ಹಾಸನ

ಆಲೂರು: ಗೆಲವು ಯಾರ್ಯಾರಿಗೆ ಗುರು?

ಎಚ್.ವಿ. ರಾಘವೇಂದ್ರ
ಕನ್ನಡಪ್ರಭ ವಾರ್ತೆ ಟಿ ಆಲೂರು ಟಿ ಮಾ.6
ಆಲೂರು ಪಟ್ಟಣ ಪಂಚಾಯ್ತಿಗೆ ಗುರುವಾರ ನಡೆಯುವ ಚುನಾವಣೆಗೆ ಪಪಂನ  11 ವಾರ್ಡ್‌ಗಳ ಪೈಕಿ 2ನೇ ವಾರ್ಡ್ ನಲ್ಲಿ ಪರಿಶಿಷ್ಟ ವರ್ಗ ಮಹಿಳೆ ಮೀಸಲಾತಿಯಲ್ಲಿ  ಜೆಡಿಎಸ್‌ನ ನಾಗರತ್ನ ಅವಿರೋಧ ಆಯ್ಕೆಯಾಗಿದ್ದರೆ, ಇನ್ನುಳಿದ 10 ವಾರ್ಡ್‌ಗಳಲ್ಲಿ ಒಟ್ಟು 44 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ.
ಇದಕ್ಕೆ ಈಗಾಗಲೇ ಎಲ್ಲ ವಿಧವಾದ ಚುನಾವಣಾ ಗಿಮಿಕ್ಸ್ ನಡೆಸಿರುವ ಅಭ್ಯರ್ಥಿಗಳು ಬಹಿರಂಗ ಪ್ರಚಾರ ಮುಗಿದ ಕಾರಣ ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದಾರೆ. ಇಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು  ಗೆಲ್ಲುವ ವಿಶ್ವಾಸದಲ್ಲಿದ್ದು, ನಾ ಮುಂದು, ತಾ ಮುಂದು ಹಣದ ಸುರಿಮಳೆ ಹರಿಸಿದ್ದಾರೆ.
ಈ ಬಾರಿ ಹಿಂದಿನ ಚುನಾವಣೆಗಳಲ್ಲೇ ಕಂಡು ಕೇಳರಿಯದಷ್ಟು ಹಣ, ಹೆಂಡ, ಬಾಡೂಟ ಸಮಾರಾಧನೆ, ಗೃಹೋಪಯೋಗಿ ವಸ್ತುಗಳ ಹಂಚಿಕೆ ಕಂಡು ಪಟ್ಟಣದ ನಾಗರಿಕರು ದಂಗಾಗಿದ್ದಾರೆ.
ಪಟ್ಟಣ ಪಂಚಾಯ್ತಿಯಲ್ಲಿ ಯಾವುದೇ ನಿರ್ಣಯವನ್ನು  ಜಿಲ್ಲಾಧಿಕಾರಿ ಅನುಮೋದನೆ  ಪಡೆಯಬೇಕಾದ ಅನಿವಾರ್ಯತೆ ಇದ್ದರೂ ಪಪಂ ಇಷ್ಟು ಖರ್ಚು ಮಾಡುತ್ತಿರುವುದು ಏಕೆ  ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಇದೆ. ಒಂದೆಡೆ ಪ್ರತಿಷ್ಠೆಗಾಗಿ ಹಣ ಚೆಲ್ಲುತ್ತಿದ್ದಾರೆಯೇ ಹೊರತು ಇನ್ಯಾವುದೇ ಕಾರಣಕ್ಕೂ ಅಲ್ಲ ಎನ್ನಲಾಗುತ್ತಿದೆ.
