ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಎಸ್‌ವೈ ವಿರುದ್ಧ ಡಿವಿಎಸ್ ಪರೋಕ್ಷ ಟೀಕೆ

Parashurama
Updated On : 4 Mar 2013, 12:06 pm

ಹಾಸನ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇತರರ ತಂಡ ತಮ್ಮ ಮೇಲೆ ಆರೋಪ ಮಾಡುವ ಉದ್ದೇಶದಿಂದಲೇ ಹುಟ್ಟುಕೊಂಡಿದ್ದು, ಈ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ ಹಾಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಪರೋಕ್ಷವಾಗಿ ಯಡಿಯೂರಪ್ಪನವರ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ತಾನೆ ಜನಿಸಿದ ಮಗು ಬದುಕುತ್ತೋ  ಅಥವಾ ಸಾಯುತ್ತೋ ಅನ್ನೋ ಪರಿತಾಪ ಪೋಷಕರಿಗೆ ಕಾಡುತ್ತಿರುತ್ತದೆ. ಆದೇ ರೀತಿ ಹೊಸದಾಗಿ ಹುಟ್ಟಿಕೊಂಡಿರುವ ಪ್ರಾದೇಶಿಕ ಪಕ್ಷ ಕೆಜೆಪಿ ನಾಯಕರಿಗೂ ಪಕ್ಷ ಉಳಿಯುತ್ತೋ ಅಥವಾ ಸಾಯುತ್ತೋ ಅನ್ನೋ ಪಶ್ಚಾತಾಪ ಕಾಡುತ್ತಿದೆ ಎಂದು ಟೀಕಿಸಿದರು.
ಕೆಜೆಪಿ ನಾಯಕರು ಇನ್ನೊಬ್ಬರ ಮೇಲೆ ಅಪಪ್ರಚಾರ ಮಾಡುವ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಈಗಾಗಲೇ ಕೆಜೆಪಿ ಎಂಬ ಹಡಗಿನಿಂದ ಕೆಲ ನಾಯಕರು ಒಬ್ಬೊಬ್ಬರಾಗಿಯೇ ಪಕ್ಷ ಬಿಟ್ಟು ಹೊರ ನಡೆಯುತ್ತಿರುವುದರಿಂದ ಹಡಗು ಮುಳುಗುತ್ತಿದೆ. ಇದರಿಂದ ಸ್ವಯಂಕೃತ ಅಪರಾಧ ಮಾಡಿದವರಿಗೆ ಪಶ್ಚಾತಾಪ ಕಾಡುತ್ತಿದ್ದು, ಈ ಬಗ್ಗೆ ಹೆಚ್ಚು ಪ್ರತಿಕ್ರಿಸುವುದಿಲ್ಲ ಎಂದರು.
ಕೀಳು ರಾಜಕಾರಣಿ:  ಕೆಜೆಪಿ ಮುಖಂಡ ಎಂ.ಡಿ.ಲಕ್ಷ್ಮಿನಾರಾಯಣ ಅವರದ್ದು, ಕೀಳು ರಾಜಕಾರಣವಾಗಿದೆ ಎಂದು ಟೀಕಿಸಿದ ಅವರು, ಹೊಲಸು ಇದ್ದಾಗ ಹೇಗೆ ಮೂಗು ಮುಚ್ಚಿಕೊಳ್ಳುತ್ತೇವೋ ಅದೇ ರೀತಿ ಹೊಲಸು ರಾಜಕಾರಣ ಮಾಡುವವರನ್ನು ತೊಲಗಿಸಬೇಕು. ಅವರ ಸುಮಾರು ಐದಾರು ತಿಂಗಳ ರಾಜಕಾರಣದ ನಡಳಿಕೆಯಿಂದ ಕೀಳು ರಾಜಕಾರಣ ತಿಳಿಯುತ್ತದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಸಿದ್ಧ:  ಕಳೆದ 50 ವರ್ಷಗಳಲ್ಲಿ ಯಾರು ನೀಡದಂತಹ ವಿಶೇಷ ಅನುದಾನವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡುವ ಮೂಲಕ ಸಮರ್ಪಕವಾಗಿ ಪಕ್ಷ ಆಡಳಿತ ನಡೆಸಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಸಂಪೂರ್ಣವಾಗಿ ಸಿದ್ಧವಾಗಿದೆ. ಈ ಬಾರಿ ರಾಜ್ಯದಲ್ಲಿ 2500ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ ಹಾಗೂ ಹಾಸನ ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದರು.
ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ಪೂರ್ವಭಾವ ಪರೀಕ್ಷೆ ಅಂತ ಹೇಳುತ್ತಿದ್ದಾರೆ. ಆದರೆ ಅದು ನಮ್ಮ ಪಕ್ಷಕ್ಕೆ ಸಲ್ಲದು. ಚುನಾವಣೆಯ ಭಯದಿಂದ ಪಕ್ಷ ಯಾವುದೇ ಕಾರಣಕ್ಕೂ ಸ್ಥಳೀಯ ಸಂಸ್ಥೆ ಚುನಾವಣೆ ಬೇಡ ಅಂತ ಹೇಳಿಲ್ಲ. ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ಹಾಗೂ ಇತರೆ ವರ್ಗಗಳಿಗೆ ಹೆಚ್ಚಿನ ಮೀಸಲಾತಿ ಲಭ್ಯವಾಗಲಿ ಎಂಬ ಕಾರಣಕ್ಕೆ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸಲಾಯಿತೇ ವಿನಾ ಪಲಾಯನ ಮಾಡಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿ ನೇತೃತ್ವದಲ್ಲಿ ಚುನಾವಣೆ ಸೂಕ್ತ:  ಇವತ್ತಿನ ರಾಜಕೀಯ ಸನ್ನಿವೇಶಗಳನ್ನು ನೋಡಿದಾಗ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಮುನ್ನಡೆಯುವುದು ಸೂಕ್ತವಾಗಿದೆ ಎಂದ ಅವರು, ಜನರು ಅಭಿವೃದ್ಧಿ ಕೆಲಸ ಕಾಯಂರ್ಗಳನ್ನು ಕೇಳುತ್ತಾರೆ. ಆದರೆ ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿರುವುದು ದುರ್ದೈವವಾಗಿದೆ ಎಂದರು.
 ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್‌ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಕಮಲಕುಮಾರ್, ಮಂಜುನಾಥ್ ಶರ್ಮಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments