ರಾಷ್ಟ್ರೀಯ ಭಾವೈಕ್ಯತಾ ಶಿಬಿರ
ಹಾಸನ: ಕೇರಳ ರಾಜ್ಯದ ತಿರುವನಂತಪುರದಲ್ಲಿ 2012ನೇ ಸಾಲಿನ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಮೇ 8ರಿಂದ 12ರವರೆಗೆ ಏರ್ಪಡಿಸಲಾಗಿದೆ. ಶಿಬಿರಕ್ಕೆ ಹಾಸನ ಜಿಲ್ಲೆಯಿಂದ ಭಾಗವಹಿಸುವ ಸಾಂಸ್ಕೃತಿಕ ಹಾಗೂ ಸಾಂಪ್ರಾದಾಯಿಕ ಪ್ರಕಾರಗಳಲ್ಲಿ ಯುವಕ, ಯುವತಿಯರನ್ನು ಪ್ರತಿಭೆ ಅನುಸಾರ ಆಯ್ಕೆ ಮಾಡಿ ನಿಯೋಜಿಸಲಾಗುವುದು. ಆದ್ದರಿಂದ ಈ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲು ಇಚ್ಚೆಯುಳ್ಳ ಹಾಸನ ಜಿಲ್ಲೆಯ 15 ರಿಂದ 40 ವಯಸ್ಸಿನ ಯುವಕ ಯುವತಿಯರು ಮಾರ್ಚ್ 11ರೊಳಗಾಗಿ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಸಾಲಗಾಮೆ ರಸ್ತೆ, ಹಾಸನ (ದೂರವಾಣಿ 246056) ಇವರಿಗೆ ಸಲ್ಲಿಸಲು ಕೋರಲಾಗಿದೆ.