ಬಿಜೆಪಿ ಭ್ರಷ್ಟಾಚಾರಕ್ಕೆ ಜೆಡಿಎಸ್ಸೇ ಕಾರಣ
ಚನ್ನರಾಯಪಟ್ಟಣ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರವೆಸಗಲು ಜೆಡಿಎಸ್ ಕಾರಣ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ಪಾಶ ಹೇಳಿದರು. ಪಟ್ಟಣದಲ್ಲಿ ಪುರಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ತಾವು ಅಧಿಕಾರಕ್ಕೆ ಬರುವುದಿಲ್ಲವೆಂದು ತಿಳಿದ ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರು. ಧರ್ಮಸಿಂಗ್ ಜತೆ ಕೈ ಜೋಡಿಸಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಆದರೆ ಮಗನನ್ನು ಮುಖ್ಯಮಂತ್ರಿ ಮಾಡುವ ಕಾರಣದಿಂದ ಮಾಜಿ ಪ್ರಧಾನಿ ದೇವೇಗೌಡ ಅವರು ಅಧಿಕಾರಕ್ಕಾಗಿ ರಾಜ್ಯವನ್ನು ಬಲಿ ಕೊಟ್ಟರು ಎಂದು ತಿಳಿಸಿದರು. ಜನತೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ದೇವೇಗೌಡರ ಆಟ ನಡೆಯುವುದಿಲ್ಲ. ತಮ್ಮ ಮಕ್ಕಳು ಹಾಗೂ ಸಂಬಂದಿಕರ ಪಕ್ಷವಾಗಿಟ್ಟುಕೊಳ್ಳಬೇಕಾಗುತ್ತದೆ ಎಂದು ಮೂದಲಿದರು. ಮಾಜಿ ಶಾಸಕ ಸಿ.ಎಸ್ಪುಟ್ಟೇಗೌಡ ಮಾತನಾಡಿ ಜಿಲ್ಲೆಯಲ್ಲಿ ದೇವೇಗೌಡ ಮತ್ತು ಅವರ ಮಕ್ಕಳ ಕೈಯಲ್ಲಿ ಅಧಿಕಾರ ಹೆಪ್ಪುಗಟ್ಟಿ ನಿಂತಿದೆ ಮುಂದಿನ ದಿನಗಳಲ್ಲಿ ಅದನ್ನು ಕರಗಿಸುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ವಾಸವಿ ಶಾಲೆಗೆ ಮೂರು ಪ್ರಶಸ್ತಿ
ಹಾಸನ: ರಾಜ್ಯ ಮಟ್ಟದ ವಿಕಲಚೇತನ ಕ್ರೀಡಾಕೂಟದಲ್ಲಿ ನಗರದ ವಾಸವಿ ಶಾಲೆಗೆ ಮೂರು ಪುರಸ್ಕಾರ ದೊರೆತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದ 2013-14ನೇ ಸಾಲಿನ ರಾಜ್ಯ ಮಟ್ಟದ ವಿಕಲಚೇತನರ ಕ್ರೀಡಾಕೂಟದಲ್ಲಿ, ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ್ದ ನಗರದ ವಾಸವಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನಾನಾ ವಿಭಾಗಗಳಲ್ಲಿ ಬಹುಮಾನಿತರಾಗಿದ್ದಾರೆ. ಎಚ್.ವೈ. ಸಮರ್ಥ್ 14ರ ವಯೋವುತಿಯ ವಿಭಾಗದ ಒಂದು ಕೈ ನ್ಯೂನತೆಯ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ಪ್ರಥಮ ಮತ್ತು 50ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಇದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆರ್.ಸಿ. ಹರ್ಷವರ್ಧನ 17ರ ವಯೋವುತಿ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ತಣತೀಯ ಸ್ಥಾನ ಪಡೆದಿದ್ದಾನೆ. ಈ ವಿದ್ಯಾರ್ಥಿಗಳಿಗೆ ವಾಸವಿ ವಿದ್ಯಾಕೇಂದ್ರ ಟ್ರಸ್ಟಿನ ಆಡಳಿತ ಮಂಡಳಿ, ಶಿಕ್ಷಕ ಸಮುದಾಯ ಶುಭ ಕೋರಿದೆ.
ಮನ ಮೆಚ್ಚಿದ ಹಾಡುಗಳು
ಹಾಸನ: ಹಾಸನ ಆಕಾಶವಾಣಿ ಕೇಂದ್ರವು ಇದೇ ಪ್ರಥಮ ಬಾರಿಗೆ ಶ್ರೋತೃಗಳ ಪತ್ರಗಳನ್ನಾಧರಿಸಿದ ಮನ ಮೆಚ್ಚಿದ ಹಾಡುಗಳು ಕಾರ್ಯಕ್ರಮವನ್ನು ಮಾರ್ಚ್ 3ರಿಂದ ಪ್ರತಿ ಭಾನುವಾರ ಬೆಳಗ್ಗೆ 11 ರಿಂದ 11.30 ರವರೆಗೆ ಸರಣಿ ರೂಪದಲ್ಲಿ ಬಿತ್ತರಿಸಲಿದೆ ಎಂದು ಕಾರ್ಯಕ್ರಮ ನಿರ್ವಾಹಕ ನಾರಾಯಣ ಭಟ್ ತಿಳಿಸಿದ್ದಾರೆ. ಶ್ರೋತೃಗಳು ತಮ್ಮ ಮನಸ್ಸಿಕ್ಕೆ ತುಂಬ ಇಷ್ಟವಾದ ಚಿತ್ರಗೀತೆಗಳ ಕುರಿತು ತಮ್ಮ ಭಾವನೆಗಳನ್ನು ಈ ಕಾರ್ಯಕ್ರಮದಲ್ಲಿ ಪತ್ರಮುಖೇನ ಹಂಚಿಕೊಂಡಿದ್ದಾರೆ. ಆಕಾಶವಾಣಿಯ ಧ್ವನಿಭಂಡಾರದಿಂದ ಆಯ್ದ ಜನಪ್ರಿಯ ಮತ್ತು ಅಚ್ಚುಮೆಚ್ಚಿನ ಚಿತ್ರಗೀತೆಗಳನ್ನು, ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ವಿಶಿಷ್ಟ ನಿರೂಪಣೆಯೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಅತ್ಯುತ್ತಮ ಪತ್ರ ಬರೆದ ಆಯ್ದ ಶೋತೃಗಳಿಗೆ ಪ್ರಾಯೋಜಕ ಜಿ.ಎಲ್.ಆಚಾರ್ಯ ಜುವೆಲರ್ಸ್ ವತಿಯಿಂದ ಬಹುಮಾನ ನೀಡಲಾಗುವುದು ಎಂದಿದ್ದಾರೆ.
ಶಾಲಾ ಕಟ್ಟಡ ಉದ್ಘಾಟನೆ
ಹಾಸನ: ನಗರದ ತಣ್ಣೀರುಹಳ್ಳದಲ್ಲಿರುವ ಹೊಯ್ಸಳ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ನೂತನ ಕಟ್ಟಡ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭ ಉದ್ಘಾಟಿಸಿದ ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಸುಮಾರು ಇನ್ನೂರು ದೇಶಗಳು ಭಾಗವಹಿಸಿದ್ದ ಪ್ಯಾರಾ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗಳಿಸಿದ ಎಚ್.ಎನ್.ಗಿರೀಶ್ ಸಾಧನೆ, ಹಿರಿಮೆ, ಗರಿಮೆಗಳನ್ನು ಕೊಂಡಾಡಿ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಿರೀಶ್, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.