ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯ ಕೇಂದ್ರದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ

Rashmi Kasaragodu
Updated On : 5 Mar 2013, 11:44 am

ರಾಮನಾಥಪುರ: ಸರ್ಕಾರಿ ಆಸ್ಪತ್ರೆಯಿಂದ ಸಿಗುವ ಇಲ್ಲಾ ರೀತಿಯ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದು ಸಾರ್ವಜನಿಕರುಸದುಪಯೋಗ ಪಡಿಸಿಕೊಳ್ಳುವಂತೆ ಇಲ್ಲಿಯ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ ಅವರುಹೇಳಿದರು.
 ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸೋಮವಾರ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಆರ್ಯುವೇದ, ದಿನಚರ್ಯೆ, ಋತುಚರ್ಯೆ ಚಿಕಿತ್ಸೆ,  ಮಹತ್ವದ ಬಗ್ಗೆ ಜನರಿಗೆ ತಿಳಿಸಿದರು.ಶಿಬಿರದಲ್ಲಿ ನಡೆದ ಆಸ್ತಮಾ, ಗ್ಯಾಸ್ಟ್ರಿಕ್, ವಾತವ್ಯಾಧಿಗಳು, ಸಂದಿನೋವು, ಮಂಡಿನೋವು ಇತ್ಯಾದಿ ಕಾಯಿಲೆಗಳಿಗೆ ಹಾಗೂ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಚಿಕಿತ್ಸೆಗಳನ್ನು ಸುಮಾರು 350ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಿ ಅವರಿಗೆ ಆಯುರ್ವೇದ ಔಷಧಿ ಹಾಗೂ ಮಾತ್ರೆಗಳನ್ನು ನೀಡಲಾಯಿತು.  ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಯುರ್ವೇದ ಅಸ್ವತ್ರೆ ಡಾ. ಎಸ್.ಜಿ. ಮೋಹನ್, ಡಾ. ಶ್ರೀಹರ್ಷ, ಡಾ. ದಿನೇಶ್, ಡಾ. ವಿನೋದ್, ಡಾ, ವಿಜಯಲಕ್ಷ್ಮಿ, ಡಾ, ಶ್ರೀಕಾಂತ್ ಇನ್ನೂ  ಮುಂತಾದವರು ಇದ್ದರು. ಹೇಮಾವತಿ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement