ಹಾಸನ

ಕಣದ ಕುತೂಹಲ!

ದಯಾಶಂಕರ ಮೈಲಿ
ಕನ್ನಡಪ್ರಭ ವಾರ್ತೆ  ಹಾಸನ  ಮಾ.6
ಹಾಸನ ನಗರಸಭೆ ಚುನಾವಣೆ ಪ್ರಚಾರ ಶಾಂತಿಯುತವಾಗಿ ನಡೆದಿದೆ. ಮಾ. 7 ರಂದು ನಡೆಯುವ ಮತದಾನ ಕೂಡ ಸರ್ವ ಸಮ್ಮತವಾಗಿ, ಮುಕ್ತವಾಗಿ ನಡೆಯಲು ಜಿಲ್ಲಾಡಳಿತಕೂಡ ಸಕಲ ಸಿದ್ದತೆ ನಡೆಸಿದೆ. ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ತನು, ಮನ ಕ್ಕಿಂತ ಹೆಚ್ಚಾಗಿ ಧನದೊಂದಿಗೆ ಕೈಲಾದಷ್ಟು ಮಟ್ಟಿಗೆ ಪ್ರಚಾರ ನಡೆಸಿ, ಗೆಲುವಿಗೆ ಶ್ರಮಿಸಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ, ಶಾಸಕ ಎಚ್.ಎಸ್.ಪ್ರಕಾಶ್, ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಬಿ. ಶಿವರಾಂ, ಶಾಸಕ ಮಂಜು, ವಿಧಾನಪರಿಷತ್ ಮಾಜಿ ಸದಸ್ಯ ಎಸ್. ಆನಂದ್, ಬಿಜೆಪಿ ಮುಖಂಡ ಎಂ.ಕೆ. ಕಮಲಕುಮಾರ್,  ಮಂಜುನಾಥ್ ಕೋರೆ, ನವಿಲೆ ಅಣಪ್ಪ ಮತ್ತಿತರರು ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ಬಂಡಾಯ  ಅಭ್ಯರ್ಥಿಗಳು ಜೆಡಿಎಸ್‌ಗೆ ತೀವ್ರ ಪೈಪೋಟಿ ನೀಡುತ್ತಿರುವುದು ಜೆಡಿಎಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷಕ್ಕಿಂತ ಹೆಚ್ಚಾಗಿಂತ ವೈಯಕ್ತಿಕ ವರ್ಚಸ್ಸನ್ನು ನಂಬಿ ಹೋರಾಟ ಮಾಡುತ್ತಿದ್ದಾರೆ.
35 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿರುವ ಬಿಜೆಪಿ ಇಂದಿನ ಪರಿಸ್ಥಿತಿಯನ್ನು ನೋಡಿದರೇ ಖಾತೆ ತೆರೆಯುವುದು ಕಷ್ಟಕರ ಎಂಬ ಅನುಮಾನ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ. ಬಿಜೆಪಿಗೆ ಹೋಲಿಸಿದರೇ ಕೆಜಿಪಿಯೇ ಪರವಾಗಿಲ್ಲ. ಕೆಜೆಪಿ 14 ಮತ್ತು 15 ರಲ್ಲಿ ಜೆಡಿಎಸಸ್ವಿರುದ್ಧ ಸೆಣಸಾಟ ನಡೆಸುತ್ತಿದೆ. ವಾರ್ಡ್ 14 ರಲ್ಲಿ ಕೆಜೆಪಿ ಗೆದ್ದರೂ ಆಶ್ಚರ್ಯಪಡಬೇಕಾಗಿಲ್ಲ. ಕೆಜೆಪಿ ಅಗಿಲೆ ಯೋಗೀಶ್ತ್‌ವ್ಮು ತಂಡದೊಂದಿಗೆ ಬಿರುಸಿನ ಪ್ರಚಾರ ನಡೆಸಿದ್ದಾರೆ.
ವಾರ್ಡ್ ವಾರು ಯಾರು ಯಾರಿಗೆ ಸ್ಪರ್ಧಿ, ಯಾವ ಪಕ್ಷದ ಸ್ಥಿತಿ ಗತಿ ಏನು?
ಟ  ವಾರ್ಡ್ ನಂ - 1 ಇಲ್ಲಿ  ಜೆಡಿಎಸ್‌ನ ಸಿ.ಎಂ. ಭಾನುಪ್ರಕಾಶ್, ಕಾಂಗ್ರೆಸ್‌ನ ಜಿ.ರವಿ ನಡುವೆಯೇ ನೇರ ಸ್ಪರ್ಧೆ ಇದೆ. ಇಬ್ಬರೂ ಸುಮಾರು ಸಾವಿರಕ್ಕೂ ಮತದಾರರು ಇರುವ ರಾಜಘಟ್ಟ ಗ್ರಾಮದವರೇ. ಈ ಮತದಾರರರು ಯಾರಿಗೆ ಒಲಿಯುತ್ತಾರೋ ಅವರಿಗೆ ಜಯ ಕಟ್ಟಿಟ್ಟ ಬುತ್ತಿ. ಚನ್ನಪಟ್ಟಣ ಬಡಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಮತ ಬರುವ ನಿರೀಕ್ಷೆ ಹೊಂದಲಾಗಿದೆ. ಇದಾದರೇ ತೆನೆ ಹೊತ್ತ ಮಹಿಳೆಗೆ ಕೊರಳಿನ ಮಾಲೆ. ಬಿಜೆಪಿಯ ವಿಜಯಕುಮಾರ್, ಪಕ್ಷೇತರ ಅಭ್ಯರ್ಥಿ ಎಸ್. ಮಂಜುನಾಥ್ ಪ್ರಚಾರ ನಡೆಸಿದ್ದಾರೆ.
ಟ  ವಾರ್ಡ್ -2  ಕಾಂಗ್ರೆಸ್ನ್ ಎಚ್. ಶೋಭಾ ಗಣೇಶ್, ಜೆಡಿಎಸ್‌ನ ಯೋಗೇಶ್ವರಿ ವೆಂಕಟೇಶ್ ನಡುವೆ ಕದನ ನಡೆದಿದೆ. ಶೋಭಾ ಗಣೇಶ್ ಸಹೋದರರಾದ ನಗರಸಭೆ ಸದಸ್ಯ ರವಿ ತಮ್ಮ ಸಹೋದರಿಗೆ ಗೆಲವಿಗೆ ಶ್ರಮಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಇಬ್ಬರಲ್ಲಿ ಯಾರು ಬೇಕಾದರೂ ಗೆಲ್ಲಬಹುದು ಎಂಬ ಸ್ಥಿತಿ ಇದೆ. ಬಿಜೆಪಿಯ ವಿ.ಎಸ್. ನೇತ್ರಾವತಿ ಮತ್ತು ಪಕ್ಷೇತರ ಅಭ್ಯರ್ಥಿ ಸೀತಾ ಗೆಲುವಿನ ಯತ್ನ ಮಾಡಿದ್ದಾರೆ.
ಟ  ವಾರ್ಡ್ -3 ಇದು ಕುತೂಹಲ ಕೆರಳಿಸಿರುವ ಕ್ಷೇತ್ರ. ಏಕೆಂದರೆ ಜೆಡಿಎಸ್‌ನಲ್ಲಿ ಟಿಕೆಟ್ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿರುವ ಎಚ್.ಎಂ. ಸುರೇಶ್‌ಕುಮಾರ್, ಜೆಡಿಎಸ್ ಅಭ್ಯರ್ಥಿ ಕೃಷೇಗೌಡರಿಗೆ ತೀವ್ರ ಸ್ಪರ್ಧೆವೊಡ್ದಿದ್ದಾರೆ. ದಿನಗಳು ಉರುಳಿದಂತೆ ಜೆಡಿಎಸ್ ಅಭ್ಯರ್ಥಿ ಪರಿಸ್ಥಿತಿ ಉತ್ತಮ ಗೊಂಡಂತೆ ಕಂಡು ಬಂದರೂ ಇಲ್ಲಿನ ಶಿಕ್ಷಿತ ಮತದಾರರು ಯಾರ ಕಡೆ ಒಲಿಯುತ್ತಾರೆ ಎಂಬುದು ನಿಗೂಢವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಮತದಾರರೇ ಹೆಚ್ಚಿದ್ದರೂ ಹಿಂದಿನ ಬಾರಿ ನಗರಸಭೆ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ ಸುರೇಶ್‌ಕುಮಾರ್ ಅವರಿಗೆ ಮತ್ತೆ ಟಿಕೆಟ್ ನೀಡಬೇಕಿತ್ತು ಎಂಬ ಅನಿಸಿಕೆ ವ್ಯಕ್ತವಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು, ಲೆಕ್ಕಕ್ಕಿಲ್ಲ.
ಟ  ವಾರ್ಡ್ -4 ಇಲ್ಲಿನ ಜೆಡಿಎಸ್‌ನ ಲೀಲಾವತಿ ವಾಸು ಮತ್ತು ಕಾಂಗ್ರೆಸ್‌ನ ಪ್ರೇಮ ರಾಜೇಶ್ ಅವರ ನಡುವೆ ನೇರ ಸ್ಪರ್ಧೆ ಇದೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿ ಪತಿ ವಾಸು ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಶಾಮಿಯಾನ ರಾಜೇಶ್ ಎಂದೇ ಕರೆಸಿಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಪತಿ ಕೂಡ ಹೋರಾಟ ಮಾಡುತ್ತಿದ್ದಾರೆ.  ಉಳಿದಂತೆ ಬಿಜೆಪಿಯ ಎಚ್.ಎಸ್. ರೂಪ, ಪಕ್ಷೇತರರಾಗಿ ನಿಂತಿರುವ ಪುಷ್ಪಾವತಿ ಯೋಗೇಶ್, ಸುನಂದ ಸಾಂಕೇತಿಕ ಸ್ಪರ್ಧೆ ಎಂಬಂತಾಗಿದೆ. ಈ ವಾರ್ಡ್‌ಗೆ ಹೆಚ್ಚು ಮತದಾರರು ಹೊಂದಿರುವ ವಾರ್ಡ್ ಎಂಬ ಹೆಗ್ಗಳಿಕೆ ಇದೆ.