ಮಹಿಳಾ ಮತದಾರರ  ಸೆಳೆಯಲು ಮಿಕ್ಸಿ:  ಈ ಬಾರಿ ಪಕ್ಷ, ಜಾತಿ, ಹಣದ ಆಭಾರದ ಮೇಲೆ ಅಭ್ಯರ್ಥಿಗಳು ಪ್ರಚಾರಕ್ಕೆ ಇಳಿದಿದ್ದು, ಪುರುಷ ಮತದಾರರನ್ನು ಸೆಳೆಯಲು ಹಣ, ಹೆಂಡ, ಬಾಡೂಟದ ಆಮಿಷ ತೋರಿದರೆ ಮಹಿಳಾ ಮತದಾರರನ್ನು  ಸೆಳೆಯಲು ಮಿಕ್ಸಿ, ಫ್ಯಾನ್,  ಕುಕ್ಕರ್,  ಸೀರೆ ಮುಂತಾದ ಗೃಹೋಪಯೋಗಿ ವಸ್ತುಗಳ ಆಸೆ ತೋರಿಸುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಸ್ವಲ್ಪ ಮಟ್ಟಿನ ಹಣ ಹರಿದಾಡಿದರೆ ಎಲ್ಲ ವಾರ್ಡ್‌ಗಳಲ್ಲಿ ಹಣದ ಸುರಿಮಳೆಯೇ ಸುರಿದಿದೆ.
ಈ ಬಾರಿ ಜೆಡಿಎಸ್ 11 ಕ್ಷೇತ್ರ, ಬಿಜೆಪಿ 3 ಕ್ಷೇತ್ರ, ಕಾಂಗ್ರೆಸ್ -9,  ಕೆಜೆಪಿ -9 ಕ್ಷೇತ್ರಗಳಲ್ಲಿ  ಅಭ್ಯರ್ಥಿಗಳನ್ನು ನಿಲ್ಲಿಸಿದೆ.  13 ಮಂದಿ ಪಕ್ಷೇತರರು ಈ ಎಲ್ಲಾ ಪಕ್ಷದವರಿಗೆ ಸವಾಲೊಡ್ಡಿ ಕಣಕ್ಕಿಳಿದಿದ್ದಾರೆ.
 ಪಟ್ಟಣದಲ್ಲಿ ಶೇ.70 ಭಾಗ ಹಣ, ಹೆಂಡ, ಗೃಹೋಪಯೋಗಿ ವಸ್ತುಗಳ, ಪಕ್ಷ, ಜಾತಿ, ನೆಂಟಸ್ಥಿಕೆ ಮುಂತಾದ ಕಾರಣಗಳಿಗೆ  ಗಂಟು ಬಿದ್ದು  ಮತ ಚಲಾಯಿಸಬೇಕಾದ ಪರಿಸ್ಥಿತಿಗೆ ಒಳಪಟ್ಟಿದ್ದರೆ, ಇನ್ನುಳಿದ ಶೇ. 30 ಭಾಗ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆರಾಮವಾಗಿದ್ದಾರೆ. ಈ  10 ವಾರ್ಡ್‌ಗಳಲ್ಲೂ ಮತದಾರ ಗುಟ್ಟು ಬಿಟ್ಟು ಕೊಡದ ಕಾರಣ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವುದಕ್ಕೂ  ಸಾಧ್ಯವಾಗುತ್ತಿಲ್ಲ.  ಪಟ್ಟಣದ ರಾಜಕೀಯ ತಜ್ಞರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಎಲ್ಲ ಪಕ್ಷದವರು ತಮಗೇ ಸ್ಪಷ್ಟ ಬಹುಮತ ದೊರೆಯುತ್ತದೆ ಎಂದು ಹೇಳುತ್ತಿದ್ದರೆ, ಪಕ್ಷೇತರರು ತಾವೇ ನಿರ್ಣಾಯಕರು, ಎಲ್ಲಾ  ಪಕ್ಷಗಳಿಗಿಂತ ತಮಗೇ ಹೆಚ್ಚು ಮತ ದೊರೆಯುತ್ತದೆ. ನಾವೇ  ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಆಶಾಭಾವನೆಯಲ್ಲಿ ಇದ್ದಾರೆ.
ಪಟ್ಟಣದ 1ನೇ ವಾರ್ಡಿನಲ್ಲಿ ಒಟ್ಟು 455 ಮತದಾರರು ಇದ್ದು, 234 ಗಂಡು, 221  ಮಹಿಳೆಯರು ಇದ್ದಾರೆ. ಒಟ್ಟು 4 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಉಮೇಶ್, ಕಾಂಗ್ರೆಸ್‌ನಿಂದ ದೇವರಾಜ, ಜೆಡಿಎಸ್‌ನಿಂದ ಶಿವಣ್ಣ, ಕೆಜೆಪಿಯಿಂದ ಗಂಗಾಧರ್ ಅವರು ಸ್ಪರ್ಧಿಸಿದ್ದು, ನಾಲ್ಕೂ ಪಕ್ಷದವರಿಗೂ ತೀವ್ರ ಪ್ರತಿ ಸ್ಪರ್ಧೆ ನಡೆಯಲಿದೆ.
3ನೇ ವಾರ್ಡಿನಲ್ಲಿ   196  ಪುರುಷರು, 185 ಮಹಿಳೆಯರು ಸೇರಿದಂತೆ ಒಟ್ಟು 381 ಮತದಾರರು ಇದ್ದಾರೆ. ಒಟ್ಟು ನಾಲ್ರರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ ಇಲಿಯಾಜ್ ಶರೀಫ್, ಜೆಡಿಎಸ್‌ನಿಂದ ಮಾದೇಗೌಡ, ಕೆಜೆಪಿಯಿಂದ ಪಿ.ಕೆ. ಮಂಜುನಾಥ, ಪಕ್ಷೇತ್ರ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಶಂಶುದ್ದೀನ್ ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲಿ ಎಲ್ಲ ವಾರ್ಡ್‌ಗಳಿಗಿಂತಲೂ ಹೆಚ್ಚಾಗಿ ಪ್ರಚಾರದ ಬಿರುಸು ಕಂಡುಬಂದಿದೆ. ಎಲ್ಲ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
4ನೇ ವಾರ್ಡಿನಲ್ಲಿ 196  ಪುರುರು, 182 ಮಹಿಳೆಯರು ಸೇರಿದಂತೆ ಒಟ್ಟು  370  ಮತದಾರರು ಇದ್ದಾರೆ. ಒಟ್ಟು ಐವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ -ಶಬೀರ್ ಅಹಮ್ಮದ್, ಕಾಂಗ್ರೆಸ್ -
ಸೈಯ್ಯದ್‌ಸಾಹಿಲ್, ಕೆಜೆಪಿ - ಡಿ.ಎಸ್. ಜಯಣ್ಣ, ಪಕ್ಷೇತರರಾಗಿ ಎ.ಎಚ್.ಲಕ್ಷ್ಮಣ್, ಸಲೀಲ್‌ಪಾಷ  ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲೂ ತೀವ್ರ ಪ್ರತಿಸ್ಪರ್ಧೆ ಏರ್ಪಟ್ಟಿದೆ.
5ನೇ ವಾರ್ಡಿನಲ್ಲಿ 235  ಪುರುಷರು, 234ಮಹಿಳೆಯರು ಸೇರಿದಂತೆ ಒಟ್ಟು  469  ಮತದಾರರು ಇದ್ದಾರೆ. ಒಟ್ಟು 4 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ - ಸೈಯ್ಯದ್ ಜಾಫರ್, ಕಾಂಗ್ರೆಸ್ -
ಖಾಲಿದ್‌ಪಾಶಾ, ಕೆಜೆಪಿ - ಮಾಜಿ ಅಧ್ಯಕ್ಷ ತೌಫಿಕ್, ಪಕ್ಷೇತರರಾಗಿ ಎ.ಎಸ್.ಗೋಪಾಲಕೃಷ್ಣ. ಈ ವಾರ್ಡ್‌ನಲ್ಲೂ ತೀವ್ರ ಪ್ರತಿಸ್ಪರ್ಧೆ ಏರ್ಪಟ್ಟಿದೆ.
