ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯಾರ್ಥಿಗಳಿಂದ ಬಜೆಟ್ ವಿಶ್ಲೇಷಣೆ

Rashmi Kasaragodu
Updated On : 5 Mar 2013, 11:44 am

ಕನ್ನಡಪ್ರಭ ವಾರ್ತೆ, ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ 2013-14ರ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸ ವರ್ಗದವರು ಪಾಲ್ಗೊಂಡಿದ್ದರು.
 ವಿದ್ಯಾರ್ಥಿಗಳು ತಮ್ಮ ವಿಶ್ಲೇಷಣೆಯಲ್ಲಿ ಕೇಂದ್ರ ಯೋಜನಾ ವೆಚ್ಚವನ್ನು ಹೆಚ್ಚಿಸುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರಲ್ಲದೇ, ಗ್ರಾಮೀಣ ಅಭಿವೃದ್ಧಿಗೆ ನೀಡಿರುವ ಅನುದಾನವನ್ನು ಹೆಚ್ಚಿಸಿರುವುದು ಸ್ವಾಗತಾರ್ಹ, ಈ ಅನುದಾನದ ಸಮರ್ಪಕ ಬಳಕೆಯ ಕಡೆ ಹೆಚ್ಚು ಒತ್ತು ನೀಡಬೇಕೆಂದು ಒತ್ತಾಯಿಸಿದರು.
 ಈ ಅಯವ್ಯಯ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಿರುವುದನ್ನು ಸ್ವಾಗತಿಸಿದರು.
 ಕಾಲೇಜು ಪ್ರಾಂಶುಪಾಲೆ  ಡಾ.ಜೆ.ಶೈಲಜಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸುಮ ಡಿ.ಎಸ್. ಪ್ರಾರ್ಥಿಸಿದರು. ಪ್ರೊ.ಜೆ.ಕವಿತ ಸ್ವಾಗತಿಸಿದರು. ಅರ್ಥಶಾಸ್ತ್ರ ಮುಖ್ಯಸ್ಥೆ ಪ್ಪೊ.ಟಿ.ಎಸ್.ನಿರ್ಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ರಶ್ಮಿ, ಶಾಯಿಸ್ತಾ ಸುಮನ್, ಪಂಕಜ ತಮ್ಮ ಉತ್ತಮ ವಿಶ್ಲೇಷಣೆಗಾಗಿ ಬಹುಮಾನ ಪಡೆದರು. ಡಾ.ಕೆ.ಜಿ.ಸುರೇಶ್‌ಕುಮಾರ್ ವಂದಿಸಿದರು. ಡಾ.ಸುಕನ್ಯಾಶೇಖರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement