ಕೇರಳಾಪುರದಿಂದ ಧರ್ಮಸ್ಥಳಕ್ಕೆ ಇಂದು ಪಾದಯಾತ್ರೆ
ರಾಮನಾಥಪುರ: ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾ. 6 ರಂದು ಕೇರಳಾಪುರದಿಂದ ಧರ್ಮಸ್ಥಳಕ್ಕೆ ತೆರಳಲಾಗುವುದು ಎಂದು ರಾಮನಾಥಪುರ ಶರಣ ಕೋಳಿ ಸಿದ್ದಯ್ಯ ತಿಳಿಸಿದ್ದಾರೆ. ಕಾವೇರಿ ನದಿ ದಂಡೆಯಲ್ಲಿರುವ ಕೇರಳಾಪುರದ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ರಾಮನಾಥಪುರ, ಶನಿವಾರಸಂತೆ, ಸುಬ್ರಹ್ಮಣ್ಯ ಮಾರ್ಗವಾಗಿ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಾನಕ್ಕೆ ತಲಪುವುದು ಎಂದು ಹೇಳಿದ್ದಾರೆ. ಪಾದಯಾತ್ರೆ ಸಮಯದಲ್ಲಿ ಭಕ್ತಾಧಿಗಳು ನಾನಾ ರೀತಿಯ ಸಹಾಯ, ಸಹಕಾರ ನೀಡಲಿದ್ದಾರೆ. ಹಾಗೂ ಈ ಭಾಗದ ನಾನಾ ಗ್ರಾಮಗಳಿಂದ ಸದುಮಾರು 500ಕ್ಕೂ ಹೆಚ್ಚು ಭಕ್ತಾದಿಗಳು ಮಂಜುನಾಥಸ್ವಾಮಿ ಪಾದಯಾತ್ರೆ ಹೊರಡಲಿದ್ದಾರೆ ಎಂದು ರಾಮನಾಥಪುರ ಸಿದ್ದಯ್ಯ ತಿಳಿಸಿದ್ದಾರೆ.