ಟ  ವಾರ್ಡ್ -5 ಇಲ್ಲೂ ಕೂಡ ಕಾಂಗ್ರೆಸ್‌ನ ಡಿ.ಕವಿತ ಮತ್ತು ಜೆಡಿಎಸ್‌ನ ಆರ್. ಅಂಬಿಕಾ ರವಿಶಂಕರ್ ಅವರ ನಡುವೆ ಹೋರಾಟ. ಅಂಬಿಕಾ ನಗರಸಭೆ ಮಾಜಿ ಅಧ್ಯಕ್ಷರಾಗಿದ್ದವರು. ಅವರ ಪತಿ ರವಿಶಂಕರ್ ಕೂಡಾ ನಗರಸಭೆ ಸದಸ್ಯರಾಗಿದ್ದವರೇ. ಈ ಕ್ಷೇತ್ರ  ಜೆಡಿಎಸ್ ಪರವಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಲಿಲ್ಲ ಎಂಬ ಅಸಮಾಧಾನ ಇದೆ. ಆದರೆ ಇದನ್ನು ಕಾಂಗ್ರೆಸ್ ಅಭ್ಯರ್ಥಿ ನಿರೀಕ್ಷಿತ ಮಟ್ಟದಲ್ಲಿ ಪ್ಲಸ್ ಪಾಯಿಂಟ್ ಮಾಡಿಕೊಳ್ಳಲಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ.  ಪಕ್ಷೇತರರಾಗಿ ನೇತ್ರ ನಿಂತಿದ್ದಾರೆ.
ಟ  ವಾರ್ಡ್ -6 ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿರುವ ಸ್ಪರ್ಧಿಸಿರುವ ಮೋಹನ್‌ಕುಮಾರ್ (ಅಂಗಡಿ ಸ್ವಾಮಿ ) ಅವರು ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಚ್.ಎಸ್. ಪ್ರಸನ್ನಕುಮಾರ್ ಅವರಿಗೆ ಗೆಲುವಿಗೆ ಅಡ್ಡಗಾಲು ಹಾಕಿದ್ದಾರೆ. ಶಾಸಕ ಪ್ರಕಾಶ್ ಅವರ ಆಪ್ತ ಮಿತ್ರ ಎಂಬ ಕಾರಣಕ್ಕಾಗಿ ಟಿಕೆಟ್ ನೀಡಲಾಗಿದೆ. ಅಲ್ಲದೇ ಬಿಜೆಪಿಯಿಂದ ನಗರಸಭೆಗೆ ನಾಮ ನಿರ್ದೇಶನ ಸದಸ್ಯರಾಗಿದ್ದರೂ ಪಕ್ಷೇತರರಾಗಿ ಸ್ಪರ್ಧಿಸಿರುವ ವಕೀಲ ಕೆ.ಎಸ್. ಶ್ಯಾಮ ಸುಂದರ್ ಅವರಿಗೆ ಜೆಡಿಎಸ್ ಬಂಡಾಯದ ಅನುಕೂಲವಾದರೇ ಆಶ್ಚರ್ಯಪಡಬೇಕಾಗಿಲ್ಲ.
ಟ  ವಾರ್ಡ್ -7 ಇಲ್ಲಿನ ಜೆಡಿಎಸ್‌ನ ಎಸ್. ಚಂದ್ರಕಲಾ ನಾಗೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಖ್ಯಾತ ಯೋಗಪಟು  ಎಚ್. ಬಿ. ರಮೇಶ್ ಅವರ ಸೊಸೆಯಾದ ಚಂದ್ರಕಲಾ ಅವರಿಗೆ ಪಕ್ಷದ ಜೊತೆಗೆ ಮಾವನವರ ವರ್ಚಸ್ಸು ಅನುಕೂಲವಾಗಬಹುದು. ಕಾಂಗ್ರೆಸ್ ಅಭ್ಯರ್ಥಿ ಎಂ.ಎ. ಇಂಧುಮತಿ ಅನು ಕೂಡ ಗೆಲುವಿಗೆ ಬೇಕಾದ ತಂತ್ರಗಳನ್ನು ಅನುಸರಿಸಿ ಹೋರಾಟ ಒಡ್ಡುತ್ತಿದ್ದಾರೆ. ಕೆಜೆಪಿಯ ಭಾಗ್ಯ, ಪಕ್ಷೇತರ ಅಭ್ಯರ್ಥಿ ಮೇರಿ ಪ್ರಸನ್ನ ಸಾಂಕೇತಿಕ ಸ್ಪರ್ಧೆ.
ಟ  ವಾರ್ಡ್‌ನ -8 ಜೆಡಿಎಸ್‌ನ ಅಭ್ಯರ್ಥಿ ನೇತ್ರಾವತಿ ಗಿರೀಶ್ ಅವರಿಗೆ ತಮ್ಮ ಪಕ್ಷದ ಬಂಡಾಯ ಅಭ್ಯರ್ಥಿ ತಾರಾ ಪುಟ್ಟಸ್ವಾಮಿ ಅವರೇ ಎದುರಾಳಿ.  ಕಾಂಗ್ರೆಸ್ ಅಭ್ಯರ್ಥಿ ಮಂಗಳಮ್ಮ ಮತ್ತು ಪಕ್ಷೇತರಾಗಿ ಭಾಗ್ಯ ನಿಂತಿದ್ದಾರೆ. ಬಂಡಾಯ ಅಭ್ಯರ್ಥಿ ನಿಲ್ಲದಿದ್ದರೇ ನೇತ್ರಾವತಿ  ಇಷ್ಟೊತ್ತಿಗೆ ಗೆದ್ದಾಗುತ್ತಿತ್ತು.
ಟ  ವಾರ್ಡ್- 9 ಜೆಡಿಎಸ್ ಅಭ್ಯರ್ಥಿ ಡಾ.ಎಚ್.ಎಸ್. ಅನಿಲಕುಮಾರ್ ಗೆಲವು ನಾಗಲೋಟದಲ್ಲಿ ಸಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಉಪ ಚುನಾವಣೆಯಲ್ಲೂ ಅನಿಲಕುಮಾರ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಎಚ್.ಎಲ್. ವಿಜಯಕುಮಾರ್ ಈಗಲೂ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿಲ್ಲ.
ಟ  ವಾರ್ಡ್- 10 ಎರಡನೇ ಬಾರಿ ಆಯ್ಕೆ ಬಯಸಿರುವ ಕಾಂಗ್ರೆಸ್  ಅಭ್ಯರ್ಥಿ ಎಚ್.ಎಂ. ಯಶವಂತ್‌ಗೆ ಗೆಲವು ಸುಲಭದ ತುತ್ತಾಗಿಲ್ಲ. ಜೆಡಿಎಸ್‌ನ ಎಚ್.ಎಚ್. ರಜಿನಿಕಾಂತ್ ಕಾಂಗ್ರೆಸ್ ಗೆಲುವಿಗೆ ತೀವ್ರ ರೀತಿಯಲ್ಲಿ ತೊಂದರೆ ಒಡ್ಡಿದ್ದಾರೆ.  ಬಿಜೆಪಿಯ ಎಚ್.ಜಿ. ಜಯಶೇಖರ್,  ಕೆಜೆಪಿಯ ಎಚ್.ಎನ್. ಮಹದೇವ್, ಪಕ್ಷೇತರಾಗಿ ಚಿನ್ನಸ್ವಾಮಿ, ಸಿ.ಜೆ. ಲಕ್ಷಣ, ಬಿ.ಎಲ್. ಹೇಮಂತ್‌ಕುಮಾರ್ ಕಣದಲ್ಲಿ ಇದ್ದಾರೆ.
ಟ  ವಾರ್ಡ್ -11 ಜೆಡಿಎಸ್‌ನ ಎಚ್.ಕೆ. ಯೋಗೇಂದ್ರ ಬಾಬು ಅವರಿಗೆ ಕಾಂಗ್ರೆಸ್‌ನ ಕುಮಾರ್ ಹಾಗೂ ಸಿಪಿಎಂನ ಶಾವಿಲ್ ಹಮೀದ್ ತೀವ್ರ ಸ್ಪರ್ಧೆ ನೀಡಿದ್ದಾರೆ. ಸಿಪಿಎಂ ಅಭ್ಯರ್ಥಿ ತೆಗೆದುಕೊಳ್ಳುವುದು ಜೆಡಿಎಸ್ ಮತಗಳೇ. ಇದು ಜೆಡಿಎಸ್‌ಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಟ  ವಾಡ್ ರ್ -12 ಕಾಂಗ್ರೆಸ್‌ನ ಸಿ. ನರೇಂದ್ರಬಾಬು ಮತ್ತು ಪಕ್ಷೇತರ ಅಭ್ಯರ್ಥಿ  ಎಚ್.ಎಸ್. ಪ್ರಸನ್ನಕುಮಾರ್ ಅವರು ಜೆಡಿಎಸ್ ಅಭ್ಯರ್ಥಿ ಎಂ.ಡಿ. ಮಂಜುನಾಥ್ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಬೇಕಾದ ಕಸರತ್ತು ಹಾಕಿದ್ದಾರೆ. ಬಿಜೆಪಿಯ ಎಚ್.ಎಸ್. ಮನೋಹರ, ಕೆಜಿಪಿಯ ಎ.ರಾಘವೇಂದ್ರ ಪ್ರಸಾದ್ ಸ್ಪರ್ಧೆಯಲ್ಲಿ ಇದ್ದಾರೆ.
ಟ  ವಾರ್ಡ್ -13 ಇಲ್ಲೂ ಕೂಡ ಜೆಡಿಎಸ್‌ನ ನಾಗವೇಣಿಗೆ ಗೆಲವಿನ ನಾಗಲೋಟಕ್ಕೆ ಪಕ್ಷೇತರ ಅಭ್ಯರ್ಥಿ ಪಾರ್ವತಿ ಮೂರ್ತಿ ಅವರು ಬ್ರೇಕ್ ಹಾಕಿದ್ದಾರೆ. ಪಾರ್ವತಿ ಅವರ ಪತ್ನಿ ಮೂರ್ತಿ ಅವರ ವೈಯಕ್ತಿಕ ವರ್ಚಸ್ಸು ಪರಿಣಾಮ ಬೀರಿದೆ.  ಕಾಂಗ್ರೆಸ್‌ನಿಂದ ಕಮಲಮ್ಮ, ಕೆಜೆಪಿಯಿಂದ ಸರೋಜಮ್ಮ, ಪಕ್ಷೇತರಾಗಿ ಸುಶೀಲ ನಿಂತಿದ್ದಾರೆ.
ಟ  ವಾರ್ಡ್ -14 ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಕೆಜೆಪಿಯ ಬಿ.ಎಸ್. ಉಷಾ ಅವರು ಜೆಡಿಎಸ್ ಅಭ್ಯರ್ಥಿ ಅನ್ನಪೂರಮ್ಮ ಗೆಲವು ತಡೆವೊಡ್ಡಿದ್ದಾರೆ.  ಉಷಾ ಕೂಡ ಜೆಡಿಎಸ್‌ನಿಂದ ಟಿಕೆಟ್ ಸಿಗದೇ ಬಂಡಾಯವಾಗಿ ಸ್ಪರ್ಧಿಸಿದ್ದು, ನಗರಸಭೆ ಮಾಜಿ ಅಧ್ಯಕ್ಷೆ ರತ್ಮಮ್ಮ ಮಹಾತೇಂಶ್ ಅವರ ಸೊಸೆ ಉಷಾ. ಮಹಾತೇಶ್ ಕೂಡ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಬೇರೆ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದಾರೆ.
ಟ  ವಾರ್ಡ್‌ನ 15. ಈ ವಾರ್ಡ್‌ನಲ್ಲಿ ಕೆಜೆಪಿಯ ಎಚ್.ಕೆ. ಲೋಕೇಶ್, ಪ್ರಬಲ ಜೆಡಿಎಸ್ ಅಭ್ಯರ್ಥಿ ಕೆ.ಆರ್. ಮಲ್ಲೇಶ್ ಹಾಗೂ ಕಾಂಗ್ರೆಸ್‌ನ ಎಚ್.ಆರ್. ವಾಸು ಅವರಿಗೆ ತೀವ್ರ ಪೈಪೋಟಿ ನೀಡಿದ್ದಾರೆ.  ಕಳೆದ ಚುನಾವಣೆಯಲ್ಲಿ ಮಲ್ಲೇಶ್ 7 ಮತಗಳಿಂದ ಸೋತಿದ್ದರು.  ಬಿಜೆಪಿಯಿಂದ ಡಿ. ಪ್ರಸನ್ನಕುಮಾರ್, ಸಂಯುಕ್ತದಳದಿಂದ ಪಿ.ಎಸ್. ಮಧುಸೂದನ್ ಸ್ಪರ್ಧಿಸಿದ್ದಾರೆ.
ಟ  ವಾರ್ಡ್ - 16 ಕಾಂಗ್ರೆಸ್‌ನ ಟಿ.ಗಣೇಶ್, ಜೆಡಿಎಸ್‌ನ ಎಚ್.ಎಲ್. ವಿಜಯಕುಮಾರ್, ಕೆಜೆಪಿಯ ಎಚ್.ಎಸ್. ಆನಂದ್ ನಡುವೆ ತ್ರೀಕೋನ ಸ್ಪರ್ಧೆ ಇದೆ.  ಪಕ್ಷೇತರರಾಗಿ ಜಿ.ಟಿ.ಗಣೇಶ್ ನಿಂತಿದ್ದಾರೆ.
ಟ  ವಾರ್ಡ್- 17 ಜೆಡಿಎಸ್‌ನ ಎಜಾಜ್‌ಪಾಷಾ ಅವರಿಗೆ ಪಕ್ಷೇತರ ಅಭ್ಯರ್ಥಿ ಸೈಯದ್ ಅಜಂ ಮತ್ತು ಕಾಂಗ್ರೆಸ್‌ನ ಹಫೀಜ್‌ಖಾನ್ ಸ್ಪರ್ಧೆ ಒಡ್ಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಇಲ್ಲದಿದ್ದರೆ ಏಜಾಜ್‌ಪಾಷಾ ಗೆಲವು ಸುಲಭವಾಗುತ್ತಿತ್ತು. ಕೆಜೆಪಿಯಿಂದ  ಮಹಮದ್‌ಪಾಜೀಲ್, ಪಕ್ಷೇತರರಾಗಿ ಅಲೀಂ ಪಾಷಾ ಮತ್ತು ಬಿಜೆಪಿಯಿಂದ ಈರೇಗೌಡ ಸ್ಪರ್ಧಿಸಿದ್ದಾರೆ.
ಟ  ವಾರ್ಡ್ -18 ಕಾಂಗ್ರೆಸ್‌ನ ಆರೀಫ್‌ಖಾನ್ ಕೊಂಚ ಮುಂದಿದ್ದು, ಜೆಡಿಎಸ್‌ನ ಸೈಯದ್‌ಶಬ್ಬೀರ್ ಹೋರಾಟ ಮಾಡಿದ್ದಾರೆ. ಉಳಿದಂತೆ ಬಿಜೆಪಿಯಿಂದ ದೀಪಕ್‌ಗೌಡ, ಪಕ್ಷೇತರರಾಗಿ  ಎಚ್.ಎಂ. ಅಹಮದ್‌ಖಾನ್, ಬಸವರಾಜು, ರಫೀಕ್ ಅಹಮದ್, ಸರ್ದಾರ್‌ಹುಸೇನ್ ನಿಂತಿದ್ದಾರೆ.
ಟ  ವಾರ್ಡ್- 19 ಇಲ್ಲಿ ಕಾಂಗ್ರೆಸ್‌ನ ಟಿ.ಎಸ್. ನೀಲಕಂಠಪ್ಪ, ಜೆಡಿಎಸ್‌ನ ಸೈಯದ್ ಅಸ್ಲಂ ನಡುವೆ ತೀವ್ರ ಸೆಣಸಾಟ ನಡೆದಿದೆ.  ಯಾರೇ ಗೆದ್ದರೂ 50 ಮತಗಳ ಅಂತರದಿಂದಲೇ ಎನ್ನಲಾಗುತ್ತಿದ್ದು,  ಕೆಜೆಪಿಯ ಎಚ್.ಸಿ. ಜೀವನ್,  ಬಿಜೆಪಿಯ ಜಿ.ಆರ್. ರಮೇಶ್, ಪಕ್ಷೇತರ ಅಭ್ಯರ್ಥಿಗಳಾದ ಕಲೀಲ್‌ಪಾಷಾ, ನಯಾಜ್‌ಖಾನ್, ಎಚ್.ಎ. ಮೋಹನ್, ಸೈಯದ್‌ಮುಜಾಹಿದ್‌ಪಾಷ ಕಣದಲ್ಲಿ ಇದ್ದಾರಷ್ಟೇ.
ಟ  ವಾರ್ಡ್ -20 ಜೆಡಿಎಸ್‌ನ ವೆಂಕಟೇಶ್ ಅವರಿಗೆ ಪಕ್ಷೇತರ ಅಭ್ಯರ್ಥಿ ಡಿ. ಗಣೇಶ್ ಹೋರಾಟ ನೀಡಿದ್ದಾರೆ.  ಬಿಜೆಪಿಯ ರಾಜೇಶ್ವರಿ, ಕಾಂಗ್ರೆಸ್‌ನ ಎ.ಎಸ್. ಮಹಮದ್‌ಶಫಿ,  ಪಕ್ಷೇತರ ಅಭ್ಯರ್ಥಿಗಳಾಗಿ ರಿಜಜ್ವಾನ್, ಅಮೀರ್‌ಖಾನ್, ಎಚ್.ಎಲ್. ಶ್ರೀನಿವಾಸ್, ಅತೀಕ್‌ಪಾಷಾ ನಿಂತಿದ್ದಾರೆ.
ಟ  ವಾರ್ಡ್ -21 ಕಾಂಗ್ರೆಸ್‌ನ ಆಸಿಪ್‌ಪಾಷಾ ಮತ್ತು ಜೆಡಿಎಸ್‌ನ ಇರ್ಷಾದ್‌ಪಾಷ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.  ಬಿಜೆಪಿ, ಕೆಜೆಪಿ ಅಭ್ಯರ್ಥಿಗಳಿಲ್ಲ. ಪಕ್ಷೇತರರಾಗಿ  ಸೈಯದ್ ಆಸಿಫ್ ಉಲ್ಲಾ, ಅಪ್ಸರ್‌ಶರೀಫ್, ಇಸಾಕ್‌ಶರೀಫ್, ನೌಶಾದ್‌ಪಾಷ, ಫೈರೋಜ್‌ಪಾಷ ಸ್ಪರ್ಧಿಸಿದ್ದಾರೆ. ಜೆಡಿಎಸ್ ಮುನ್ನಡೆ ಸಾಧಿಸಬಹುದು.
ಟ  ವಾರ್ಡ್ -22 ಇಲ್ಲೂ ಕೂಡ ಜೆಡಿಎಸ್‌ನ ಹಫಿಜೂಲ್ ರೆಹಮಾನ್, ಕಾಂಗ್ರೆಸ್‌ನ ಅಬ್ದುಲ್‌ಖಯ್ಯಾಮ್ ನಡುವೆ ಸ್ಪರ್ಧೆ ಇದೆ.  ಪಕ್ಷೇತರರಾಗಿ ಆದಿಲ್‌ಪಾಷ, ಎಚ್.ಎ. ಸೈಯದ್ ಅನ್ವರ್ ನಿಂತಿದ್ದಾರೆ.
ಟ  ವಾರ್ಡ್ -23 ಕಾಂಗ್ರೆಸ್‌ನ ಪಾರ್ವತಮ್ಮ ಮತ್ತು ಜೆಡಿಎಸ್‌ನ ಶಾರದಮ್ಮ  ನೇರ ಸ್ಪರ್ಧೆ ಇದ್ದು,  ಇಲ್ಲಿ ಬಿಜೆಪಿ, ಕೆಜೆಪಿ, ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿಲ್ಲ. ಶಾರದಮ್ಮ ಮುಂದೆ ಇದ್ದಾರೆ.
ಟ  ವಾರ್ಡ್ -24 ಜೆಡಿಎಸ್‌ನ ಎಚ್.ಆರ್. ಪ್ರಸನ್ನಕುಮಾರ್, ಕಾಂಗ್ರೆಸ್‌ನ ಎಚ್.ಕೆ. ವಿಜಯಕುಮಾರ್, ಪಕ್ಷೇತರ ಅಭ್ಯರ್ಥಿ ಎಚ್.ಎಸ್. ಮಂಜು (ಬಂಗಾರಿ ) ನಡುವೆ ತ್ರಿಕೋನ ಸ್ಪರ್ಧೆ ಇದೆ. ಎರಡನೇ ಬಾರಿ ಆಯ್ಕೆಯಾಗಲು ಮುಂದಾಗಿರುವ ಮಂಜು ಅವರಿಗೆ ಗೆಲವು ಸುಲಭವಾಗಿಲ್ಲ.
