ಶಿವರಾತ್ರಿ ಅಂಗವಾಗಿ ರುದ್ರ ಹೋಮ
ಕನ್ನಡಪ್ರಭ ವಾರ್ತೆ ಟಿ ಹಾಸನ ಟಿ ಮಾ.5
ನಗರದ 1100 ವರ್ಷದ ಇತಿಹಾಸವಿರುವ ಶ್ರೀ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಮಾರ್ಚ್ 10ರಂದು ಮಹಾ ಶಿವರಾತ್ರಿ ಆಚರಣೆ ಅಂಗವಾಗಿ ನಿರಂತರ ಲಾಡು ಪ್ರಸಾದ ವಿತರಣೆ ಮತ್ತು ಮಾರ್ಚ್ 11ರಂದು ಬೆಳಗ್ಗೆ 7ರಿಂದ ಲೋಕ ಕಲ್ಯಾಣಾರ್ಥ ರುದ್ರ ಹೋಮ ಮತ್ತು ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶ್ರೀ ಶಿವರಾತ್ರಿ ಪ್ರಸಾದ ಸೇವಾ ಸಮಿತಿ ಸದಸ್ಯರು ಕೋರಿದ್ದಾರೆ.