6ನೇ ವಾರ್ಡಿನಲ್ಲಿ 206  ಪುರುಷರು, 208 ಮಹಿಳೆಯರು ಸೇರಿದಂತೆ ಒಟ್ಟು  414  ಮತದಾರರು ಇದ್ದಾರೆ. ಒಟ್ಟು 2 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ -ಗುಲ್ಶಾದ್‌ಖಾನಂ, ಪಕ್ಷೇತರರಾಗಿ ನೀಲುಫರ್ ನಡುವೆ ನೇರ  ಸ್ಪರ್ಧೆ ಏರ್ಪಟ್ಟಿದೆ. 7ನೇ ವಾರ್ಡಿನಲ್ಲಿ  150  ಪುರುಷರು,152 ಮಹಿಳೆಯರು ಸೇರಿದಂತೆ ಒಟ್ಟು  302  ಮತದಾರರು ಇದ್ದಾರೆ. ಒಟ್ಟು 6 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ -ಶಮೀಮಾ ಬೇಗಂ, ಕಾಂಗ್ರೆಸ್ -ಶಾಹಿದಾ ಬಾನು , ಕೆಜೆಪಿ - ರತ್ನಮ್ಮ, ಪಕ್ಷೇತರರಾಗಿ  ಕೆ.ಎಸ್. ವೀಣಾ,  ನೂರುನ್ನೀಸಾ, ವರಲಕ್ಷ್ಮಿ  ಸ್ಪರ್ಧೆಯಲ್ಲಿದ್ದಾರೆ.
8ನೇ ವಾರ್ಡಿನಲ್ಲಿ 161  ಪುರುಷರು, 199 ಮಹಿಳೆಯರು ಸೇರಿದಂತೆ ಒಟ್ಟು  360  ಮತದಾರರು ಇದ್ದಾರೆ. ಒಟ್ಟು 4 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ - ಎಚ್.ಪಿ.ಆಶಾ, ಕಾಂಗ್ರೆಸ್ -ಪ್ರೇಮ,  ಕೆಜೆಪಿ -  ಎಚ್.ಬಿ.ಮೀನಾ ಪಕ್ಷೇತರರಾಗಿ  ಮಣಿ  ಕಣದಲ್ಲಿದ್ದಾರೆ.
9ನೇ ವಾರ್ಡಿನಲ್ಲಿ ಅತಿ ಕಡಿಮೆ ಮತದಾರರಿದ್ದಾರೆ.  ಒಬ್ಬ ಅಂಚೆ ಮತದಾರನು ಸೇರಿದಂತೆ 129  ಪುರುಷರು, 124 ಮಹಿಳೆಯರು ಸೇರಿದಂತೆ ಒಟ್ಟು  253  ಮತದಾರರು ಇದ್ದಾರೆ. ಒಟ್ಟು 4 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ -ಎಚ್.ಪಿ.ದಿನೇಶ್, ಕಾಂಗ್ರೆಸ್ - ಎಂ.ಬಿ.ವಿಜಯಕಾಂತ್,   ಕೆಜೆಪಿ - ಎಚ್.ಪಿ. ನಂದೀಶ್, ಪಕ್ಷೇತರರಾಗಿ ಮಾಜಿ ಅಧ್ಯಕ್ಷ  ಎಚ್.ಬಿ.ಧರ್ಮರಾಜ್ ಕಣದಲ್ಲಿದ್ದಾರೆ.  ತೀವ್ರ ಕುತೂಹಲಕ್ಕೆ  ಕಾರಣವಾಗಿರುವ ಈ ವಾರ್ಡಿನ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ನಾಲ್ವರು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