ಟ  ವಾರ್ಡ್ -25 ಪಕ್ಷೇತರ ಅಭ್ಯರ್ಥಿ  ಎಚ್.ಪಿ. ರಘುನಾಥ್, ಜೆಡಿಎಸ್‌ನ ಎಚ್.ಬಿ. ಗೋಪಾಲ್ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಕಾಂಗ್ರೆಸ್‌ನ ಕೆ. ರಾಘವೇಂದ್ರಚಾರ್, ಬಿಜೆಪಿ ಸಿ. ಭಾಗ್ಯ, ಪಕ್ಷೇತರ ಅಭ್ಯರ್ಥಿ ಎಚ್.ಎನ್. ಗಿರೀಶ್ ಬಾಬು ಕಣದಲ್ಲಿದ್ದಾರೆ.
ಟ  ವಾರ್ಡ್ -26 ಕಾಂಗ್ರೆಸ್‌ನ  ಬಿ. ಪದ್ಮಿನಿ ಸಾಬಣನವರ್, ಜೆಡಿಎಸ್‌ನ ಟಿ. ನಿರ್ಮಲ ಯೋಗೇಶ್ ಅವರಿಗೆ ಪಕ್ಷೇತರ ಅಭ್ಯರ್ಥಿ ನುಸುರತ್ ಬೇಗಂ ಸ್ಪರ್ಧೆ ನೀಡಿದ್ದಾರೆ. ಮೂವರಿಗೆ ಛಾನ್ಸ್ ಇದೆ ಎನ್ನಲಾಗುತ್ತಿದೆ.  ಬಿಜೆಪಿಯ ಜಿ.ಎಸ್. ಶೇಷಮ್ಮ, ಪಕ್ಷೇತರ ಅಭ್ಯರ್ಥಿ ಎ.ಪಿ. ನಬೀಸ್ ಸಾಂಕೇತಿಕ ಸ್ಪರ್ಧೆ.
ಟ  ವಾರ್ಡ್ -27 ಜೆಡಿಎಸ್‌ನ ಎಚ್.ಎನ್. ಸುಜಾತ ಮತ್ತು ಕಾಂಗ್ರೆಸ್‌ನ ಸೀತಮ್ಮ ನಡುವೆ ನೇರ ಸ್ಪರ್ಧೆ ಇದೆ.  ಬಿಜೆಪಿ ಅಭ್ಯರ್ಥಿ ಇಲ್ಲಿಲ್ಲ. ಆರು ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ.
ಟ  ವಾರ್ಡ್ -28 ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್. ಮಹಾಂತೇಶ್ ಅವರು ಜೆಡಿಎಸ್ ಅಧಿಕೃತ ಅಭ್ಯರ್ಥಿ ಸೈಯದ್ ಅಕ್ಬರ್ ಅವರಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ. ಅಕ್ಬರ್ ನಗರಸಭೆ ಮಾಜಿ ಅಧ್ಯಕ್ಷರು.  ಬಿಜೆಪಿಯಿಂದ ಎಚ್.ಎನ್. ಮಂಜುನಾಥ್ ಹಾಗೂ ನಾಲ್ವರು ಪಕ್ಷೇತರರು ಕಣದಲ್ಲಿ ಇದ್ದಾರೆ.
ಟ  ವಾರ್ಡ್ -29 ಕಾಂಗ್ರೆಸ್‌ನ ಎಂ.ಕೆ. ರಾಜೇಶ್, ಜೆಡಿಎಸ್‌ನ ಎಚ್.ಆರ್. ಪ್ರದೀಪ್‌ಕುಮಾರ್ ನಡುವೆ ಜಿದ್ದಾ ಜಿದ್ದಿ ನಡೆದಿದೆ. ಕಾಂಗ್ರೆಸ್ ಮುಂದಿದೆ ಎನ್ನಲಾಗಿದ್ದು, ಬಿಜೆಪಿಯಿಂದ ಅಶೋಕ್ ಹಾಗೂ ಕೆಜೆಪಿಯಿಂದ ಮಂಜೇಗೌಡ ಹಾಗೂ ಐವರು ಪಕ್ಷೇತರರು ಸ್ಪರ್ಧಿಸಿದ್ದಾರೆ.
ಟ  ವಾರ್ಡ್ -30 ದಲಿತ ಮುಖಂಡ ದಿವಂಗತ ಚಂದ್ರಪ್ರಸಾದ್ ತ್ಯಾಗಿ ಅವರ ಪುತ್ರಿ ಸಿ. ಶುಭ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಅವರಿಗೆ ಕಾಂಗ್ರೆಸ್‌ನ ಎಚ್.ಸಿ. ಸರೋಜ,  ಪಕ್ಷೇತರ ಅಭ್ಯರ್ಥಿ ಯಶೋಧಮ್ಮ ಸ್ಪರ್ಧೆ ವೊಡ್ಡಿದ್ದಾರೆ.  ಬಿಜೆಪಿಯಿಂದ ಎಸ್. ಪ್ರೇಮಲತಾ ಸ್ಪರ್ಧಿಸಿದ್ದಾರೆ.
ಟ  ವಾರ್ಡ್ -31 ನಗರಸಭೆ ಮಾಜಿ ಉಪಾಧ್ಯಕ್ಷರಾದ ಶ್ರೀ ವಿದ್ಯಾ ಜೆಡಿಎಸ್ ಅಭ್ಯರ್ಥಿ. ಅವರಿಗೆ  ಕಾಂಗ್ರೆಸ್‌ನ ಶಕೀಲಬಾನು ನಿರೀಕ್ಷಿತ ಮಟ್ಟದಲ್ಲಿ ಪೈಪೋಟಿ ನೀಡುತ್ತಿಲ್ಲ.  ಕೆಜೆಪಿಯಿಂದ ಅಬೀದಾ ಬೇಗಂ, ಬಿಜೆಪಿಯಿಂದ ಲಕ್ಷ್ಮೀ ಮತ್ತು ಆರು ಮಂದಿ ಪಕ್ಷೇತರರು ಕಣದಲ್ಲಿ ಇದ್ದಾರೆ.
ಟ  ವಾರ್ಡ್ -32 ಇಲ್ಲಿ ಕಾಂಗ್ರೆಸ್‌ನ ಲಕ್ಷ್ಮೀ ಜಗದೀಶ್, ಜೆಡಿಎಸ್‌ನ ಎಚ್.ಎಸ್. ಶಂಕರ್, ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ್ ನಡುವೆ ತ್ರೀಕೋನ ಸ್ಪರ್ಧೆ ಏರ್ಪಟ್ಟಿದ್ದು,  ಬಿಜೆಪಿ, ಕೆಜೆಪಿ ಅಭ್ಯರ್ಥಿ ಇಲ್ಲ.  ಇಬ್ಬರು ಪಕ್ಷೇತರರು ಇದ್ದಾರೆ.
ಟ  ವಾರ್ಡ್-  33 ಜೆಡಿಎಸ್‌ನ ಎಂ. ಸಿ. ವಿಜಯುಕುಮಾರ್, ಕಾಂಗ್ರೆಸ್ ವೆಂಕಟೇಶ್ ಅವರು ಪಕ್ಷೇತರ ಅಭ್ಯರ್ಥಿ ಎಚ್.ಎಸ್. ದಿಲೀಪ್ ಅವರು ಎದುರಿಸಿ ಗೆಲ್ಲುವುದು ಕಷ್ಟಕರ ಎಂಬ ಪರಿಸ್ಥಿತಿ ಇದೆ. ಯಾರೇ ಗೆದ್ದರು ಅಂತರ ತೀರ ಕಡಿಮೆ ಇರುತ್ತದೆ.  ಬಿಜೆಪಿ, ಕೆಜೆಪಿ ಅಭ್ಯರ್ಥಿಗಳಲ್ಲಿ. ನಾಲ್ವರು ಪಕ್ಷೇತರರು ಇದ್ದಾರೆ.
ಟ  ವಾರ್ಡ್ -34 ನಾಲ್ಕನೇ ಬಾರಿ ನಗರಸಭೆ ಪ್ರವೇಶಿಸಲು ಜೆಡಿಎಸ್‌ನ ಸಿ.ಆರ್. ಶಂಕರ್  ಅವಿರತ ಯತ್ನ ಹಾಕುತ್ತಿದ್ದಾರೆ.  ಪಕ್ಷೇತರ ಅಭ್ಯರ್ಥಿ ಯಶೋಧಮ್ಮ ಮತ್ತು ಕಾಂಗ್ರೆಸ್‌ನ ಸಿ.ಟಿ. ರವಿ ಅವರು ಶಂಕರ್ ಸುಲಭದ ಗೆಲುವಿಗೆ ಕಡಿವಾಣ ಹಾಕಿದ್ದಾರೆ. ಹಾಗಾಗಿ ನಗರಸಭೆ ಮಾಜಿ ಅಧ್ಯಕ್ಷ ಶಂಕರ್ ಗೆಲುವಿಗೆ ತೀವ್ರ ಶ್ರಮ ಹಾಕಲೇಬೇಕಾದ ಪರಿಸ್ಥಿತಿ ಇದೆ.
ಟ  ವಾರ್ಡ್ -35 ಕಾಂಗ್ರೆಸ್‌ನ ಸಾವಿತ್ರಮ್ಮ ಮತ್ತು ಜೆಡಿಎಸ್‌ನ ಹೇಮಾವತಿ ಅನಂತ್ ಅವರ ನಡುವೆ ನೇರ ಸ್ಪರ್ಧೆ ಇದೆ ಎಂದು ಹೇಳಲಾಗುತ್ತಿದ್ದರೂ ಬಿಜೆಪಿಯ ಶಾಂತಮ್ಮ ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಎಂ. ಬೇಬಿ ಸ್ಪರ್ಧೆವೊಡ್ದಿದಾರೆ. ಇವರಿಬ್ಬರು ಯಾರ ಮತಗಳನ್ನು ಹೆಚ್ಚು ಪಡೆಯುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ , ಜೆಡಿಎಸ್ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಸಾವಿತ್ರಮ್ಮ ಮುಂದೆ ಇದ್ದಾರೆ. ಕೆಜೆಪಿಯಿಂದ ರಾಧ ನಿಂತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