ಕಾವೇರಿ ದಂಡೆಯಲ್ಲಿ ಸೋಪಾನ ಕಟ್ಟೆ ಕಟ್ಟಲು ನಾಗರಿಕರ ಆಗ್ರಹ
ಕ.ಪ್ರ. ವಾರ್ತೆ ರಾಮನಾಥ ಪುರ ಮಾ.5
ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ ದೇವಸ್ಥಾನದ ಹೊಂದಿಕೊಂಡಿರುವ ಕಾವೇರಿ ನದಿಯ ದಂಡೆಗೆ ಸೋಪಾನ ಕಟ್ಟೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾವೇರಿ ನದಿಯಲ್ಲಿರುವ ದೇವರ ಮೀನುಗಳನ್ನು ನೋಡಲು ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಹೀಗಾಗಿ ಕಾವೇರಿ ನದಿಯಲ್ಲಿರುವ ವಹ್ನಿ ಪುಷ್ಕರಣಿಗೆ ಹೋಗುವ ಸ್ಥಳಕ್ಕೆ ಉತ್ತಮ ರೀತಿ ಕಲ್ಲು ಹಾಸಿನ ಸೋಪಾಲ ಕಟ್ಟೆ ನಿರ್ಮಿಸಿಕೊಡುವ ಬಗ್ಗೆ ತಾಲೂಕು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.