ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

177 ಸ್ಥಾನಗಳಿಗೆ ಅಖಾಡದಲ್ಲಿ 747 ಅಭ್ಯರ್ಥಿಗಳು

Rashmi Kasaragodu
Updated On : 6 Mar 2013, 11:50 am

ಕನ್ನಡಪ್ರಭ ವಾರ್ತೆ, ಹಾಸನ, ಮಾ. 6
ಮಿನಿ ಕದನದ ಮತದಾನ ಮಾ. 7 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ನಡೆಯಲಿದ್ದು, ಜಿಲ್ಲಾದ್ಯಂತ ಇರುವ 2,08, 224 ಮತದಾರರು 747 ಅಭ್ಯರ್ಥಿಗಳ ಬಗ್ಗೆ ತೀರ್ಪು ನೀಡಲಿದ್ದಾರೆ.
ಜಿಲ್ಲೆಯ 1 ನಗರಸಭೆ, 5 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳ 177  ಸ್ಥಾನಗಳಿಗೆ  ಅಂತಿಮವಾಗಿ  747 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
 2007 ರ ಚುನಾವಣೆಯಲ್ಲಿ  ಹಾಸನ ನಗರಸಭೆಗೆ ಜೆಡಿಎಸ್ 16, ಕಾಂಗ್ರೆಸ್ 11, ಬಿಜೆಪಿ 2 ಮತ್ತು ಪಕ್ಷೇತರು 6 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಇದರಿಂದ ಅತಂತ್ರ ಸ್ಥಿತಿ ಉಂಟಾಗಿತ್ತು. ಪರಿಣಾಮ ಪಕ್ಷಾಂತರದ ಪರ್ವವೇ ನಡೆಯಿತು. ಹಾಗೆಯೇ ಅರಕಲಗೂಡು ಮತ್ತು ಆಲೂರು ಪಪಂನಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ.
ಹಾಸನ ನಗರಸಭೆ 3, 11, 28, 14 ಮತ್ತು 29 ನೇ ವಾರ್ಡ್ ಗಳಲ್ಲಿ ಜೆಡಿಎಸ್ ಬಂಡಾಯ ಎದುರಿಸಬೇಕಾಗಿದೆ. ಆದರೆ ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಕ್ಕಿದ್ದೇ ಹೆಚ್ಚಾಯಿತು ಎನ್ನುವ ಸ್ಥಿತಿ ಇತ್ತು.  ವಾರ್ಡ್ 9 ಮತ್ತು 14  ರಲ್ಲಿ ಕಾಂಗ್ರೆಸ್  ಅಭ್ಯರ್ಥಿಯನ್ನು ಹೂಡಿಲ್ಲ.
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಯ ಒಟ್ಟು ಸ್ಥಾನಗಳು 180. ಆದರೆ ಹೊಳೆನರಸೀಪುರದ 9 ನೇ ವಾರ್ಡ್‌ನಿಂದ ಜೆಡಿಎಸ್‌ನ ಎಚ್.ವಿ. ಸುರೇಶ್‌ಕುಮಾರ್ (ಸಾಮಾನ್ಯ) ಮತ್ತು 4 ನೇ ವಾರ್ಡ್‌ನಿಂದ ಸುಮ (ಹಿಂದುಳಿದ ವರ್ಗ ಎ)  ಹಾಗೂ ಆಲೂರು ಪಟ್ಟಣ ಪಂಚಾಯ್ತಿಯ 2 ನೇ ವಾರ್ಡ್‌ನಿಂದ ಎಚ್.ಎಸ್. ನಾಗರತ್ನ (ಪರಿಶಿಷ್ಟ ಪಂಗಡ ಮಹಿಳೆ) ಅವರು ಅವಿರೋಧವಾಗಿ ಆಯ್ಕೆ ಆಗಿರುವುದರಿಂದ 177 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
ಪಕ್ಷೇತರರೇ ಹೆಚ್ಚು
