ರಾಮೇಶ್ವರ ದೇವಾಲಯ ಆವರಣ ಸ್ವಚ್ಛತೆ
ಕ.ಪ್ರ.ವಾರ್ತೆ,ರಾಮನಾಥಪುರ, ಮಾ. 5
ಇಲ್ಲಿಯ ರಾಮೇಶ್ವರ ದೇವಸ್ಥಾನದ ಹತ್ತಿರ ಕಾವೇರಿ ನದಿ ದಂಡೆ ಹಾಗೂ ನದಿಯಲ್ಲಿನ ಗಿಡ, ಗಂಟೆ ಹಾಗೂ ನದಿಯ ಮಧ್ಯೆ ಕೊಳಚೆ ನೀರು ನಿಂತು ದುರ್ವಾಸನೆಯಿಂದ ಕೂಡಿದ್ದು, ಕೆಲವು ಕಡೆ ಸ್ವಚ್ಛತೆ ಎಂಬುದು ಮರೀಚಿಕೆಯಾಗಿತ್ತು. ಈ ಕೊಳಚೆ ಕಸವನ್ನು ನಾನಾ ಸಂಘ ಸಂಸ್ಥೆಗಳು ಹಾಗೂ ಸಮಾಜ ಸೇವಕರು ಸ್ವಚ್ಚಗೊಳಿಸಿದರು.
ದೇವಸ್ಥಾನ ಪಕ್ಕದ ನೀರಿನ ಸಂಗ್ರಹಣೆ ತೊಟ್ಟಿ, ಟ್ಯಾಂಕ್ಗಳು, ನದಿಯ ಪಕ್ಕ ಹಾಕಿದ್ದ ಎಳನೀರು ಚಿಪ್ಪು, ಟೈರುಗಳು, ಹಳೆಯ ಬಾಟಲು ಎಲ್ಲವನ್ನು ಸಮಾಜ ಸೇವಕ ರಾಮನಾಥಪುರ ಎಚ್.ಎಸ್. ಶಂಕರ್, ಕೋಳಿ ಸಿದ್ದಯ್ಯ, ಜಯರಾಂ, ಬಾನು, ದಯಾನಂದ ಹಾಗೂ ವೆಂಕಟೇಶ್ವರ ಶಾಲಾ ಮಕ್ಕಳು ಮುಂತಾದವರು ಸೇರಿ ತೆಗೆದು ಸ್ವಚ್ಛಗೊಳಿಸಿದರು.