ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ
ಕ.ಪ್ರ. ವಾರ್ತೆ ಟಿ ರಾಮನಾಥ ಟಿ ಮಾ.5
ತಾಲೂಕಿನ ಪ್ರತಿ ಗ್ರಾಮದ ಕಾಲೋನಿಗಳಲ್ಲಿ ಎಸ್ಸಿಪಿ ನಬಾರ್ಡ್ ಯೋಜನೆಯಡಿ ನಾನಾ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ಶಾಸಕ ಎ. ಮಂಜು ಹೇಳಿದರು.
ಕೇರಳಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಂಬರಕೊಪ್ಪಲು ಗ್ರಾಮದ ಕಾಲೋನಿಯ ಕಾಂಕ್ರಿಟ್ ಚರಂಡಿ ನಿರ್ಮಾಣ ಕಾಮಗಾರಿಗೆ 1.88 ಲಕ್ಷ ರು, ಹಾಗೂ ಇದೇ ಗ್ರಾಮದ ಕಾಲೋನಿಯ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ 2.51 ಲಕ್ಷ ರು.ಗಳ ಕಾಮಗಾರಿಗೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.
ಗ್ರಾಮಕ್ಕೆ 6 ಲಕ್ಷ ರು. ವೆಚ್ಚದಲ್ಲಿ 23 ಶಾಲಾ ಕೊಠಡಿಗಳು, 1 ಲಕ್ಷ ರು. ವೆಚ್ಚದಲ್ಲಿ ಶಾಲೆಯ ಕೌಂಪೌಂಡ್, 1 ಲಕ್ಷ ರು. ವೆಚ್ಚದಲ್ಲಿ ಬಸ್ ತಗುದಾಣ, ಕೊಠಡಿ ಹೀಗೆ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಗುತ್ತಿಗೆದಾರರಿಂದ ಗುಣಮಟ್ಟದ ಹಾಗೂ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಾಂಗ್ರೆಸ್ ಮುಖಂಡ ಬೂದನೂರು ಅಣೇಗೌಡ, ಗ್ರಾಪಂ ಸದಸ್ಯ ಲೋಕೇಶ್, ರತ್ನಮ್ಮ, ಅಣೇಗೌಡ ಹೋಬಳಿ ಅಧ್ಯಕ್ಷ ಜಿ.ಸಿ ಮಂಜೇಗೌಡ, ಲೋಕೋಪಯೋಗಿ ಜೆ.ಇ. ನಂಜುಂಡ, ಮುಖಂಡ ಶಿವಯ್ಯ, ತಮ್ಮಯ್ಯ ಇತರರು ಇದ್ದರು.