ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹನಿ ನೀರಾವರಿ ಪದ್ಧತಿ ಅಳವಡಿಸಿ

Parashurama
Updated On : 3 Mar 2013, 11:37 am

ಹಿರೀಸಾವೆ (ಚನ್ನರಾಯಪಟ್ಟಣ ತಾ.): ಹನಿ ನೀರಾವರಿ ಪದ್ಧತಿಯಲ್ಲಿ ತರಕಾರಿ ಬೆಳೆದರೆ ಉತ್ತಮ ಲಾಭ ಗಳಿಸಬಹುದು ಎಂದು ಕ್ಲಾಜ್‌ವೆಜಿಟೆಬಲ್ಸ್‌ಲೀಡ್ ಕಂಪೆನಿಯ ಅಧಿಕಾರಿ ಡಾ.ಪಿ.ಕೆ. ಸಿಂಗ್ ಹೇಳಿದರು.
ಹೋಬಳಿಯ ತಿಮ್ಮಲಾಪುರದಲ್ಲಿ ತರಕಾರಿ ಬೆಳೆಗಾರರ ಸಂಘ ಏರ್ಪಡಿಸಿದ್ದ ದಪ್ಪ ಮೆಣಸಿನಕಾಯಿ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಜಮೀನಿನ ಪರಿಸರಕ್ಕೆ ಹೊಂದಿ ಕೊಳ್ಳುವ ತರಕಾರಿಗಳನ್ನು ರೈತರು ಬೆಳೆಯಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋವಿಂದೇಗೌಡ ಮಾತನಾಡಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಗಳು ಮತ್ತು ಖಾಸಗಿ ಕಂಪೆನಿಗಳ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಕಡಿಮೆ ನೀರಿನಲ್ಲಿ ಉತ್ತಮ ತರಕಾರಿ ಬೆಳೆಯಲಾಗಿದೆ. ಅದರಲ್ಲೂ ದಪ್ಪ ಮೆಣಸಿನಕಾಯಿ ಉತ್ತಮ ಲಾಭ ನೀಡಿದೆ ಎಂದು ಅನುಭವ ಹಂಚಿಕೊಂಡರು.ಬೆಳೆಗಾರ ಟಿ.ಎನ್.ರವಿ ಮಾತನಾಡಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಗ್ರಾಮದ ತರಕಾರಿ ಬೆಳೆಗಾರರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ. ಹತ್ತು ಜನ ರೈತರು ದಪ್ಪ ಮೇಣಸಿನಕಾಯಿ ಬೆಳೆದು, ಹೊರ ರಾಜ್ಯಗಳ ಪ್ರಮುಖ ನಗರಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದರು.
ಹೋಬಳಿಯ ಹಲವು ಪ್ರಗತಿಪರ ರೈತರು ಮತ್ತು ತರಕಾರಿ ಬೆಳೆಗಾರರು ಭಾಗವಹಿಸಿದ್ದರು. ಸುರೇಶ್‌ಗಂಡಿಕೋಟಿ, ಎ. ನಾರಾಯಣ ಸ್ವಾಮಿ, ಸುನಿಲ್, ತಿಮ್ಮಲಾಪುರದ ರವಿ, ವೆಂಕಟೇಶ್, ಎಂ.ಆರ್. ವಾಸು, ಗಿರೀಶ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments