ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಆಧಾರ'ವಿಲ್ಲದ ಜನತೆಯ ಪ್ರತಿಭಟನೆ

Rashmi Kasaragodu
Updated On : 6 Mar 2013, 11:44 am

ಕನ್ನಡಪ್ರಭ ವಾರ್ತೆ ಟಿ ಹಾಸನ ಟಿ ಮಾ.6
ಆಧಾರ ಆಗಬೇಕಿದ್ದ ಆಧಾರ್‌ಕಾರ್ಡ್‌ಗಳೇ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಸಮರ್ಪಕವಾಗಿ ಆಧಾರ್‌ಕಾರ್ಡ್ ಸಿಗದ ಕಾರಣ ಸಾರ್ವಜನಿಕರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಕೂಡಲೇ ತಮಗೆ ಆಧಾರ್‌ಕಾರ್ಡ್ ನೀಡುವಂತೆ ಒತ್ತಾಯಿಸಿದರು. ಜಿಲ್ಲೆಯ ನಾನಾ ಭಾಗಗಳಿಂದ ಆಧಾರ್‌ಕಾರ್ಡ್‌ಗಾಗಿ ಆಗಮಿಸಿದ್ದ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ತೆರಳಿದರು.
ಆಧಾರ್‌ಕಾರ್ಡ್‌ಗಾಗಿ ದಿನಗಟ್ಟಲೆ ಸರಿದಿ ಸಾಲಿನಲ್ಲಿ ಕಾದು ನಿಂತರೂ ಸರಿಯಾದ ಸಮಯಕ್ಕೆ ಆಧಾರ್‌ಕಾರ್ಡ್‌ಗಳು ಲಭ್ಯವಾಗುತ್ತಿಲ್ಲ. ಆಧಾರ್‌ಕಾರ್ಡ್ ಪಡೆಯಲು ಕಳೆದ ಜ.1ರಂದು ಮುಖ್ಯ ಅಂಚೆ ಕಚೇರಿಗೆ ಹೋದ ಸಂದರ್ಭದಲ್ಲಿ ಮಾ. 4ರಿಂದ ಪ್ರಾರಂಭಿಸುವುದಾಗಿ ಹೇಳಿದ್ದರು. ಅದರಂತೆ ಆಧಾರ್‌ಕಾರ್ಡ್ ನೀಡುವಂತೆ ಸೋಮವಾರ ಹೋದ ಸಂದರ್ಭದಲ್ಲಿ ಕೆಲವೇ ಜನರಿಗೆ ಮಾತ್ರ ಕಾರ್ಡ್‌ಗಳನ್ನು ವಿತರಣೆ ಮಾಡಿ ಉಳಿದವರಿಗೆ ಮೇ ತಿಂಗಳಿಗೆ ಬರುವಂತೆ ಸೂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಧಾರ್ ಅರ್ಜಿ ಹಾಗೂ ಪರಿಶೀಲಿಸಿದ ಅರ್ಜಿಗಳನ್ನು ಏ.30ರವರೆಗೆ ಮುಂಗಡವಾಗಿ ಸ್ವೀಕರಿಸಲಾಗಿದೆ. ಆದ್ದರಿಂದ ಮಾ.5ರಿಂದ ಏ.30ರವಗೆಗೆ ಆಧಾರ್ ಅರ್ಜಿ ವಿತರಣೆ ಹಾಗೂ ಆಧಾರ್ ಅರ್ಜಿ ಪರಿಶೀಲನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಗೂ ಆಧಾರ್ ಅರ್ಜಿ ವಿತರಣೆ ಹಾಗೂ ಆಧಾರ್ ಅರ್ಜಿ ಪರಿಶೀಲನೆಯನ್ನು ಮೇ.1ರಿಂದ ಪುನಾರಂಬಿಸಲಾಗುವುದು ಎಂದು ಬೋರ್ಡ್ ಹಾಕಿ ಸಾರ್ವಜನಿಕರೆಗ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರಿಯಾಗಿ ಆಧಾರ್‌ಕಾರ್ಡ್‌ಗಳನ್ನು ವಿತರಣೆ ಮಾಡದೆ ಸಂಬಂಧಪಟ್ಟವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗ್ಯಾಸ್‌ಗೆ, ಮಕ್ಕಳ ಶಾಲಾ ದಾಖಲಾತಿ, ರೈತರು ಸಾಲವನ್ನು ಪಡೆಯುವುದಕ್ಕೆ ಸೇರಿದಂತೆ ಇತರೆಗಳಿಗೆ ಆಧಾರ್‌ಕಾರ್ಡ್‌ಗಳನ್ನು ಕೇಳುತ್ತಿರುವುದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟಣವರು ನಿಗದಿತ ಸಮಯದೊಳಗೆ ಕಾರ್ಡ್‌ಗಳನ್ನು ನೀಡದ ಕಾರಣ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿದೆ ಎಂದು ಅಲವತ್ತುಕೊಂಡರು.
ಆಧಾರ್‌ಕಾರ್ಡ್‌ಗಾಗಿ ದೂರದ ಊರಿನಿಂದ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳ್ಳಂಬೆಳಗೆ ಸರದಿ ಸಾಲಿನಲ್ಲಿ ನಿಂತರು ಕಾರ್ಡ್‌ಗಳು ಮಾತ್ರ ಲಭ್ಯವಾಗುತ್ತಿಲ್ಲ. ಆದ್ದರಿಂದ ಆಧಾರ್‌ಕಾರ್ಡ್‌ಗಳನ್ನು ನೀಡಲು ಆಯಾ ಗ್ರಾಮಪಂಚಾಯ್ತಿಗಳ ಪರಿಮಿತಿಗೆ ನೀಡಬೇಕು. ಪ್ರತಿನಿತ್ಯ ನಗರಕ್ಕೆ ಬಂದು ಹೋಗಲು ಸಾಧ್ಯವಾಗುವುದಿಲ್ಲ. ಹಂಚೇ ಕಚೇರಿಯಲ್ಲಿ ನೀಡುತ್ತಿದ್ದ ಕಾರ್ಡ್‌ಗಳನ್ನು ಈಗ ತಹಸೀಲ್ದಾರ್ ಕಚೇರಿಗೆ ತೆರಳಿ ಎಂದು ಹೇಳಿ ಕಳುಹಿಸುತ್ತಿದ್ದಾರೆ ಎಂದು ದೂರಿದರು.
ಆದ್ದರಿಂದ ಕೂಡಲೇ ಆಧಾರ್‌ಕಾರ್ಡ್‌ಗಳನ್ನು ಸರಿಯಾದ ಸಮಯಕ್ಕೆ ಸಿಗುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವಂತೆ ಒತ್ತಾಯಿಸಿದರು.  
ದೊಡ್ಡಕೊಂಡುಗುಳದ ಕೃಷ್ಣೇಗೌಡ, ಹನುಮಂತಪುರದ ಅನೀತಾ, ರಂಗನಾತಪುರದ ರೇಣುಕಾ, ಕಾಟೀಹಳ್ಳಿ ತಿಮ್ಮಪ್ಪಗೌಡ, ಎಚ್.ಬೈರಾಪರದ ಚಂದ್ರಣ್ಣ, ಹೊಂಗೆರೆ ಕುಮಾರ್, ವಳಗೆರೆಹಳ್ಳಿ ಗೌರಮ್ಮ, ಹೆರಗು ರೇಣುಕಮ್ಮ , ಅರಸೀಕೆರೆ ರಂಗೇಗೌಡ, ಮಂಜುನಾಥ್, ಪ್ರವೀಣಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement