ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಎಸ್‌ವೈ ಸಾಧನೆಯನ್ನೇ ಬಿಜೆಪಿ ತನ್ನ ಸಾಧನೆ ಎಂದಿರುವುದು ನಾಚಿಕೆಗೇಡು

Parashurama
Updated On : 4 Mar 2013, 12:12 pm

ಬೇಲೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ನಡೆದ ಸಾಧನೆಗಳನ್ನು ತನ್ನದೆಂದೇ ಬಿಂಬಿಸಿ ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಿರುವ ಬಿಜೆಪಿ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಕೆಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ್ ಟೀಕಿಸಿದರು.
ಪಟ್ಟಣದ ಜೆ.ಪಿ.ನಗರ ವಾರ್ಡಿನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವ ಸ್ಥಳಿಯ ಸಂಸ್ಥೆ ಚುನಾವಣೆಯನ್ನು ಮೊದಲು ಸ್ವಾಗತಿಸಿದ್ದೇ ಕೆಜೆಪಿ. ಚನಾವಣೆ ನಡೆಯುವುದು ಬೇಡ ಎಂದು ಏನೆಲ್ಲಾ ತಂತ್ರವನ್ನು ಹೂಡಿದ್ದ ಬಿಜೆಪಿ ಈಗ ಪುಟಗಟ್ಟಲೆ ತನ್ನ 5 ವರ್ಷದ ಸಾಧನೆಯನ್ನು ಪ್ರಕಟಿಸುತ್ತಿದೆ. ತನ್ನದಲ್ಲದ ಸಾಧನೆಯನ್ನು ಬಿಂಬಿಸಿಕೊಳ್ಳುತ್ತಿರುವುದು ನಿಜವಾಗಿಯೂ ಅವರಿಗೆ ನಾಚಿಕೆಯಾಗಬೇಕು. ಮೊಬೈಲ್ ಮೂಲಕವೂ ಧ್ವನಿ ಮುದ್ರಿತ ಜಾಹಿರಾತನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಾಧನೆಯ ಹೇಳಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ: ಆದರೆ ಯಡಿಯೂರಪ್ಪನವರ ಮೂರುವರೆ ವರ್ಷದ ಆಡಳಿತದಲ್ಲಿ ಏನು ಕೆಲಸವಾಗಿತ್ತು, ಸದಾನಂದಗೌಡ, ಜಗದೀಶ್ ಶೆಟ್ಟರ ಆಡಳಿತಾವಧಿಯಲ್ಲಿನ ಸಾಧನೆ ಏನು ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕಿದೆ. ಅಲ್ಲದೆ ಯಡಿಯೂರಪ್ಪನವರು ಆರಂಭಿಸಿದ ಆನೇಕ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಶೆಟ್ಟರ್ ಕೈಬಿಟ್ಟಿರುವುದೇ ಸಾಧನೆಯಾಗಿದ್ದು ರಾಜ್ಯದಲ್ಲಿ ಆಡಳಿತ ಯಂತ್ರ ಕೆಟ್ಟಿದ್ದು ಜನತೆ ಬಿಜೆಪಿ ದುರಾಡಳಿತದಿಂದ ನರಳುತ್ತಿದ್ದಾರೆ ಎಂದು ದೂರಿದರು. ಸ್ಥಳೀಯ ಸಂಸ್ಥೆಗಳಿಗೆ ಗೌರವ ಸ್ಥಾನ ದೊರಕಿಸಿ ಕೊಟ್ಟಿದ್ದಲ್ಲದೆ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ ಏಕೈಕ ಮುಖ್ಯಮಂತ್ರಿ ಯಡಿಯೂಪ್ಪನವರು ಎಂದರೆ ತಪ್ಪಾಗಲಾರದು. ನಗರಸಭೆಗೆ 25 ಕೋಟಿ ರು. ಮಹಾನಗರ ಪಾಲಿಕೆಗಳಿಗೆ 100 ಕೋಟಿ ರು. ಒದಗಿಸಿ ಕೊಟ್ಟಿದ್ದಾರೆ.
ಅಲ್ಲದೆ ಪುರಸಭೆಗಳಿಗೆ ತಲಾ 5 ಕೋಟಿ ರು. ಮುಖ್ಯಮಂತ್ರಿ ಅನುದಾನದಿಂದ ನೀಡಿದ್ದಾರೆ. ಅಲ್ಲದೆ ವಿಶೇಷ ಅನುದಾನದ ಯೋಜನೆಯಡಿ 18 ಕೋಟಿ ರು.ಗಳನ್ನು ಪಟ್ಟಣದ ಪುರಸಭೆಗೆ ನೀಡಿದ್ದಾರಲ್ಲದೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಪಕ್ಷಭೇದವಿಲ್ಲದೆ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 4800 ಪೌರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕೆಜೆಪಿ 2500 ನೇರ ಅಭ್ಯರ್ಥಿಗಳು ಹಾಗೂ 500 ಪರೋಕ್ಷವಾಗಿ ಬೆಂಬಲ ಸೂಚಿಸಿ ಒಟ್ಟು 3 ಸಾವಿರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಕನಿಷ್ಠ ಶೇ.50 ರಷ್ಟು ಗೆಲವು ಕಾಣಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
10ರ ನಂತರ ಪಟ್ಟಿ ಬಿಡುಗಡೆ:  ವಿಧಾನಸಭೆ ಚುನಾವಣೆಗೆ 80 ಮಂದಿಯ ಪಟ್ಟಿಯನ್ನು ಸಿದ್ದಪಡಿಸಿದ್ದು, ಉಳಿದವರನ್ನು ಪಟ್ಟಿಗೆ ಸೇರಿಸಿ ಮಾ.10 ರ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ. ಬೇಲೂರು ಕ್ಷೇತ್ರದಿಂದ ಹಲವಾರು ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಯಾರು ಹಿತವರು ನಾಲ್ವರೊಳಗೆ ಎಂಬುದನ್ನು  ಕೆಜೆಪಿ ಹೈಕಮಾಂಡ್ ನಿರ್ಧರಿಸಲಿದೆ ಎಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments