ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿ ದಿನದ ಖರ್ಚು,ವೆಚ್ಚ: ಮಾಹಿತಿಗೆ ಸೂಚನೆ (ಸುದ್ದಿ ಸಂಕ್ಷೇಪ)

Parashurama
Updated On : 4 Mar 2013, 12:13 pm

ಆಲೂರು: ಪಟ್ಟಣ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಕ್ಷಣದಿಂದಲೇ ಪ್ರತಿದಿನದ ಖರ್ಚು ವೆಚ್ಚದ ಮಾಹಿತಿಯನ್ನು ಚುನಾವಣಾಧಿಕಾರಿಗೆ ನೀಡದಿದ್ದರೆ ಮೂರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ವಂಚಿತರಾಗಬೇಕಾಗುತ್ತದೆ ಎಂದು ಚುನಾವಣಾಧಿಕಾರಿ ಸಂತೋಷಕುಮಾರ್, ಎ. ಟಿ. ಮಲ್ಲೇಶ್ ಎಚ್ಚರಿಕೆ ನೀಡಿದರು.
   ಪಟ್ಟಣದ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
   ಅಭ್ಯರ್ಥಿಗಳು ನಮೂನೆಯಲ್ಲಿ ಸಿದ್ಧಪಡಿಸಿದ ವರದಿಯನ್ನು ಚುನಾವಣಾಧಿಕಾರಿಗೆ ನೀಡಿ ಸ್ವೀಕೃತಿ ಪ್ರತಿ ಪಡೆಯಬೇಕು. ಚುನಾವಣೆ ಮುಗಿದ ಮೂರು ತಿಂಗಳಲ್ಲಿ ಅಭ್ಯರ್ಥಿ ನೀಡಿದ ವರದಿಯಲ್ಲಿ ಲೋಪದೋಷ ಕಂಡುಬಂದಾಗ ಮೇಲಿನಂತೆ ಶಿಕ್ಷೆಗೆ ಒಳಗಾಗುತ್ತಾರೆ.
 ಧಾರ್ಮಿಕ ಸ್ಥಳಗಳಲ್ಲಿ, ಶಾಲಾ ಕಾಲೇಜು ಗಳಲ್ಲಿ, ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡಬಾರದು. ಅಭ್ಯರ್ಥಿಗಳು ಶಾಂತಿಯುತ ಮತದಾನಕ್ಕೆ ಸಹಕರಿಸಬೇಕು. ವೀಕ್ಷಕರಾಗಿ ಕೃಷ್ಣಮೂರ್ತಿ, ಶ್ರೀನಿವಾಸ್ ಕಾರ್ಯ ನಿರ್ವಹಿಸುವರು. ನೀತಿ ಸಂಹಿತೆ ಅಧಿಕಾರಿಗಳಾಗಿ ಎಇಇ ಶಿವಕುಮಾರ್, ಪಿಐ ಜಯಲಕ್ಷ್ಮಿ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು. ಅಬಕಾರಿ ಅಧಿಕಾರಿ ರಹೀಮ್ ಮಾತನಾಡಿ, ಚುನಾವಣೆಗೆ ಸಂಂಧಿಸಿದಂತೆ ಮದ್ಯ ಹಂಚುವುದು, ಮದ್ಯಪಾನ, ಬಾಡೂಟ ದಂತಹ ಪ್ರಕರಣಗಳು ಜರುಗುತ್ತಿರುವುದನ್ನು ಗಮನಕ್ಕೆ ತಂದರೆ, ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್‌ಐ ರಾಮೇಗೌಡ ಇದ್ದರು.
ಕಾನೂನು ಅರಿವು ಅಗತ್ಯ ಕಾರ್ಯಕ್ರಮ
ಆಲೂರು: ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯವಿದ್ದು, ಗ್ರಾಮಮಟ್ಟದಿಂದ ಮಹಿಳೆಯರಿಗೆ ಜಾಗಣತಿ ಮೂಡಿಸಬೇಕು ಎಂದು ನ್ಯಾಯಾಧೀಶ ವಿ. ಹನುಮಂತಪ್ಪ ಹೇಳಿದರು.  
 ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರು ಶಿಕ್ಷಣವಂತರಾಗಿ ಆತ್ಮವಿಶ್ವಾಸದಿಂದ ಸ್ವಾವಲಂಬಿಗಳಾಗಿ ಸ್ವತಂತ್ರ್ಯವಾಗಿ ಬದುಕಲು ಚಿಂತಿಸಬೇಕು ಎಂದರು. ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾರ್ಚ್ 9ರಂದು ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
   ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್, ಕಾರ್ಯದರ್ಶಿ ಕೆ.ಜಿ. ನಾಗರಾಜ್, ವಕೀಲ ಉಮೇಶ್, ಮಧು, ನೋಟರಿ ನಾಗರಾಜ್, ಸರ್ಕಾರಿ ಅಭಿಯೋಜಕರಾದ ವಿನಯರಾಣಿ, ಬಿಇಓ ಪುಷ್ಪಲತ, ಸಮಾಜಸೇವಕಿ ಶಾಹಿದ ಖಾತೂನ್, ಪಿಎಸ್‌ಐ ಸೋಮೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments