಿಯಾಗುತ್ತದೆ. ಧೈರ್ಯ, ಪ್ರಾಮಾಣಿಕತೆಯಿಂದಿದ್ದರೆ ಆರೋಗ್ಯವಂತರಾಗುವ ಜತೆ ನೆಮ್ಮದಿಯ ಜೀವನ ಸಾಗಿಸಬಹುದು. ನೀವುಗಳು ಶ್ರದ್ದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಜನ ಪ್ರತಿನಿಧಿಗಳೂ ಸರಿದಾರಿಗೆ ಬರುತ್ತಾರೆ. ಅವ್ಯವಹಾರ ಕಂಡು ಬಂದರೆ ವಿರೋಧಿಸಿ. ಅಂಥ ಕಾರ್ಯಕ್ಕೆ ಒತ್ತಾಯಿಸಿದರೆ ನಿರಾಕರಿಸಿ ಎಂದು ನೀತಿ ಪಾಠ ಮಾಡಿದರು. ಲೋಕಾಯುಕ್ತ ಸಬ್ಇನ್ಸ್ಪೆಕ್ಟ್ ಶಾಂತಿನಾಥ್ ಜೆ ಹೊಣ್ಣೂರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.