'ಪಾರ್ಕಿನ್ಸನ್ ಗುಣಮುಖ ರೋಗ'
ಹಾಸನ: ಪಾರ್ಕಿನ್ಸನ್ ರೋಗ ಗುಣಮುಖವಾಗುವ ಕಾಯಿಲೆ. ಇದಕ್ಕೆ ಆರಂಭದಲ್ಲಿಯೇ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ನರರೋಗ ತಜ್ಞ ಡಾ. ಎಲ್.ಕೆ. ಪ್ರಶಾಂತ್ ತಿಳಿಸಿದರು.
ನಗರದ ಬಾಸೆಲ್ ಗ್ಯಾಂಗ್ಲಿಯಾ ಸಪೋರ್ಟ್ ಗ್ರೂಪ್ವತಿಯಿಂದ ಜನಕಲ್ಯಾಣ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಪಾರ್ಕಿನ್ಸನ್ ರೋಗ ಕುರಿತು ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರೋಗದ ಲಕ್ಷಣಗಳ ಬಗ್ಗೆ ವಿವರಿಸಿದರು.
ಬಿಜಿಎಸ್ ಸಪೋರ್ಟ್ ಬ್ರಾಸ್ ನಿರ್ದೇಶಕಿ ರಾಧರಾಮಸ್ವಾಮಿ ಔಷಧಿ ಬಗ್ಗೆ ಮಾಹಿತಿ ನೀಡಿದರು. ಆರ್ಯುವೇದ ತಜ್ಞೆ ಡಾ. ಶೈಲಜಾ ಪ್ರಸನ್ನರಾವ್, ಬೆಂಗಳೂರಿನ ಫಿಜಿಯೋ ಥೆರಪಿಸ್ಟ್ ಡಾ ಭರತೇಶ್, ಡಾ. ಸೈಯದ್ ನಾಹಿದ್, ಯೋಗ ಶಿಕ್ಷಕ ಸಮಿವುಲ್ಲಾ, ಶೇಷಪ್ಪ, ಸುಕನ್ಯ ಮುಕುಂದ ಉಪಸ್ಥಿತರಿದ್ದರು. ನಾದಿಸಾಬ್ ಸ್ವಾಗತಿಸಿದರು. ಡಾ.ವಿರೂಪಾಕ್ಷ ವಂದಿಸಿದರು. ಶರ್ವರಿ ಪ್ರಾರ್ಥನೆ ಮಾಡಿದರು. ಡಾ. ಶರತ್ಚಂದ್ರ ನಿರೂಪಿಸಿದರು.
ಶಾಸ್ತ್ರೀಯ ಸಂಗೀತ
ಮೈಸೂರು: ಇಲ್ಲಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಮಾ.7ರ ಸಂಜೆ 7.30ಕ್ಕೆ ವಿ.ಸುಗಂ ಚಕ್ರವರ್ತಿ ಸಂಗೀತ ಏರ್ಪಡಿಸಿದೆ.