ಜಿಲ್ಲೆಯಲ್ಲಿ ಜೆಡಿಎಸ್‌ನಿಂದ  175 ಅಭ್ಯರ್ಥಿಗಳು, ಕಾಂಗ್ರೆಸ್ - 167, ಬಿಜೆಪಿ - 106, ಸಿಪಿಎಂ -1, ಪಕ್ಷೇತರ - 241, ಜೆಡಿಯು -1,  ಬಿಎಸ್‌ಆರ್ -4, ಕೆಜೆಪಿ- 51, ಎಸ್ ಡಿಪಿಐ -1  ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಹಾಸನ ನಗರಸಭೆ- 35 ವಾರ್ಡ್‌ಗಳಿಂದ  198 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಜೆಡಿಎಸ್ - 35, ಕಾಂಗ್ರೆಸ್ -33, ಬಿಜೆಪಿ - 25, ಸಿಪಿಎಂ -1, ಪಕ್ಷೇತರ - 97, ಕೆಜೆಪಿ - 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅರಸೀಕೆರೆ ಪುರಸಭೆ--  27 ವಾರ್ಡ್‌ಗಳಿಂದ  101 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ - 27, ಕಾಂಗ್ರೆಸ್ - 26, ಬಿಜೆಪಿ - 13, ಪಕ್ಷೇತರ - 35  ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚನ್ನರಾಯಪಟ್ಟಣ ಪುರಸಭೆ- 23 ವಾರ್ಡ್‌ಗಳಿಂದ 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಜೆಡಿಎಸ್ - 23, ಕಾಂಗ್ರೆಸ್ -23, ಬಿಜೆಪಿ - 20, ಪಕ್ಷೇತರ -22, ಬಿಎಸ್‌ಆರ್ - 1, ಕೆಜೆಪಿ - 1 ಅಭ್ಯರ್ಥಿಗಳು  ಕಣದಲ್ಲಿದ್ದಾರೆ.
ಬೇಲೂರು ಪುರಸಭೆ-  23 ವಾರ್ಡ್‌ಗಳಿಂದ 91 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಜೆಡಿಎಸ್ - 21, ಕಾಂಗ್ರೆಸ್ - 23, ಬಿಜೆಪಿ - 18, ಪಕ್ಷೇತರ - 15, ಕೆಜೆಪಿ - 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹೊಳೆನರಸೀಪುರ ಪುರಸಭೆ-   21 ವಾರ್ಡ್‌ಗಳಿಂದ  61 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಜೆಡಿಎಸ್ - 21, ಕಾಂಗ್ರೆಸ್ -8, ಬಿಜೆಪಿ - 5, ಪಕ್ಷೇತರ - 12, ಜೆಡಿಯು -1, ಬಿಎಸ್‌ಆರ್ -2, ಕೆಜೆಪಿ - 2 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಸಕಲೇಶಪುರ ಪುರಸಭೆ- 23 ವಾರ್ಡ್‌ಗಳಿಂದ 106 ಅಭ್ಯರ್ಥಿಗಳು  ಕಣದಲ್ಲಿ ಇದ್ದಾರೆ.  ಅವರಲ್ಲಿ ಜೆಡಿಎಸ್ -23, ಕಾಂಗ್ರೆಸ್ -22, ಬಿಜೆಪಿ -15, ಪಕ್ಷೇತರ 27, ಕೆಜೆಪಿ - 19 ಅಭ್ಯರ್ಥಿಗಳು .
ಅರಕಲಗೂಡು  ಪಟ್ಟಣ ಪಂಚಾಯ್ತಿ  15 ವಾರ್ಡ್‌ಗಳಿಂದ 59 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಜೆಡಿಎಸ್ - 15, ಕಾಂಗ್ರೆಸ್ - 15, ಬಿಜೆಪಿ -7, ಪಕ್ಷೇತರ - 22.
ಆಲೂರು ಪಟ್ಟಣ ಪಂಚಾಯ್ತಿ 10  ವಾರ್ಡ್‌ಗಳಿಂದ 43 ಅಭ್ಯರ್ಥಿಗಳು ಉಳಿದಿದ್ದಾರೆ. ಜೆಡಿಎಸ್ - 10, ಕಾಂಗ್ರೆಸ್ -9, ಬಿಜೆಪಿ -3, ಪಕ್ಷೇತರ -11, ಬಿಎಸ್‌ಆರ್ -1, ಕೆಜೆಪಿ -9

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement