ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆಗೂ ಸಿದ್ಧತೆ
ಕನ್ನಡಪ್ರಭವಾರ್ತೆ, ಹಾಸನ, ಮಾ. 5
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಂತಿಮ ಹಂತದ ಸಿದ್ದತೆಗಳು ಚುರುಕಾಗಿವೆ. ಮಾ.6 ರಂದು ಮಸ್ಟರಿಂಗ್ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮಾ.7ರ ಬೆಳಗ್ಗೆ 9ಕ್ಕೆ ಮತದಾನದ ನಡೆಯಲಿದ್ದು, ಮಾ. 11 ರಂದು ಎಣಿಕೆ ನಡೆಯಲಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಬುಧವಾರ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುವುದು.
ಹಾಸನ ನಗರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಮಾ. 6 ರಂದು ಬೆಳಗ್ಗೆ 9ಕ್ಕೆ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಇರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಅರಸೀಕೆರೆ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ಮಿನಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ಪಟ್ಟಣದ ಸೆಂಟ್ ಮೇರೀಸ್ ಶಾಲೆಯಲ್ಲಿ ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಚನ್ನರಾಯಪಟ್ಟಣ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ಮಿನಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ಪಟ್ಟಣದ ನವೋದಯ ಶಾಲೆಯಲ್ಲಿ ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಹೊಳೆನರಸೀಪುರ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ಮಿನಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಸಕಲೇಶಪುರ ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ಮಿನಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಬೇಲೂರು ಪುರಸಭೆಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ಮಿನಿವಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ಪಟ್ಟಣದ ಶಾಂತಲ ಎಜುಕೇಷನ್ ಸೊಸೈಟಿಯಲ್ಲಿ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಅರಕಲಗೂಡು ಪಟ್ಟಣ ಪಂಚಾಯ್ತಿಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ಮಿನಿಧಾನ ಸೌಧದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ರಂದು ಬೆಳಗ್ಗೆ 7.45ಕ್ಕೆ ಪಟ್ಟಣದ ಕೃಷಿ ಇಲಾಖೆಯಲ್ಲಿ ಮತ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.
ಆಲೂರು ಪಟ್ಟಣ ಪಂಚಾಯ್ತಿಗೆ ಸಂಬಂಧಿಸಿದಂತೆ ತಹಸೀಲ್ದಾರರು ಮಾ. 6 ರಂದು ಬೆಳಗ್ಗೆ 9ಕ್ಕೆ ತಾಲೂಕು ಕಚೇರಿಯಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿಸುವರು, ಮಾ.7 ರಂದು ಬೆಳಗ್ಗೆ 7 ರಿಂದ ತಾಲೂಕು ಕಚೇರಿಯಲ್ಲಿ ಉಪಸ್ಥಿತರಿರುವರು. ಮಾ. 11 ಬೆಳಗ್ಗೆ 7.45ಕ್ಕೆ ಎಣಿಕಾ ಕಾರ್ಯದ ಉಸ್ತುವಾರಿ ವಹಿಸುವರು.