10ನೇ ವಾರ್ಡಿನಲ್ಲಿ ಅತಿ ಹೆಚ್ಚು ಮತದಾರರು ಇದ್ದಾರೆ,  238  ಪುರುಷರು, 255 ಮಹಿಳೆಯರು ಸೇರಿದಂತೆ ಒಟ್ಟು  493  ಮತದಾರರು ಇದ್ದಾರೆ. ಒಟ್ಟು 5 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ - ಅರಸಯ್ಯ, ಕಾಂಗ್ರೆಸ್ -ಮುದ್ದುಕೃಷ್ಣ, ಬಿಜೆಪಿ - ಕರಿಯಯ್ಯ,  ಕೆಜೆಪಿ -  ಮಾಜಿ  ಉಪಾಧ್ಯಕ್ಷ  ಶಿವಣ್ಣ,  ಪಕ್ಷೇತರರಾಗಿ ನಾಗರಾಜ್ ಕಣದಲ್ಲಿದ್ದಾರೆ. ಈ ವಾರ್ಡಿನಲ್ಲಿ ಭರದ ಪ್ರಚಾರ ಇಲ್ಲದಿದ್ದರೂ ತಣ್ಣನೆ  ಪ್ರಚಾರ ನಡೆಯುತ್ತಿದ್ದು, ಎಲ್ಲ ಅಭ್ಯರ್ಥಿಗಳೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
11ನೇ ವಾರ್ಡಿನಲ್ಲಿ 248  ಪುರುಷರು, 232 ಮಹಿಳೆಯರು ಸೇರಿದಂತೆ ಒಟ್ಟು  480  ಮತದಾರರು ಇದ್ದಾರೆ. ಒಟ್ಟು5 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರಲ್ಲಿ ಜೆಡಿಎಸ್ -ಜಯಮ್ಮ, ಕಾಂಗ್ರೆಸ್ -ರತ್ನ, ಬಿಜೆಪಿ - ಶೀಲಾವತಿ, ಕೆಜೆಪಿ - ಯಶೋಧ, ಪಕ್ಷೇತರರಾಗಿ ಲಲಿತ ಸ್ಪರ್ಧಾ ಕಣದಲ್ಲಿದ್ದಾರೆ.
ಈ ಎಲ್ಲಾ ವಾರ್ಡ್‌ಗಳೂ ಸೇರಿದಂತೆ 2,177 ಪುರುಷರು,  2170 ಮಹಿಳೆಯರು  ಸೇರಿದಂತೆ 4,347 ಒಟ್ಟು ಮತದಾರರು ಇದ್ದಾರೆ.  ಪುರುಷರು ಮತ್ತು ಮಹಿಳೆಯರ ನಡುವೆ  ಕೇವಲ 7 ಮತದಾರರ ಅಂತರವಿದೆ.  ಚುನಾವಣಾ ಕಾರ್ಯಕ್ಕೆ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. 11 ವಾರ್ಡ್‌ಗಳಲ್ಲಿ 3 ಅತಿಸೂಕ್ಷ್ಮ ಅವುಗಳೆದಂರೆ 3ನೇ ವಾರ್ಡ್ ಹೌಸಿಂಗ್ ಬೋರ್ಡ್, 5ನೇ ವಾರ್ಡ್ ದೊಡ್ಡಬೀದಿ, 9ನೇ ವಾರ್ಡ್ ಹಳೆ ಸಂತೇ ಬೀದಿಯಾಗಿದೆ.  3  ಸೂಕ್ಷ್ಮ ವಾರ್ಡ್‌ಗಳಾಗಿವೆ.  4 ಸಾಮಾನ್ಯ ವಾರ್ಡ್‌ಗಳಾಗಿವೆ.
ಪೊಲೀಸರು  ಅತಿ ಸೂಕ್ಷ್ಮ ಮತಗಟ್ಟೆಗೆ ಒಬ್ಬರು  ಮುಖ್ಯ ಪೇದೆ  ಸೇರಿದಂತೆ  ಒಬ್ಬ ಪೇದೆ, ಒಬ್ಬ ಹೋಂಗಾರ್ಡ್‌ನನ್ನು  ನಿಯೋಜಿಸಲಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!