'ರಕ್ತದಾನದಿಂದ ಅಪಾಯ ಇಲ್ಲ'
ಹಾಸನ: ರಕ್ತದಾನ ಮಾಡುವುದರಿಂದ ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ನಾಗೇಶ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಸ್ಕೌಟ್ಸ್, ಗೈಡ್ಸ್, ಹಾಸನಾಂಬ ರೋವರ್ಸ್ ರೇಂಜರ್ಸ್ಘಟಕ, ಸರ್ಕಾರಿ ಕಲಾ ಕಾಲೇಜ್ ಹಾಗೂ ಜಯ ಚಾಮರಾಜೇಂದ್ರ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ, ರಕ್ತದಾನ ಶಿಬಿರ ಮತ್ತು ರಕ್ತ ಗುಂಪು ಪರೀಕ್ಷೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಕ್ತದಾನ ಮಾಡುವುದರಿಂದ ಅಪಾಯ ಎಂಬ ಕೆಲವರಲ್ಲಿ ತಪ್ಪು ಕಲ್ಪನೆ ಕೆಲರಲ್ಲಿ ಇದೆ. ಒಂದು ಬಾರಿ ರಕ್ತ ಕೊಟ್ಟಾಗ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. 40 ವರ್ಷ ತುಂಬಿದ ಮನುಷ್ಯನಿಗೆ ಕೊಲೇಸ್ಟ್ರಾಲ್ ಹೆಚ್ಚಾಗುತ್ತದೆ ಎಂದ ಅವರು, ಅಂತಹವರು ಕೂಡಾ ರಕ್ತ ಕೊಡುವುದರಿಂದ ತಮ್ಮ ಕೊಲೇಸ್ಟ್ರಾಲ್ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದರು. ರಕ್ತವು ಅಮೂಲ್ಯವಾಗಿದ್ದು, ಯಾರಿಗೆ ಯಾವ ಸಮಯದಲ್ಲಿ ಬೇಕಾಗುತ್ತದೆ ಎಂಬುದು ನಿಖರವಾಗಿ ಹೇಳಲಾಗುವುದಿಲ್ಲ. ತುರ್ತು ಸಮಯದಲ್ಲಿ ರಕ್ತದ ಅವಶ್ಯಕತೆ ಕಂಡು ಬಂದಾಗ ಅದನ್ನು ನಾವು ಯಾವ ಫ್ಯಾಕ್ಟರಿಯಲ್ಲೂ ತರಲು ಸಾಧ್ಯವಿಲ್ಲ. ಮನುಷ್ಯನ ರಕ್ತವೇ ಆಗಬೇಕೆಂದು ಕಿವಿಮಾತು ಹೇಳಿದರು.
ಸ್ಕೌಟ್ಸ್ ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಐ.ಎಂ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಗೈಡ್ಸ್ ಆಯುಕ್ತ ಶೈಲಾ ಅಭಿನಂದನ್, ಎಂ. ಉದಯಕುಮಾರ್, ಎಂ.ವಿ. ಹೇಮಾವತಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.