ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೈಕ್ ರ್ಯಾಲಿ, ಜಾಗೃತಿ ಜಾಥಾ

Parashurama
Updated On : 3 Mar 2013, 11:36 am

ಹಾಸನ: ಕಾವೇರಿ ನೀರು ಉಳಿಸುವಂತೆ ಹಾಗೂ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಆಗ್ರಹಿಸಿ ವೀರಕನ್ನಡಿಗೆ ಟಿಪ್ಪು ಸೇನೆ ಕಾರ್ಯಕರ್ತರು ಭಾನುವಾರ ಬೈಕ್ ರ್ಯಾಲಿ ನಡೆಸಿದರು.
ಪ್ರತಿಭಟನಾಕಾರರು ಸಕಲೇಶಪುರದ ಮಂಜ್ರಾಬಾದ್ ಕೋಟೆಯಿಂದ ಬೈಕ್ ರ್ಯಾಲಿ ಪ್ರಾರಂಭಿಸಿ, ಹಾಸನ ನಗರದ ಮಹಾವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಶ್ರೀರಂಗಪಟ್ಟಣಕ್ಕೆ ರ್ಯಾಲಿ ಮುಂದುವರಿಸಿದರು.
ಪ್ರತಿ ಬಾರಿಯೂ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಕಾವೇರಿ ನೀರಿಗಾಗಿ ಹೋರಾಟ ಅನಿವಾರ್ಯವಾಗಿದೆ. ಮೊದಲೇ ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವುದರಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲು ಸಾಧ್ಯವಿಲ್ಲ. ಅಧಿಸೂಚನೆ ಹೊರಡಿಸದಂತೆ ಮನವಿ ಮಾಡಿದರೂ ಕೇಂದ್ರ ಸರ್ಕಾರ ಐತೀರ್ಪನ್ನು ಅನುಮೋದಿಸುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.
ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ವಿದ್ಯೆಯನ್ನು ಇತರರಿಗೂ ಕಲಿಸಿ ವಿದ್ಯಾದಾನದಿಂದ ಜ್ಞಾನಾಭಿವೃದ್ಧಿಯಾಗುತ್ತದೆ ಎಂದು ಪ್ರತಿಭಟನಾಕಾರರು ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾಲಯವನ್ನು ಸ್ಥಾಪಿಸುವಂತೆ ಆಗ್ರಹಿಸಿದರು. ಆಜಂ, ಅತಿಕ್, ರಾಜೇಗೌಡ, ಹೋಟೆಲ್ ಅಲಿ, ಮುಶಿರ್ ಇತರರು ಇದ್ದರು.
ಸಕಲೇಶಪುರ: ಮಂಜ್ರಾಬಾದ್ ಕೋಟೆಯಿಂದ ಶ್ರೀರಂಗಪಟ್ಟಣದ ದರಿಯಾ ದೌಲತ್‌ವರೆಗೆ ವೀರ ಕನ್ನಡಿಗ ಟಿಪ್ಪು ಸೇನೆ  ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಾಗೃತಿ ಬೈಕ್ ರ್ಯಾಲಿಗೆ ನಾಗರಿಕ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್ ಚಾಲನೆ ನೀಡಿದರು. ತಾಲೂಕಿನ ದೊಣಿಗಾಲ್ ಗ್ರಾಮದ ಮಂಜ್ರಾಬಾದ್ ಕೋಟೆಯ ದ್ವಾರದಿಂದ ಹೊರಟ ಬೈಕ್ ರ್ಯಾಲಿ  ಆಲೂರು, ಹಾಸನ, ಚನ್ನರಾಯಪಟ್ಟಣ ಮುಖಾಂತರ  ಶ್ರೀರಂಗಪಟ್ಟಣದ ದರಿಯಾ ದೌಲತ್ ತಲುಪಲಿದೆ. ರ್ಯಾಲಿಯಲ್ಲಿ ಟಿಪ್ಪುಸುಲ್ತಾನ್ ಅಭಿಮಾನಿಗಳು ಭಾಗವಹಿಸಿದ್ದರು.
ನಾಗರಿಕ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಮಲ್ನಾಡ್ ಮಹಬೂಬ್, ಟಿಪ್ಪು ಸುಲ್ತಾನ್ ಒಬ್ಬ ಅಪ್ಪಟ ದೇಶ ಪ್ರೇಮಿ. ಟಿಪ್ಪು ರೈತ ಪರವಾದ ಚಿಂತನೆಗಳು, ಎಲ್ಲ ಧರ್ಮಗಳ ಬಗ್ಗೆ ಇದ್ದ ಜಾತ್ಯತೀತ ಮನೋಭಾವ ದೇಶದ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕೆಲವರು ಶ್ರೀರಂಗಪಟ್ಟಣದಲ್ಲಿ ವಿಶ್ವ ವಿದ್ಯಾನಿಲಯಕ್ಕೆ ಟಿಪ್ಪುವಿನ ಹೆಸರು ಇಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಈ ರ್ಯಾಲಿ ನಡೆಸಲಾಗುತ್ತಿದೆ.  ಜಾಥದ ಮತ್ತೊಂದು ಉದ್ದೇಶ ತಮಿಳುನಾಡಿಗೆ ಕಾವೇರಿ ನೀರು ಬಿಡುವುದರ ಮೂಲಕ ಕರ್ನಾಟಕದ ಜನತೆಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದು, ನಮ್ಮ ರಾಜ್ಯದಲ್ಲಿಯೆ ನೀರಿಗಾಗಿ ಜನರು ಹಾಹಾಕಾರ ಪಡುವ ಪರಿಸ್ಥಿತಿ ಇದ್ದರು ನೆರೆ ರಾಜ್ಯಕ್ಕೆ ನೀರು ಬಿಡುವುದನ್ನು ನಾವು ಖಂಡಿಸುತ್ತೇವೆ.  ಕಾವೇರಿ ನಮ್ಮ ಸ್ವತ್ತು ನಾವು ಕಾವೇರಿಯನ್ನು ಬೇರೆಯವರ ಪಾಲಾಗಲು ಎಂದಿಗೂ ಒಪ್ಪುವುದಿಲ್ಲ ಎಂದು ನುಡಿದರು.
ರ್ಯಾಲಿಯಲ್ಲಿ ವೀರಕನ್ನಡಿಗ ಟಿಪ್ಪು ಸೇನೆ ತಾ. ಅಧ್ಯಕ್ಷ ಝಕೀರ್ ಶಾಮಿಯಾನ, ಟಿಪ್ಪುಸುಲ್ತಾನ್ ಯುವಕ ಸಂಘದ ಅಧ್ಯಕ್ಷ ಜುಭೇರ, ಕಾರ್ಯದರ್ಶಿ ಮಹಮ್ಮದ್‌ಶಫೀ ಟಿಪ್ಪು ಯುವಕ ಸಂಘದ ಅಧ್ಯಕ್ಷ ಹಮೀದ್  ಸಮಾಜ ಸೇವಕಿ ಆಶಾ ಕಿರಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments